ಶಿಕಾರಿಪುರ :ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಹಿಂದೂ ಜನಜಾಗೃತಿ ಸಮಿತಿ..!

ಶಿಕಾರಿಪುರ :ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಹಿಂದೂ ಜನಜಾಗೃತಿ ಸಮಿತಿ..!

ಶಿಕಾರಿಪುರ :ದೇಶದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯು ಒಂದು ವ್ಯವಸ್ಥಿತ ಷಡ್ಯಂತ್ರ ವಾಗಿದ್ದು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಶಿಕಾರಿಪುರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರವರ ಮೂಲಕ ಕೇಂದ್ರ ಗೃಹಮಂತ್ರಿಗಳಿಗೆ ಮನವಿ ನೀಡಿದರು.

ಈ ವೇಳೆ‌ ಮಾತನಾಡಿದ ಪರಶುರಾಮ್ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಶ್ರೀರಾಮ ಜನ್ಮಭೂಮಿಯ ದೇವಸ್ಥಾನಕ್ಕಾಗಿ ನಿಧಿಸಂಗ್ರಹ ಮಾಡುವ ರಿಂಕೂ ಶರ್ಮಾ ಎಂಬ ಹೆಸರಿನ ಹಿಂದೂ ಯುವಕನನ್ನು ಮತಾಂಧ ಯುವಕರು ಚಾಕುವಿನಿಂದ ಇರಿದು ಹತ್ಯೆ ಮಾಡಿದರು.

ದೇಶದ ರಾಜಧಾನಿಯಲ್ಲಿ ಇಂತಹ ಘಟನೆಗಳು ಹಾಡುಹಗಲೇ ಘಟಿಸುತ್ತಿರುವಾಗ, ಇತರೆಡೆಗೆ ಯಾವ ಸ್ಥಿತಿ ಇರಬಹುದು, ಎಂಬ ವಿಚಾರವನ್ನೂ ಮಾಡಲು ಸಾಧ್ಯವಿಲ್ಲ.

ದೆಹಲಿಯ ಘಟನೆಯು ಮಾಸುವ ಮುನ್ನವೇ ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂದೂ ಕೃಷ್ಣಾ ಇವರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಹತ್ಯೆ ಮಾಡಿದರು.

ಈ ಹಿಂದೆ ಕರ್ನಾಟಕ ರಾಜ್ಯದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಶರತ್ ಮಡಿವಾಳ, ರುದ್ರೇಶ, ಕುಟ್ಟಪ್ಪಾ, ಪ್ರವೀಣ ಪೂಜಾರಿ ಮತ್ತು ರಾಜು ಇವರ ಹತ್ಯೆಯಾಯಿತು.

ಇವರಲ್ಲಿ ಕೆಲವು ಕೊಲೆಗಡುಕರನ್ನು ಹಿಡಿಯಲಾಗಿದೆ ಮತ್ತು ಕೆಲವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)’ನ ಮೈಸೂರಿನ ಅಬಿದ್ ಪಾಶಾ ಮತ್ತು ಅವರ ಗುಂಪು ಅರ್. ಎಸ್. ಎಸ್. ಮತ್ತು ಭಾಜಪದ 8 ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಾಗೆಯೇ ದೇಶದ ಅನೇಕ ರಾಜ್ಯಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಸಾಲು ಸಾಲು ಹತ್ಯೆಗಳಾಗಿವೆ
ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ

ಈ ರೀತಿ ಹಿಂದೂ ಮುಖಂಡರ ಹತ್ಯೆಯಾಗುವ ಪ್ರಮಾಣವು ವಿಶೇಷವಾಗಿ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಬಂಗಾಲದ ರಾಜ್ಯಗಳಲ್ಲಿ ಅತ್ಯಧಿಕವಾಗಿದೆ ಎಂದರು‌.

ಈ ಹತ್ಯೆಯ ಜ್ವಾಲೆಯು ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿಯೂ ತಲುಪಿದೆ ಮತ್ತು ಕೇವಲ ಹಿಂದುತ್ವದ ಕಾರ್ಯವನ್ನು ಮಾಡುವ ಕಾರ್ಯಕರ್ತರನ್ನು ಬೇಕೆಂದೇ ಗುರಿ ಪಡಿಸಲಾಗುತ್ತಿದೆ.

ಇದರಿಂದ ಇವು ಕೇವಲ ಹತ್ಯೆಗಳಲ್ಲದೇ ಹತ್ಯೆಗಳ ಷಡ್ಯಂತ್ರವಾಗಿದೆ.

ಇಲ್ಲಿಯವರೆಗೆ ಈ ಹತ್ಯೆಗಳ ಅಪರಾಧಿಗಳ್ಯಾರು ಎಂದು ವಿವಿಧ ತನಿಖಾ ತಂಡಗಳಿಂದ ಸ್ಷಷ್ಟವಾಗಿದ್ದರೂ ಸಂಬಂಧಿತ ರಾಜ್ಯ ಸರಕಾರಗಳಿಂದ ಈ ಪ್ರಕರಣಗಳಲ್ಲಿ ದೃಢ ಕಾರ್ಯಾಚರಣೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ.

ಈ ಹತ್ಯೆಗಳನ್ನು ತಡೆಗಟ್ಟಲು ಆಯಾರಾಜ್ಯಗಳ ಪೊಲೀಸ್ ತನಿಖೆಯಲ್ಲಿ ದುರ್ಲಕ್ಷ ಮಾಡುವುದು ಕಂಡು ಬರುತ್ತಿದೆ. ಆದ್ದರಿಂದ ಆಕ್ರಮಣಕಾರರ ಮನೋಬಲವು ಹೆಚ್ಚಾಗುತ್ತಿದೆ.

ಪೊಲೀಸರು ಮತ್ತು ಅಲ್ಲಿನ ರಾಜ್ಯ ಸರಕಾರವು ಈ ಹತ್ಯೆಗಳ ತನಿಖೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ.

ಸಂಪೂರ್ಣ ದೇಶದಲ್ಲಿ ನಡೆಯುತ್ತಿರುವ ಹಿಂದೂ ಮುಖಂಡರ ಈ ರೀತಿಯ ಹತ್ಯೆಯು ಒಂದು ವ್ಯಾಪಕ ಸುನಿಯೋಜಿತ ಷಡ್ಯಂತ್ರದ ಭಾಗವಾಗಿದೆ, ಎಂದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಎಂದರು.

ಈ ಹತ್ಯೆಗಳನ್ನು ಮಾಡುವ ಮತಾಂಧರು, ಅವರ ಮೂಲಕ ಹತ್ಯೆಗಳನ್ನು ಮಾಡಿಸುವ ಸೂತ್ರಧಾರರು ಮತ್ತು ಈ ಪ್ರಕರಣಗಳನ್ನು ಹತ್ತಿಕ್ಕಲು ಪ್ರಯತ್ನಿಸುವವರನ್ನು ಹುಡುಕಿ ಅವರ ಮೇಲೆ ಕಠಿಣ ಕಾರ್ಯಾಚರಣೆಯಾಗಲು ಈ ಪ್ರಕರಣಗಳ ಕುರಿತು ರಾಷ್ಟ್ರೀಯ ತನಿಖಾ ದಳದ ಮೂಲಕ ಆಳವಾದ ವಿಚಾರಣೆ ಮಾಡುವುದು ಅತ್ಯಾವಶ್ಯಕವಾಗಿದೆ, ಹೀಗಾಗಿ ದೇಶಾದ್ಯಂತ ನಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯ ತನಿಖೆಯನ್ನು ಕೂಡಲೇ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕು ಮತ್ತು ಈ ಹತ್ಯೆಗಳಲ್ಲಿ ಭಾಗಿಯಾಗಿರುವ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಪ್ರಕಾಶ್ ಎಂ. ಎಸ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸದಸ್ಯರಾದ ಬಿ.ವಿ. ಮಂಜುನಾಥ್, ಪುರಸಭಾ ಸದಸ್ಯರಾದ ವಿಶ್ವನಾಥ್, ಜಯಕರ್ನಾಟಕ ಸಂಘಟನೆಯ ಶಿವಯ್ಯ, ಪುಷ್ಪ, ಕಿರಣ್ ಆಚಾರ್, ಶ್ರೀಧರ್ ಮತ್ತಿತರರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!