ಸಂಕಷ್ಟದಲ್ಲಿ ಕೈ ಹಿಡಿವ ಸತ್ಯಗಳು…!

ಸಂಕಷ್ಟದಲ್ಲಿ ಕೈ ಹಿಡಿವ ಸತ್ಯಗಳು…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಸಂಕಷ್ಟದಲ್ಲಿ ಕೈ ಹಿಡಿವ ಕೆಲ ಸತ್ಯಗಳು

ಸತ್ಯ 1)ಅಸ್ತಮಾ ರೋಗಿಯನ್ನೊಮ್ಮೆ ನೆನೆಸಿಕೊಳ್ಳಿ

ಶ್ವಾಸಕೋಶ ಕೆಲಸವನ್ನೇ ಮಾಡುತ್ತಿಲ್ಲ ಎನ್ನುವಂತೆ ಒದ್ದಾಡುವ ಈ ರೋಗಿಯನ್ನೊಮ್ಮೆ ನೆನಪಿಸಿಕೊಳ್ಳಿ. ಜೀವನದಲ್ಲೇ ಅಸ್ತಮಾದಂತಹ ಕಾಯಿಲೆ ಯಾರಿಗೂ ಬರಬಾರದೆಂದು ಹರಸುತ್ತೇವೆ.

ನಾವು ಕಂಡಂತೆ ಮತ್ತು ನಿಮಗೂ ತಿಳಿದಂತೆ “ಅಸ್ತಮಾ ರೋಗಿಯು ಎಣ್ಣೆ ತಿಂಡಿಗಳನ್ನು ತಿಂದಿದ್ದರೆ” ಅಂದು ಸಂಜೆ ಅಥವಾ ರಾತ್ರಿ ಅಸ್ತಮಾ ಅಟ್ಯಾಕ್ ಆಗಿಯೇ ತೀರುತ್ತದೆ.

ಹೋಲಿಸಿನೋಡಿ, ಎರಡೂ ಕಾಯಿಲೆಗಳ ಲಕ್ಷಣ ಉಸಿರಾಟದ ತೊಂದರೆ ಹೌದಲ್ಲವೇ?
ಕೊರೋನಾ ಸೋಂಕಿನಲ್ಲಿ ಬರುವ ಉಸಿರಾಟದ ತೊಂದರೆ ಬರಬಾರದೆಂದರೆ-
“ದೋಸೆ, ಪಡ್ಡು ಪೂರಿ, ಬಜ್ಜಿ, ಬೋಂಡಾ, ಅವಲಕ್ಕಿ, ಮಂಡಕ್ಕಿ ವಗ್ಗರಣೆ, ಚಿತ್ರಾನ್ನಗಳಂತಹ ವಗ್ಗರಣೆಯನ್ನು ಮೇಲಿನಿಂದ ಕಲಸಿದ” ಪದಾರ್ಥಗಳನ್ನು ಮತ್ತು “ಮಾಂಸ-ಮೀನುಗಳನ್ನು” ಸೇವಿಸಬೇಕೇ? ಬೇಡವೇ?
ಏನಾಗುತ್ತದೆ?
ಉಸಿರ್ನಾಳ ಊದಿಕೊಂಡು ದುರ್ಬಲಗೊಳ್ಳುತ್ತದೆ.
ಸೋಂಕು ಸುಲಭವಾಗಿ ಬೇರೂರುತ್ತದೆ.

ತಿನ್ನುವ ಚಪಲ ನಮ್ಮನ್ನು ಹಾಳು ಮಾಡಿಕೊಳ್ಳುವಷ್ಟು ಕೆಟ್ಟದ್ದಾಗಿ ಇರಬಾರದಲ್ಲವೇ?
ಯಾಕಿಂತಹ ಹುಚ್ಚು ನಡವಳಿಕೆ?

ನೆನಪಿಡಿ,
ಸೋಂಕಿತನ ಸಂಪರ್ಕದಿಂದ ಸೊಂಕು ಬರುವುದಿಲ್ಲ, ನಮ್ಮೊಳಗೆ ಅದಕ್ಕೆ ಅವಕಾಶ ಇದ್ದರೆ ಸೋಂಕು ಬರುತ್ತದೆ. ಇಲ್ಲದಿದ್ದರೆ ಇಲ್ಲ.

ಸತ್ಯ 2)
ಇಮ್ಯೂನಿಟಿ ರಾತೋರಾತ್ರಿ ಬರುವಂತಹುದೇ?

“ಕೊರೋನಾ ಬರಬಾರದೆಂದರೆ ಇಮ್ಯೂನಿಟಿ ಇರಬೇಕು” ನಿಜ ಹಾಗೆಂದು ಅದನ್ನು ರಾತೋರಾತ್ರಿ ತಂದುಕೊಳ್ಳಲು ಬಯಸಿ ಸಾವಿಗೆ ಹತ್ತಿರ ಆಗುತ್ತಿರುವೆವು ಅಷ್ಟೆ.

ಪ್ರೋಟೀನ್ ಗಳಿಂದಲೇ ಇಮ್ಯುನೋಗ್ಲೊಬಿಲಿನ್ ಗಳು ಬರುತ್ತವೆ ನಿಜ, ಇದು ಅತ್ಯಲ್ಪ ಸತ್ಯ. ಇದನ್ನು ನಂಬಿ ಹೆಚ್ಚು ಹೆಚ್ಚು ಪ್ರೊಟೀನ್ ಸೇವನೆ ಮಾಡಿದಿರೆಂದರೆ ಕಥೆ ಮುಗಿಯಿತು.

ಏನಾಗುತ್ತದೆ?
ಈ ಸಮಯದಲ್ಲಿ ಗ್ಯಾಸ್ ಉಂಟುಮಾಡುವ ಬೇಳೆಕಾಳುಗಳಿಂದ ತಯಾರಿಸಿದ ಪದಾರ್ಥಗಳು ಜೀರ್ಣಕ್ರಿಯೆಗೆ ಸಹಕಾರ ಕೋರಿ ನಮ್ಮ ಯಕೃತ್ ಅನ್ನು ಒತ್ತಡಕ್ಕೆ ನೂಕುತ್ತವೆ. ಈ ಒತ್ತಡ ಮಜ್ಜೆಯ ವರೆಗೂ ತಲುಪುತ್ತದೆ.

ಸಾವಿರಾರು ರೋಗನಿರೋಧಕ ಅಂಶಗಳ ರುವಾರಿಯಾದ ಮಜ್ಜೆ ಮತ್ತು ಯಕೃತ್ತಿನ ಕತ್ತು ಕೊಯ್ದು ಇಮ್ಯೂನಿಟಿ ಬೇಕೆಂದು ಬೇಡಿದರೆ “ಮರದ ಬೇರು ಕೊಯ್ದು ಬಲಿಕೊಟ್ಟು ಹಣ್ಣು ಕೊಡೆಂದು” ಪ್ರಾರ್ಥನೆ ಮಾಡಿದಂತೆ ಆಗುವುದಿಲ್ಲವೇ?

ಸತ್ಯ 3)
ಜ್ವರಾಹಾರ ಏನು?

ಸಣ್ಣ ಮಗುವೂ ಸಹ “ಜ್ವರದಲ್ಲಿ ಉಪವಾಸ ಅಥವಾ ಅಲ್ಪಾಹಾರ” ಸೇವಿಸುತ್ತದೆ.

ಕೊರೋನಾ ಮರೆತುಬಿಡಿ, ಹಿಂದೆ “ಜ್ವರ ಬಂದಾಗ ಏನು ಆಹಾರ ಸೇವಿಸುತ್ತಿದ್ದೆವು”?
ಕಾಳು, ಬೇಳೆ, ಮೀನು, ಮೊಟ್ಟೆ, ಮಾಂಸಗಳೋ ಅಥವಾ ಬಿಸಿ-ಬಿಸಿ ಗಂಜಿಯೋ?

ತಕ್ಷಣ ಶಕ್ತಿ ಬರಲು ಸ್ವಲ್ಪ ಸಕ್ಕರೆ ಹಾಗೆಯೇ ಶರೀರ ಬೆವರುವ ಕಾರಣ ಖನಿಜಗಳು ಕ್ಷೀಣವಾಗಬಾರದೆಂದು
ಸ್ವಲ್ಪ ಉಪ್ಪು (ಖಂಡಿತಾ ORS ಅಲ್ಲ) ಸೇರಿಸಿದ ಬಿಸಿ ಬಿಸಿ ಗಂಜಿ ಕುಡಿಯುತ್ತಿದ್ದುದು ಮರೆತೇ ಹೋಯ್ತೆ?

ಅರ್ಧಂಬರ್ಧ ಸತ್ಯ ಹೇಳುವ ಆಧುನಿಕ ವೈದ್ಯರ ಮಾತನ್ನು ನಂಬಿ ನರಕ ಅನುಭವಿಸುವುದು ನ್ಯಾಯವೇ?

ಸುಮ್ಮನೇ ಬಿಸಿ-ಬಿಸಿ ಗಂಜಿಯನ್ನೋ ಮೆತ್ತನೆಯ ಅನ್ನವನ್ನೋ ಸೇವಿಸಿದರೆ, ನಾಲ್ಕು ದಿನಗಳಲ್ಲಿ ಬಲ ಬಂದು ಸಹಜ ಬಾಳು ಬಾಳುವಿರಿ.

ಅಧಿಕಾಹಾರ ಸೇವನೆ ಮಾಡುವ ರೂಢಿ ಇದ್ದವರು ತಪ್ಪದೇ ಶಾರೀರಿಕ ವ್ಯಾಯಾಮ ಮಾಡಿ ತಿಂದದ್ದನ್ನು ಕರಗಿಸಿಬಿಡಿ.‌ ಇಲ್ಲದಿದ್ದರೆ ಅಪಾಯ ಖಂಡಿತ.

ಸತ್ಯ 4)
ಕಷಾಯ ಪ್ರಾರಂಭಿಸಲು ಕೊರೋನಾ ಬರಲೆಂದು ಕಾಯಬೇಕೇ?

ಎಷ್ಟೋ ಜನ ಮಾಡುತ್ತಿರುವ ತಪ್ಪುಗಳೆಂದರೆ, ಬೆಂಕಿ ಬೀಳುವ ಮೊದಲೇ ಬಾವಿ ತೋಡುವುದೇಕೆ? ಎಂಬಂತೆ ವರ್ತಿಸುತ್ತಿದ್ದಾರೆ.
ಮನೆಯಲ್ಲಿ ಕಷಾಯ ಪುಡಿ ಇತ್ತು ಆದರೆ “ಕಷಾಯ ಕುಡಿಯೋಕೆ ಕೊರೋನಾ ಬಂದಿದೆಯೇ?” ಎಂಬಂತೆ ವರ್ತಿಸಿ ಅನಾಹುತ ಮಾಡಿಕೊಂಡಿದ್ದಾರೆ, ಈ ಬಗ್ಗೆ ಸುತ್ತಲಿನವರನ್ನು, ಪರಿಚಿತರನ್ನು ಕೇಳಿನೋಡಿ.
“ಇವ ಕಷಾಯ ಬಿಟ್ಟಿದ್ದ ಮಾರಾಯ, ನಮ್ಮನೇಲಿ ಆರು ಜನ ಇದ್ದೇವೆ ಇವನೊಬ್ಬಂಗೆ ಮಾತ್ರ ರೋಗ ಬಂದದ್ದು” ಎನ್ನುವ ಸಾವಿರ ಕುಟುಂಬಗಳು ಸಿಗುತ್ತವೆ.

ಕಷಾಯದ ಕೆಲಸವನ್ನು ಸಾಕಷ್ಟು ಬಾರಿ ಹೇಳಿಯಾಗಿದೆ.
“ಕಷಾಯ ಬಳಸಿ ಆಗಬಹುದಾದ ನಷ್ಟದಿಂದ ತಪ್ಪಿಸಿಕೊಳ್ಳಿ” ಎಂದಷ್ಟೇ ಹೇಳಬಹುದು.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ.

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!