ಓಜಸ್ಸನ್ನು (ಬಲ, ರೋಗನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

ಓಜಸ್ಸನ್ನು (ಬಲ, ರೋಗನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಓಜಸ್ಸನ್ನು (ಬಲ, ರೋಗನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

• ಸಹಜ ಓಜಸ್ಸು
• ಕಾಲಕೃತ ಓಜಸ್ಸು
• ಆಹಾರ-ಔಷಧ ಪ್ರಯೋಗ ಸಿದ್ಧ ಓಜಸ್ಸು

★ ಸಹಜ ಓಜಸ್ಸನ್ನು ಪಡೆಯುವುದು.

  1. ಓಜ ಕ್ಷಯದ ಕಾರಣಗಳನ್ನು ತಡೆಯುವುದು.
  2. ಓಜೋವರ್ಧಕ ವಿಧಿ ವಿಧಾನಗಳನ್ನು ಪಾಲಿಸುವುದು…

❄️ ಓಜ ಕ್ಷಯಕ್ಕೆ ಕಾರಣ.

🔺 ಓಜಃ ಕ್ಷೀಯತ…… ಶ್ರಮಾಧಿಭಿಃ…
-ಅಷ್ಟಾಂಗ ಹೃದಯ

• ಕೋಪ
• ಹಸಿವನ್ನು ತಡೆಯುವುದು
• ಚಿಂತೆ ಮಾಡುವುದು
• ಶೋಕ ( ದುಃಖ)
• ಅತಿಸಾಹಸ
• ಭ್ರಮ (ತಲೆಸುತ್ತು)ಇರುವಾಗ ಖಾರ-ಒಗರು-ಶುಷ್ಕ ಪದಾರ್ಥಗಳನ್ನು ಸೇವಿಸುವುದು.
• ನಿದ್ದಗೆಡುವುದು ಮುಂತಾದವು…..

😡 ಕೋಪ:
“ಕ್ರೋಧಾತ್ ಪಿತ್ತಂ….” ಅಂದರೆ, ಕೋಪದಿಂದ ಶರೀರದ ಉಷ್ಣವು ವೃದ್ಧಿಯಾಗಿ, ಧಾತುಗಳು ಬೆಂದು ಹೋಗಿ (ಮೆದುವಾಗಿ) ತಮ್ಮ ಸೌಮ್ಯ ಭಾವವನ್ನೂ, ತತ್ಸಂಬಂಧಿ ತೇಜಸ್ಸನ್ನು ಕಳೆದುಕೊಂಡು ಓಜೋ ಕ್ಷಯಕ್ಕೆ ಕಾರಣವಾಗುತ್ತದೆ.
ಈ ಹಂತದಲ್ಲಿ ಧಾತುಗಳು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತವೆ.

“ಸದೃಢಶರೀರ ಮತ್ತು ಪ್ರಶಾಂತ ಮನಸ್ಸಿನಿಂದ ಮಾತ್ರ ಸಹಜವಾದ ಓಜಸ್ಸು ಬರುತ್ತದೆ”💯

” ಸಹಜಂ ಯತ್ ಶರೀರ ಸತ್ವಯೊಃ…”
ಇದು ಯಾವ ಕಾಲದಲ್ಲೂ ಸಹಜವಾಗಿ ಇರುವ ರೋಗ ನಿರೋಧಕ ಶಕ್ತಿಯಾಗಿದೆ.

🔥 ಕ್ಷುದ್ಧಾರಣ:
ಹಸಿವು ಅಗ್ನಿ ವೃದ್ಧಿಯ ಸಂಕೇತ. ಈ ಪ್ರವೃದ್ಧ ಅಗ್ನಿಯನ್ನು ತಡೆಯುವುದರಿಂದ ಅದು ಧಾತುಗಳನ್ನು ಪಾಕಮಾಡಿ(ಬೇಯಿಸಿ) ಜೀರ್ಣಿಸುತ್ತದೆ. ವಿಪರೀತ ಕ್ಷಯಗೊಂಡ ಶರೀರದಲ್ಲಿನ ಮನಸ್ಸು ಚಾಂಚಲ್ಯಕ್ಕೊಳಗಾಗಿ ಮತ್ತೂ ಅಹಿತ ಆಚರಣೆಗಳನ್ನು ಮಾಡುವುದರಿಂದ ಓಜಸ್ಸು ಕ್ಷೀಣಿಸುತ್ತಲೇ ಸಾಗಿ ಒಂದೇ ಬಾರಿಗೆ ಅನೇಕ ರೋಗಗಳನ್ನು (ರಾಜಯಕ್ಷ್ಮ) ತರುತ್ತದೆ.

👤 “ಚಿಂತಾ – ಶೋಕ”
ಧಾತುಕ್ಷಯದ ಕಾರಣಗಳಲ್ಲಿ “ವಾತ ವೃದ್ಧಿಯು” ಒಂದು ಪ್ರಧಾನ ಕಾರಣವಾಗಿದೆ.

👉 “ಕಾಮ ಶೋಕ ಭಯಾತ್ ವಾಯುಃ…” ಅಂದರೆ ಮನಸ್ಸಿನ ಅನಿಯಂತ್ರಿತ ಇಚ್ಛೆ, ದುಃಖ, ಭಯ ಈ ಮೂರರಿಂದ ವಾತವು ನೇರವಾಗಿ ಗಂಭೀರ ಧಾತುಗಳಲ್ಲಿ ವೃದ್ಧಿಯಾಗುತ್ತದೆ(ಅಚಯ ಪ್ರಕೋಪ).
ಇದು ಧಾತುಗಳನ್ನು ಒಣಗಿಸುವುದರಿಂದ ಶೀಘ್ರದಲ್ಲಿ ಮುಪ್ಪನ್ನು ತರುತ್ತದೆ. ಈ ಹಂತವು ಸಹಜವಾಗಿ ಓಜೋ ಕ್ಷಯಕ್ಕೆ ಕಾರಣವಾಗುತ್ತದೆ.

💪 ಶ್ರಮ-ಅತಿಸಾಹಸ:
ತನ್ನ ಸಾಮಾರ್ಥ್ಯವನ್ನು ಮೀರಿ ಉಸಿರು ಬಿಗಿ ಹಿಡಿದು ತೂಕ ಎತ್ತುವುದು, ಶ್ರಮಿಕ ಕೆಲಸ ಮಾಡುವುದು ಮುಂತಾದವುಗಳಿಂದ ಪುಪ್ಪುಸಗಳ ಅತಿಸೂಕ್ಷ್ಮ ರಕ್ತನಾಳಗಳು ಒಡೆಯುವುದರಿಂದ (ಉರಃ ಕ್ಷತ) ಅಥವಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ, ಶರೀರದ ಚಯಾಪಚಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ದೊರೆಯದೆ ಜೀವಕೋಶಗಳು ಆಹಾರ, ಗಾಳಿಯಿಂದ ವಂಚಿತವಾಗುತ್ತವೆ. ಇದು ಓಜೋ ಕ್ಷಯಕ್ಕೆ ಗಂಭೀರ ಪರಿಣಾಮವಾಗಿದೆ.

👤 “ಭ್ರಮಸ್ಥಂ ಕಟ್ವಾದಿ ಸೇವನ”
ರಜೋಪಿತ್ತಾನಿಲಾಭ್ಯಾಮ್ ಭ್ರಮಃ||
ಶರೀರದಲ್ಲಿ ಉಷ್ಣತ್ವ(ಪಿತ್ತ), ಮನಸ್ಸಿನಲ್ಲಿ ರಜೋಗುಣ, ಶರೀರ-ಮನ ಎರಡರಲ್ಲೂ ವಾತ ಪ್ರಕೋಪ ಆದಂತಹ ಅವಸ್ಥೆಯಲ್ಲಿ ತಲೆಸುತ್ತು ಬರುತ್ತದೆ, ಈ ಕಾರಣಗಳನ್ನು ಮತ್ತಷ್ಟು ವರ್ಧಿಸುವ ಖಾರ, ಒಗರು, ಕ್ಷಾರ, ಒಣ ಅಥವಾ ನೀರು ಕಡಿಮೆ ಇರುವ ಆಹಾರಗಳನ್ನು ಸೇವಿಸಿದರೆ, ಶರೀರ ಮನಸ್ಸುಗಳಲ್ಲಿ ಅತಿಮಾತ್ರ ಸೌಮ್ಯ ಗುಣ ಕ್ಷಯವಾಗಿ ಓಜಸ್ಸು ಅಸ್ಥಿರವಾಗುತ್ತದೆ. ತೀವ್ರತರ ಮನೋ ಶಾರೀರಿಕ ವ್ಯಾಧಿಕ್ಷಮತ್ವ ನಶಿಸಿ ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ.

🥱 ನಿರಂತರ ನಿದ್ದೆಗೆಡುವುದು:
ರಾತ್ರಿ ಜಾಗರಣೆ ಸ್ವಭಾವತಃ ಶರೀರದ ಸಂಧುಗಳನ್ನು ಒಣಗಿಸಿಬಿಡುತ್ತದೆ. ಇದೇ ಕಾರಣದಿಂದ ನಿದ್ದೆಗೆಟ್ಟ ಮರುದಿನ ಕೈಬೆರಳುಗಳ ಸಂಧಿಗಳ ಚಲನೆಯಲ್ಲಿ ಕಷ್ಟ ಎನ್ನಿಸುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತದೆ. ಸಂಧುಗಳು ಒಣಗಿದರೆ ಅಲ್ಲಿರುವ ಸೌಮ್ಯ ದ್ರವವು ಸಾಂದ್ರತೆಯನ್ನು ಕಳೆದುಕೊಂಡು ಶರೀರದ ಸರ್ವ ಧಾತುಗಳಿಂದ ಸೌಮ್ಯಭಾವವನ್ನು ಹೀರಿ, ಒಣಗಿಸಿ, ಸಂಧಿ ಆಶ್ರಿತ ಜ್ವರದಿಂದ ನಿರಂತರವಾಗಿ ಮತ್ತು ಶೀಘ್ರವಾಗಿ ಓಜಸ್ಸನ್ನು ಕಳೆಯುತ್ತದೆ.

👉 ಪರಿಹಾರ:
ಮೇಲಿನ ಎಲ್ಲಾ ಕಾರಣಗಳನ್ನು ಕೈಬಿಡುವುದೇ ಮೊಟ್ಟ ಮೊದಲ ಮತ್ತು ಅತ್ಯುತ್ತಮ ಪರಿಹಾರ.
ಉಳಿದಂತೆ ಚಿಕಿತ್ಸೆ ಎಂದಿಗೂ ಎರಡನೇ ಸಾಲಿನ ಪರಿಹಾರ.

🍃ಎಲ್ಲವೂ ಒಳ್ಳೆಯದಾಗುತ್ತದೆ ; ಎಲ್ಲರಿಗೂ ಒಳಿತಾಗುತ್ತದೆ🍃

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!