ಶಿಕಾರಿಪುರದಲ್ಲಿ ಕಠಿಣ ನಿಯಮ ಜಾರಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಡಿವೈಎಸ್ ಪಿ ಶಿವಾನಂದ : ವಾಹನಗಳ ಜಪ್ತಿ..!

ಶಿಕಾರಿಪುರದಲ್ಲಿ ಕಠಿಣ ನಿಯಮ ಜಾರಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಡಿವೈಎಸ್ ಪಿ ಶಿವಾನಂದ : ವಾಹನಗಳ ಜಪ್ತಿ..!

ಶಿಕಾರಿಪುರ : ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಮಾದರಿ ಕಠಿಣ ನಿಯಮ ಜಾರಿಯಲ್ಲಿದೆ ರೂಲ್ಸ್ ಜಾರಿಯಾಗಿದ್ದು,

ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸುತ್ತಿದ್ದು ಸರ್ಕಾರದ ಆದೇಶದಂತೆ ಎರಡನೇ ಬಾರಿಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದ್ದು, ಅದರಂತೆ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಡಿವೈಎಸ್ ಪಿ ಶಿವಾನಂದ ,ಪಿಎಸ್ ಐ ರಾಜುರೆಡ್ಡಿ ಅವರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಅನಾವಶ್ಯಕವಾಗಿ ತಿರುಗುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು.

ಪಟ್ಟಣ ಪ್ರಮುಖ ವೃತ್ತದಲ್ಲಿ ಪೋಲಿಸರ ಕಣ್ಗಾವಲು ಇದ್ದು ಶೇ.95% ಜನರು ನಿಯಮವನ್ನು ಪಾಲಿಸುತ್ತಿದ್ದು ಅನಗತ್ಯವಾಗಿ ಬಂದ ಬೈಕ್ ಗಳಿಗೆ ದಂಡವನ್ನು ವಿಧಿಸಿದ್ದಾರೆ.

ಇನ್ನು ಕೆಲವರು ಔಷಧ, ಹಾಲು ಆಸ್ಪತ್ರೆಯ ನೆಪದಲ್ಲಿ ಓಡಾಡುತ್ತಿದ್ದವರಿಗೂ ಕಡಿವಾಣ ಬಿದ್ದಿದೆ ಪಟ್ಟಣದ ಜನತೆ ತರಕಾರಿ, ಹಣ್ಣು, ಹಾಲು ಕೊಳ್ಳಲು ನಡೆದುಕೊಂಡು ಹೋಗುತ್ತಿದ್ದ ದೃಶ್ಯವೂ ಕಂಡುಬಂದಿತು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!