ನಿದ್ರಾನಾಶ ಮತ್ತು ಪರಿಹಾರ…!

ನಿದ್ರಾನಾಶ ಮತ್ತು ಪರಿಹಾರ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ನಿದ್ರಾನಾಶ ಮತ್ತು ಪರಿಹಾರ.

📜 ನಿದ್ರಾಯಾ ಮೋಹಷು……ಅಂಗಮರ್ದಃ ಚ……. ಸ್ವಪ್ನಂ ಸಂವಾಹನಾನಿ ಚ |
ತಂ ಕೃತ್ವಾ ಅನು ಸುಖಂ ದೇಹ ಮರ್ದಯೇತ್ ಚ ಸಮನ್ತತಃ||
-ಅಷ್ಟಾಂಗ ಹೃದಯ

ನಿದ್ರಾನಾಶದಿಂದ ಮಹಾ ಹಾನಿ:
ಆಹಾರ ಮತ್ತು ನಿದ್ರೆ ಇವುಗಳಿಗೆ ಪರ್ಯಾಯ ವ್ಯವಸ್ಥೆ ಈ ಜಗತ್ತಿನಲ್ಲಿ ಇಲ್ಲ.

ಇವುಗಳನ್ನು ಪ್ರಮಾಣವರಿತು ಪೂರೈಕೆ ಮಾಡುವುದು ಅನಿವಾರ್ಯ.

ನಿದ್ರೆಯು ತ್ರಯೋಪಸ್ತಂಭಗಳಲ್ಲಿ ಒಂದು. ಉಪಸ್ತಂಭ ಎಂದರೆ ಊರುಗೋಲು ಅಥವಾ ಕಟ್ಟಡದ ಪಿಲ್ಲರ್, ಅದನ್ನು ರಕ್ಷಿಸದಿದ್ದರೆ ಶರೀರ ರೋಗದಿಂದಲೂ, ನಿಶ್ಯಕ್ತಿಯಿಂದಲೂ ನಾಶವಾಗುತ್ತದೆ.

ಶರೀರದ ಜೀವಕೋಶಗಳನ್ನು ಉತ್ಪತ್ತಿಮಾಡುವ ಅಂಶಗಳಿಗೆ ಸ್ರೋತಸ್ಸುಗಳು ಎನ್ನುತ್ತೇವೆ. ಇವುಗಳ ಪ್ರಾಕೃತ ಸ್ರವಿಸುವಿಕೆಯೇ ಸಹಜ ಧಾತುಗಳ ಉತ್ಪತ್ತಿ. ಅತಿಸ್ರಾವವೇ ಬೇಗ ಮುಪ್ಪುಬರುವಿಕೆ, ಅಲ್ಪ ಅಥವಾ ಅಸ್ರಾವವೇ ನಿಶ್ಯಕ್ತಿ.

ಪ್ರಾಕೃತ ಸ್ರಾವಕ್ಕೆ ಕೇವಲ ಸಮಪ್ರಮಾಣದ ಸರಿಯಾದ ಸಮಯದ ಆಹಾರ ಸಾಕಾಗದು. ವಸ್ತುವೊಂದು ತಯಾರಾಗಲು ಕೇವಲ ಕಚ್ಚಾವಸ್ತು ಸಾಲದು ಅದರ ತಯಾರಿಕಾ ವಿಧಾನ ಅತ್ಯಂತ ಮುಖ್ಯ. ‌ವಸ್ತು ತಯಾರಿಕೆಯ ಹಂತಗಳಲ್ಲಿ ಕೆಲವು ಕಡೆ ಸೆಟ್ ಆಗಲು ಅದನ್ನು ಸ್ವಲ್ಪಕಾಲ ನಿಲ್ಲಿಸಬೇಕು ಅಥವಾ ತಂಪಾಗಿಸಬೇಕು. ಆ ತಂಪಾಗಿಸುವ ಕಾಲವನ್ನು ಮರೆತರೆ ಕೈಬಿಟ್ಟರೆ ಅಥವಾ ಸೂಕ್ತ ತಾಪಮಾನಕ್ಕೆ ಇಳಿಸದಿದ್ದರೆ, ಅದುವರೆಗೂ ಸರಿಯಾದ ರೀತಿಯಲ್ಲಿ ಕ್ರಮಿಸಿದ ವಸ್ತು ಕೊನೆಯ ಹಂತದಲ್ಲಿ ವಿಕಾರಸೃಷ್ಟಿಗೆ ಕಾರಣವಾಗುತ್ತದೆ ಮತ್ತು ಅದರಿಂದ ಆ ವಸ್ತುವಿನ‌ ಮೂಲೋದ್ದೇಶ ಸಮರ್ಪಕವಾಗಿ ಈಡೇರದು. ಅದರಂತೆಯೇ ಈ ಶರೀರ ದಿನದ ಕೆಲಕಾಲ ಆಳದ ತಂಪಿಗೆ ಇಳಿದು ನಿದ್ರಿಸಿದರೆ, ಸ್ರೋತಸ್ಸುಗಳು ಸ್ರವಿಸಿದ ಅಸ್ಥಾಯಿ(ಅಸ್ಥಿರ) ಧಾತುಗಳು ಸರಿಯಾಗಿ ಸ್ಥಿರ ಧಾತುಗಳಾಗಿ ಮಾರ್ಪಡುತ್ತವೆ. ನಿದ್ದೆ ಎಷ್ಟು ಆಳವೋ ಅಷ್ಟು ಹೆಚ್ಚು ತಂಪು ಮತ್ತು ಅಷ್ಟು ಹೆಚ್ಚು ಬೇಗ ಸೆಟ್ ಆಗುತ್ತವೆ, ಧಾತುಗಳು ದೃಢವಾಗುತ್ತವೆ.

★ ಉದಾ: ಚನ್ನಾಗಿ ನಿದ್ದೆ ಮಾಡುವವನ ಶರೀರ ಸ್ಥಿರವಾಗಿಯೂ, ಅಲ್ಪ ನಿದ್ರೆಯ ಶರೀರ ಚಂಚಲವಾಗಿಯೂ ವರ್ತಿಸುತ್ತದೆ. ಕಾರಣ ಮನಸ್ಸನ್ನು ನಿಲ್ಲಿಸುವ ನಿದ್ರೆಯ ಅಭಾವ.

☸ ಮನಸ್ಸು ಕರಗಿ ಲೀನವಾದಷ್ಟೂ / ಇಲ್ಲವಾದಷ್ಟೂ ಚಂಚಲತೆ ಕಡಿಮೆ ಮತ್ತು ಸ್ಥಿರತ್ವ ಹೆಚ್ಚು.

🛌 ನಿದ್ದೆ ಮಾಡದಿದ್ದರೆ ಏನಾಗುತ್ತದೆ:
ಇವರಿಗೆ ಇನ್ಫೆಕ್ಷನ್/ ಸೋಂಕು ರೋಗಗಳು ಕಡಿಮೆ.‌ ಆದರೆ ಮೆಟಬಾಲಿಕ್ ರೋಗಗಳ, ಅಟೋಇಮ್ಯೂನ್ ರೋಗಗಳ ಸಾಧ್ಯತೆ ಅತೀ ಹೆಚ್ಚು.
ಶರೀರ ಬೇಗ ಜೀರ್ಣವಾಗಿಬಿಡುತ್ತದೆ.

🛌 ನಿದ್ರಾನಾಶಕ್ಕೆ ಪರಿಹಾರ ಏನು?
ಕೆಲ ಸೂಕ್ತ ಪರಿಹಾರಗಳನ್ನು ಆಚಾರ್ಯರು ತಿಳಿಸುತ್ತಾರೆ, ಇದು ಅತ್ಯಂತ ಯಶಸ್ವೀ ಸೂತ್ರವಾಗಿ ನಮಗೆ ಕಂಡಿದೆ,‌ ಅನೇಕರು ಪಾಲಿಸಿ ನಿದ್ರಾನಾಶದಿಂದ ಪರಿಹಾರ ಕಂಡುಕೊಂಡಿದ್ದಾರೆ.
ಇವುಗಳನ್ನು ಪಾಲಿಸಿದರೆ ಮಾತ್ರ ಪರಿಹಾರ ಮತ್ತೂ ಔಷಧಗಳ ಮೊರೆ ಹೋಗದಿರಿ.

ದಿನವಿಡೀ ಶರೀರವನ್ನು ದಣಿಸಿ.

• ರಾತ್ರಿ ಆಹಾರದ ಪ್ರಮಾಣವನ್ನು ಅರ್ಧಕ್ಕೆ (50%) ಇಳಿಸಿ.

• ರಾತ್ರಿಗೆ ಜಲಾಂಶ ಹೆಚ್ಚಿರುವ ಆಹಾರವೇ ಸೂಕ್ತ.

• ಹೆಚ್ಚು ಹೆಚ್ಚು ನೀರುಸೇವನೆ ಬೇಡ. ಬಾಯಾರಿಕೆಯಾದಷ್ಟು ಮಾತ್ರ ಸೇವಿಸಿ.
(ಸೂಕ್ಷ್ಮವಾಗಿ ಗಮನಿಸಿ: ಹೆಚ್ಚು, ಹೆಚ್ಚು ನೀರು ಕುಡಿಯುವ ಉದ್ದೇಶ ಶರೀರವು ಹೆಚ್ಚು ದ್ರವದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಅಲ್ಲವೇ)

📍 ನೆನಪಿರಲಿ ಅದು ಶರೀರದ ದ್ರವ, ಕೇವಲ ನೀರಲ್ಲ!!
ಈ ದ್ರವವನ್ನು ಶರೀರದ ಆಪ್ ಧಾತು ಎನ್ನುತ್ತಾರೆ ಆಚಾರ್ಯರು.

ಒಂದುವೇಳೆ ಅದು ಕೇವಲ ಜಲ ಮಾತ್ರವಾದಲ್ಲಿ ನಾವು ಮತಿಭ್ರಮಣೆ, ಹೃದಾಯಾಘಾತಗಳಿಂದ ಸತ್ತು ಹೋಗುತ್ತೇವೆ!!

📍 ನಮ್ಮ ಶರೀರದ ಆ ದ್ರವ ನಮ್ಮ ಜೀವಾಮೃತ. “ಆಹಾರ ಪದಾರ್ಥ ಮತ್ತು ನೀರುಗಳ ನವೀನ ಅಭಿವ್ಯಕ್ತ ಜೀವದ್ರವ್ಯ”

(ಇದನ್ನು ಮರೆತು ಲೀಟರ್ ನಲ್ಲಿ ಎಣಿಸಿ ಕೇವಲ ಜಲವನ್ನು ಸೇವಿಸಿ ಒಳಗಿರುವ ಇರುವ ಅಗ್ನಿಯನ್ನೂ ಆರಿಸಿ, ಮೇಲೆ ಆಹಾರ ತಿಂದರೆ ಅಟೋ ಇಮ್ಯೂನ್, ಮೆಟಬಾಲಿಕ್ ರೋಗಗಳು ಬರದೇ ಆರೋಗ್ಯ ಹೇಗೆ ಬಂದೀತು?)

• ರಾತ್ರಿ ಆಹಾರದ ನಂತರ 90ನಿಮಿಷ ಎಲ್ಲ ಮರೆತು ಪಿಕ್ ನಿಕ್ ಹೋಗಿರುವಾಗ ಸುಖಿಸುವಂತೆ ಲೋಕಾಭಿರಾಮವಾಗಿ ಮನೆಯ ಸದಸ್ಯರೊಂದಿಗೆ ಹರಟೆ ಹೊಡೆಯಿರಿ.

• ರಾತ್ರಿ ಊಟದ ನಂತರ, ಯಾವ ಜವಾಬ್ದಾರಿಯುತ ಚಿಂತನೆಗಳನ್ನೂ ಖಡ್ಡಾಯವಾಗಿ ಮಾಡದಿರಿ.

• ನಂತರ ಶತಪಾದ/ನೂರು ಹೆಜ್ಜೆ ನಡೆದುಬಂದು, ಮಲ ಮೂತ್ರ ಬಂದಿದ್ದರೆ ವಿಸರ್ಜಿಸಿ, ಕೈ ಕಾಲುಗಳನ್ನು ಮರ್ದಿಸಿ(ಒತ್ತಿಸಿಕೊಂಡು) ಕೊಂಡುಬಿಡಿ….ಸಾಕು.
ಸುಖವಾಗಿ ನಿದ್ದೆಗೆ ಜಾರುತ್ತೀರಿ.

🛌 ಬಹಳ ಕಾಲದ ತೊಂದರೆ ಇರುವವರಿಗೆ:
ಶಿರೋಪಿಚು ಎಂಬ ವಿಧಾನವನ್ನು ಬಳಸಿಕೊಂಡು ನಿತ್ಯವೂ ತಲೆಯನ್ನು ಸ್ನಿಗ್ಧಗೊಳಿಸಿಕೊಳ್ಳಿ ಮತ್ತು ಮೇಲಿನ ಎಲ್ಲಾ ನಿಯಮಗಳನ್ನು ಪಾಲಿಸಿ, ಅದ್ಭುತ ನಿದ್ದೆ ನಿಮ್ಮದಾಗುತ್ತದೆ.

🛌 ಪ್ರಶ್ನೆ-ಪರಿಹಾರ:
ಮಧುಮೇಹಿಗಳು ರಾತ್ರಿ ಆಹಾರ ಕಡಿಮೆ ಸೇವಿಸಿದರೆ ಸಕ್ಕರೆ ಕಡಿಮೆಯಾಗುತ್ತದೆ, ಅದು ಅಪಾಯ.
ಸರಿಯಾಗಿದೆ, ಆದರೆ ಸಕ್ಕರೆ ಕಡಿಮೆಯಾಗುವಂತೆ ಇರುತ್ತದೆ ಎಂದರೆ ರಾತ್ರಿ ಮಧುಮೇಹದ ಮಾತ್ರೆಗಳಾಗಲೀ, ಇನ್ಸುಲಿನ್ ಆಗಲೀ ಏಕೆ ಬೇಕು? ಮಧ್ಯರಾತ್ರಿ ಸಕ್ಕರೆ ಕಡಿಮೆಯಾಗುವವರು ಸಕ್ಕರೆ ಇಳಿಸುವ ಔಷಧಗಳನ್ನು ಬಿಟ್ಟು ಆಹಾರವನ್ನು ಬೇಕಷ್ಟು ಮಾತ್ರ ಸೇವಿಸಿ ಸುಮ್ಮನಿರಬಹುದಲ್ಲವೇ? ಇದರ ಸೂಕ್ತ ನಿದರ್ಶನಕ್ಕೆ ಆಯುರ್ವೇದ ವೈದ್ಯರನ್ನು ಭೇಟಿಮಾಡಿ.

🔅 ಕಿವಿಮಾತು:
ತಿಂದಷ್ಟು ಕೆಲಸಮಾಡಿ ಅಥವಾ ಕೆಲಸ ಮಾಡಿದಷ್ಟು ಮಾತ್ರ ಆಹಾರ ಸೇವಿಸಿ.

🌿ಆರೋಗ್ಯಕ್ಕಾಗಿ ಆಯುರ್ವೇದ ಅನುಸರಿಸಿ🌿

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌷🌷🌷🌷🌷🌷🌷🌷

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!