ಸೋಂಕು ತಗುಲುತ್ತಿರುವುದು ಯಾರಿಗೆ? ಅದು ದೊಡ್ಡದಾಗಿ ಬೆಳೆಯುತ್ತಿರುವುದು ಏಕೆ?

ಸೋಂಕು ತಗುಲುತ್ತಿರುವುದು ಯಾರಿಗೆ? ಅದು ದೊಡ್ಡದಾಗಿ ಬೆಳೆಯುತ್ತಿರುವುದು ಏಕೆ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ

ಆಯುರ್ವೇದ ಸಂಚಿಕೆ:

📝 ವಿಷಯ:
ಸೋಂಕು ತಗುಲುತ್ತಿರುವುದು ಯಾರಿಗೆ? ಅದು ದೊಡ್ಡದಾಗಿ ಬೆಳೆಯುತ್ತಿರುವುದು ಏಕೆ?

• ವೈರಾಣು ಶರೀರದೊಳಗೆ ಪ್ರವೇಶಿಸಲೂ…
• ಅಲ್ಲಿ ಉಳಿದುಕೊಳ್ಳಲೂ…
ಮತ್ತು
• ಅಲ್ಲಿ ಬಲ ಪಡೆದು ವೃದ್ಧಿಯಾಗಲೂ…

ಬೆಂಬಲಿಸುವ ಅಂಶಗಳನ್ನು ನಮ್ಮೊಳಗೆ ಇಲ್ಲವಾಗಿಸಿಕೊಳ್ಳುವುದು, ಅವುಗಳನ್ನು ಪರೋಕ್ಷವಾಗಿ ಹತೋಟಿಗೆ ತರಲು ಬಳಸುವ ಅಪಾಯಕಾರಿ ಔಷಧ ಸೇವನೆಗಿಂತಲೂ ಶ್ರೇಷ್ಠತಮ ವಿಧಾನ ಅಲ್ಲವೇ?

ಸೋಂಕು ತಗುಲುತ್ತಿರುವುದು ಯಾರಿಗೆ?
ಯಾರ ಶರೀರದಲ್ಲಿ ಸೋಂಕಿಗೆ ಯಥೇಚ್ಛವಾಗಿ ಫ್ರೀ ಆಹಾರ ದೊರೆಯುತ್ತಿದೆಯೋ ಅವರಿಗೆ ಮಾತ್ರ ಸೋಂಕು, ಇಲ್ಲದಿದ್ದರೆ ಖಂಡಿತಾ ಇಲ್ಲ.

ದುರ್ಬಲನಲ್ಲದ, ನಿತ್ಯವೂ ಶಾರೀರಿಕ ಶ್ರಮ ಮಾಡುತ್ತಿರುವ ನಿಜವಾದ ರೈತನಿಗೆ ಎಲ್ಲಿಯಾದರೂ ಸೋಂಕು ತಗುಲಿರುವುದು ಕಂಡುಬಂದಿದೆಯೇ?

ಹಾಗಾಗಿ,
ಶಾರೀರಿಕ ಶ್ರಮದ ಕೆಲಸ ಮಾಡಿ ಅಥವಾ ಶ್ರಮದಷ್ಟೇ ಪ್ರಮಾಣದ ಆಹಾರ ಸೇವಿಸಿ.
•••••

ಶರೀರದಲ್ಲಿ ಸೋಂಕು ದೊಡ್ಡದಾಗಿ ಬೆಳೆಯುತ್ತಿರುವುದು ಏಕೆ?

ಖಂಡಿತವಾಗಿಯೂ ಹೇಳಬಹುದು, “ಸೋಂಕಿಗೆ ಅತ್ಯುತ್ತಮ ಆಹಾರ ಕೊಡುವುದು ಮತ್ತು ತೀಕ್ಷ್ಣ ಔಷಧಗಳಿಂದ ಜೀವರಕ್ಷಕ ಅವಯವಗಳನ್ನು ಹಾಳುಮಾಡಿಕೊಳ್ಳುತ್ತಿರುವುದರಿಂದ”!!

ಸೋಂಕುವರ್ಧಕ ಆಹಾರ ಯಾವುದು?
ಉತ್ತರ:
ಕಫ ಹೆಚ್ಚುವ ಅಥವಾ ಕಫಕರಗದ ಆಹಾರವೇ ಸೋಂಕು ವೃದ್ಧಿಯಾಗಲು ಕಾರಣ.
ಉದಾಹರಣೆಗೆ: ಮೊಸರು, ಹುಳಿ ಮಜ್ಜಿಗೆ, ಎಲ್ಲಾ ಸಿಹಿ ಪದಾರ್ಥಗಳು, ಎಣ್ಣೆಯಲ್ಲಿ/ತುಪ್ಪದಲ್ಲಿಯಾಗಲೀ ಕರಿದ ಪದಾರ್ಥಗಳು.

ಸೋಂಕು ಅಪಾಯಕಾರೀ ಹಂತ ತಲುಪುವ ಆಹಾರಗಳು:
ನಮ್ಮ ಆಹಾರದ ಚಯ-ಅಪಚಯ ಕ್ರಿಯೆಗಳು(ಅನಬಾಲಿಸಮ್-ಕೆಟಬಾಲಿಸಮ್ – ಮೆಟಬಾಲಿಸಮ್) ನಡೆಯಲು‌ ಆಮ್ಲಜನಕ ಬೇಕೇ ಬೇಕು. ಹೆಚ್ಚು ಶಕ್ತಿಯುತ ಆಹಾರಗಳ ಚಯಾಪಚಯ ಕ್ರಿಯೆಗೆ ಹೆಚ್ಚು ಆಮ್ಲಜನಕ ಬೇಕು. ಇದನ್ನು ಪೂರೈಸಲು ಪುಪ್ಫುಸಗಳು ಜೋರಾಗಿ ಕೆಲಸ ಮಾಡಬೇಕು, ಹೀಗೆ ಸೋಂಕು ಉಂಟಾದ ಸ್ಥಳಕ್ಕೆ ಹೆಚ್ಚಿನ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುವುದು ಅಪಾಯಕಾರೀ ಹಂತವಲ್ಲದೇ ಮತ್ತೇನು?

ಉದಾಹರಣೆಗೆ:
ಮಾಂಸ, ಮೊಟ್ಟೆ, ಬೇಳೆಕಾಳುಗಳು, ಮೊಳಕೆ ಧಾನ್ಯಗಳು, ಪ್ರೋಟೀನ್ ಪೌಡರ್ ಗಳು ಮುಂತಾದವುಗಳು.

ಹಾಗಾದರೆ, ಏನು ಆಹಾರ ಸೂಕ್ತ?:
ವ್ಯಕ್ತಿ ಸೋಂಕುಮುಕ್ತನಾಗುವತನಕ ಸುಲಭವಾಗಿ ಜೀರ್ಣಗೊಂಡು ಶಕ್ತಿ ಕೊಡುವಂತಹ ಆಹಾರ ಸಾಕು, ನಮ್ಮ ಜೀವಕೋಶಗಳು ಬದುಕುಳಿಯಲು ಬೇಕಾಗುವಷ್ಟು ಆಹಾರ ಸಾಕು.
ರೋಗದ ಸಮಯದಲ್ಲಿ ತಿನ್ನುವ ಸಶಕ್ತ ಆಹಾರಗಳು ಸೋಂಕನ್ನು ಪೋಷಿಸುತ್ತವೆ.
ಕಳೆ ತೆಗೆಯದೇ ಬೆಳೆಗೆ ನೀರು ಗೊಬ್ಬರ ಉಣಿಸಿದರೆ ಬೆಳೆಯುವುದು ಕಳೆಯೋ ಬೆಳೆಯೋ?
ಬಳಸಬಹುದಾದ ಆಹಾರ:
ಮೆತ್ತಗೆ ಬೇಯಿಸಿದ ಅನ್ನ ಮತ್ತು ತರಕಾರಿಗಳಿಂದ ತಯಾರಿಸಿದ ಸಂಬಾರು.
ಅಕ್ಕಿ ಮತ್ತು ತರಕಾರಿಗಳಲ್ಲಿ ಜೀವಕೋಶಗಳಿಗೆ ಬೇಕಾದ ಸೂಕ್ಷ್ಮ ಪೋಷಕಾಂಶಗಳು ಸುಲಭವಾಗಿ ಬಿಡುಗಡೆಯಾಗಿ ಶಕ್ತಿಕೊಡುತ್ತವೆ.
ಗಮನಿಸಿ: ಅಕ್ಕಿಯನ್ನು ನೀರಿನಲ್ಲಿ ಬೇಯಿಸಬೇಕೇ ಹೊರತು ಎಣ್ಣೆ ಕಲಸಿ ಫ್ರೈಡ್ ರೈಸ್ ಮಾಡಿ ತಿಂದರೆ ರಿಪೇರಿ ಆಗುವುದು ಕಷ್ಟಸಾಧ್ಯ ಅಥವಾ ಅಸಾಧ್ಯ.
•••••••

ಔಷಧಿಗಳು ಏನು ಮಾಡುತ್ತಿವೆ?
ಇವು ಕೃತಕ, ನಿರ್ಜೀವ ಯಂತ್ರಗಳಂತೆ ನಮ್ಮ ಜೀವ ಸಂರಕ್ಷಕ ಅವಯವಗಳಾದ
ಯಕೃತ್, ಹೃದಯ, ಕಿಡ್ನಿಗಳ ಹಂಗನ್ನೂ ನೋಡದೇ ವೈರಾಣುಗಳನ್ನು ಪರೋಕ್ಷವಾಗಿ ಕಿತ್ತು ಬಿಸುಡಲು ನೋಡುತ್ತವೆ.
ತತ್ಪರಿಣಾಮವಾಗಿ ವ್ಯಕ್ತಿ ಪ್ರಾಣಸಂರಕ್ಷಕ ಅವಯವಗಳನ್ನು ಹಾಳುಮಾಡಿಕೊಂಡು ಸೋಂಕಿಗಿಂತ ಹೆಚ್ಚು ತೊಂದರೆಯನ್ನು ಔಷಧಗಳಿಂದ ಅನುಭವಿಸುತ್ತಿದ್ದಾನೆ.

ಉದಾಹರಣೆಗೆ: ಸೋರುವ ಮೂಗನ್ನು ನಿಲ್ಲಿಸಲು ಬಳಸುವ ಸಿಟ್ರಿಝೈನ್ ನಿಂದ ಅದೆಷ್ಟು ಅಪಾಯ ಬರುತ್ತದೆ ಎಂಬ ಸಣ್ಣ ಯೋಚನೆಯನ್ನೂ ಮಾಡದೇ ಕೊಡುತ್ತಿದ್ದಾರೆ!? ಯಾರ ಅನುಭವವನ್ನು ಕೇಳಿದರೂ ಅದು ಸೋರುವ ದ್ರವವನ್ನು ಗಟ್ಟಿಮಾಡಿ ನಿಲ್ಲಿಸಿ, ಪುಪ್ಪುಸಗಳ ಒಳಗೆ ಶೇಖರಿಸುತ್ತದೆ, ಅಲ್ಲವೇ. ಇದೇ ಕಫ ಸೋಂಕಿಗೆ ಆಶ್ರಯವನ್ನೂ ಮತ್ತು ಆಮ್ಲಜನಕದ ಕೊರತೆಯನ್ನೂ ಉಂಟುಮಾಡುತ್ತಿರುವುದು ಸತ್ಯವೋ ಅಲ್ಲವೋ?!!

ಆಯುರ್ವೇದ ಔಷಧಿಗಳ ಕಾರ್ಯ ಏನು?
• ಸೋಂಕು ಬೆಳೆಯಲು ಬೇಕಾದ ಆಹಾರವನ್ನು ಬೇಗ ಬೇಗ ಜೀರ್ಣಿಸಿ ಇಲ್ಲವಾಗುವಂತೆ ಮಾಡುತ್ತವೆ.
• ಅವಯವಗಳನ್ನು ಸೋಂಕಿನಿಂದ ರಕ್ಷಿಸುತ್ತವೆ.
• ಸೋಂಕಿಗೆ ಬಲಕೊಡುವ ದುಷ್ಟವಾತ ದೋಷವನ್ನು ಅನುಲೋಮನ ಗೊಳಿಸುತ್ತವೆ.

ಇದರ ಆಧಾರದ ಮೇಲೆಯೇ ಅಥರ್ವ ಸಂಸ್ಥೆ Viropyrine, Ayurlung ಎಂಬ ಕಷಾಯ ಪುಡಿಗಳನ್ನು ಚಿಕಿತ್ಸೆಯಲ್ಲಿ ಬಳಸುತ್ತಿದೆ. ಅದರ ಪರಿಣಾಮವನ್ನು ತಾವೆಲ್ಲಾ ಗಮನಿಸುತ್ತಿರುವಿರಿ.

ಟೆಲಿಗ್ರಾಂ ನಲ್ಲಿರುವ “ಆಸ್ಪತ್ರೆ ರಹಿತ ಜೀವನ” ಗುಂಪಿನಲ್ಲಿ ಬಳಕೆದಾರರ ಅನಿಸಿಕೆಗಳನ್ನು ಪ್ರಕಟಿಸಲಾಗಿದ.

ತಮ್ಮ ವಿಶೇಷ ಗಮನಕ್ಕೆ:
ಈ ಫಲಿತಾಂಶಗಳನ್ನು ಕೇವಲ ಔಷಧಿ ಪ್ರಯೋಗಗಳಿಂದ ನಿರೀಕ್ಷಿಸದೇ ಕೆಳಗಿನ ಆಹಾರ ನಿಯಮಗಳನ್ನು ಪಾಲಿಸಿ ಆಹಾರ ವಿಷ ಶರೀರವನ್ನು ಸೇರದಂತೆ ನೋಡಿಕೊಳ್ಳಬೇಕೆಂದು ಆಯುರ್ವೇದ ಹೇಳುತ್ತದೆ.

★ ನಿತ್ಯ ಶಾರೀರಿಕ ವ್ಯಾಯಾಮ.
ಮಾಡುವುದು.

★ ಶಾರೀರಿಕ ಶ್ರಮಕ್ಕೆ ತಕ್ಕ ಪ್ರಮಾಣದ ಆಹಾರವನ್ನು ಮಾತ್ರ ಸೇವಿಸುವುದು.

★ ನೀರಿನಲ್ಲಿ ಬೇಯಿಸಿದ ಸುಲಭವಾಗಿ ಶರೀರವಾಗಿ ಮಾರ್ಪಾಡಾಗುವ ಆಹಾರ ಸೇವನೆ ಮಾಡುವುದು ಮತ್ತು
★ ಸುಖವಾದ ನಿದ್ದೆ

ಆತ್ಮೀಯರೇ,
Viropyrine & Ayurlung powders ಗಳ ಬಗ್ಗೆ ಮಾಹಿತಿ ಮತ್ತು
ಹೆಚ್ಚಿನ ಸಹಕಾರ ಬೇಕೇ:
9148702645

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!