ಶಿಕಾರಿಪುರ :ರಾಷ್ಟ್ರಗೀತೆಯೊಂದಿಗೆ ಅಂತ್ಯಸಂಸ್ಕಾರ ಕಂಡ ರಾಷ್ಟ್ರದ ಪ್ರಪ್ರಥಮ ಈಸೂರು ದಂಗೆ…!

ಶಿಕಾರಿಪುರ :ರಾಷ್ಟ್ರಗೀತೆಯೊಂದಿಗೆ ಅಂತ್ಯಸಂಸ್ಕಾರ ಕಂಡ ರಾಷ್ಟ್ರದ ಪ್ರಪ್ರಥಮ ಈಸೂರು ದಂಗೆ…!

ಶಿಕಾರಿಪುರ : ಈಸೂರು ದಂಗೆ ಹೋರಿ”2013 ರಿಂದ ಇಲ್ಲಿಯವರೆಗೂ ಅದನ್ನು ಯಾರೂ ಆ ಹೋರಿಯನು ಹಿಡಿಯುವ ಮನಸ್ಸು ಮಾಡಿರಲಿಲ್ಲ !

ಕಾರಣ ಈಸೂರು ಹುತಾತ್ಮರ ಆದರ್ಶದಲ್ಲಿ ಊರಿಗೆ ಈಸೂರು ದಂಗೆ ಹೆಸರನ್ನು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಅಖಾಡಕ್ಕೆ ಬಿಡಲಾಗುತ್ತಿತ್ತು.

ಈಸೂರು ದಂಗೆ ಹೋರಿಗೆ ರಾಷ್ಟ್ರಧ್ವಜ ಹೊದಿಸಿ ಅಖಾಡಕ್ಕೆ ಬಿಡುವ ಕಾರಣ ರಾಷ್ಟ್ರೀಯ ಗೌರವಾರ್ಪಣೆ ಸಲ್ಲಿಸುವ ಪರವಾಗಿ ಯಾರೂ ಕೂಡ ಅಖಾಡದಲ್ಲಿ ಹಿಡಿಯುವ ಮನಸ್ಸು ಮಾಡುತ್ತಿರಲಿಲ್ಲ .

ಇಲ್ಲಿವರೆಗೂ ಯಾವುದಾದರು ಒಂದು ಹೋರಿಯನ್ನು ಯಾರಾದರು ಈ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಡಿಯದೇ ಬಿಟ್ಟಿದ್ದರೆ ಅದು ಏಕೈಕ ಕೋರಿ ಶಿಕಾರಿಪುರ ತಾಲೂಕಿನ ಈಸೂರು ದಂಗೆ ಯ ಹೋರಿ.

ಇಂದು ಅದು ಮೃತಪಟ್ಟ ಬಳಿಕ ಅದರ ಶವ ಸಂಸ್ಕಾರಕ್ಕೆ ರಾಜ್ಯದ ವಿವಿಧೆಡೆಯಿಂದ ಸುಮಾರು 2ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿದ್ದರು.

ಹೋರಿಯ ಮೆರವಣಿಗೆಯ ಸಂದರ್ಭ ಮನೆ ಮನೆಯ ಮುಂದೆ ರಂಗೋಲೆ, ಹೂವು ಹಣ್ಣು ಕಾಯಿ ಅರ್ಪಿಸಿ ಆರತಿ ಬೆಳಗುತ್ತಿದ್ದುದು ಸಾಮಾನ್ಯವಾಗಿತ್ತು.

ನ೦ತರ ಅಂತ್ಯಸಂಸ್ಕಾರದ ವೇಳೆ ರಾಷ್ಟ್ರಗೀತೆಯ ಮೂಲಕ ಗೌರವಾರ್ಪಣೆ ಸಲ್ಲಿಸಿ ಸಂಸ್ಕಾರ ನಡೆಸಲಾಯಿತು.

ಇಂತಹ ಗೌರವಾರ್ಪಣೆ ಪಡೆದ ಇಂಥಹಾ ಹೋರಿಯನ್ನು ಪಡೆದ ನಾನೆ ಧನ್ಯ ಎಂದು ಸ್ಮರಿಸುತ್ತಾರೆ ದ೦ತ ವೈದ್ಯ ಡಾಕ್ಟರ್ ಪ್ರಶಾಂತ್.

“ಈಸೂರು ದ೦ಗೆ ದಾಖಲೆಗಳು” 5 ಬೈಕ್ ಗಳು, 50 ಗ್ರಾಂ ಚಿನ್ನ, 7ಫ್ರಿಡ್ಜ್ 8ಟಿವಿ, 25 ಗಾಡ್ರೆಜ್ ಬೀರು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಗೌರವ ಪಡೆದಿದೆ.

ಈಸೂರು ಹೋರಿಯ ಕೊನೆಯದಾಗಿ ಸ್ಪರ್ಧಿಸಿದ್ದು ಈಸೂರಿನಲ್ಲಿ ನಂತರ ವಯೋಸಹಜವಾಗಿ ಹೋರಿ ಇಂದು ಅಂತ್ಯಸಂಸ್ಕಾರ ಕಂಡಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!