ತ್ರಿಕ್ (ಕತ್ತು- ಬೆನ್ನು – ಸೊಂಟ) ಶೂಲೆ, ಜನರ ಸಂದೇಹಗಳು-ಪರಿಹಾರಗಳು..!

ತ್ರಿಕ್ (ಕತ್ತು- ಬೆನ್ನು – ಸೊಂಟ) ಶೂಲೆ, ಜನರ ಸಂದೇಹಗಳು-ಪರಿಹಾರಗಳು..!

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ತ್ರಿಕ್ (ಕತ್ತು- ಬೆನ್ನು – ಸೊಂಟ) ಶೂಲೆ, ಜನರ ಸಂದೇಹಗಳು-ಪರಿಹಾರಗಳು.

ಸುಮಾರು 17000+(telegram)7500+(WhatsApp) ಸದಸ್ಯರನ್ನು ಹೊಂದಿರುವ ಈ ಗುಂಪಿನಿಂದ ತ್ರಿಕ್ ಶೂಲೆಯ ಬಗ್ಗೆ ಹಲವಾರು ಪ್ರಶ್ನೆಗಳು ಬಂದಿದ್ದು ಪರಿಹಾರಗಳನ್ನು ಇಲ್ಲಿ ವಿವರಿಸಲಾಗಿದೆ.

🗣 ಎಣ್ಣೆ ಹಚ್ಚಲು ತಿಳಿಸಿದ್ದೀರಿ, ಯಾವ ಎಣ್ಣೆ ಸೂಕ್ತ?
ತಿಲ‌ತೈಲಂ‌ ಶ್ರೇಷ್ಠ…..
ಉಷ್ಣಾಂಬು ತಪ್ತಂ….
ಅಭ್ಯಂಗಂ ….ನಿತ್ಯಂ

ಆಯುರ್ವೇದದಲ್ಲಿ ಎಲ್ಲಿಯಾದರೂ ಎಣ್ಣೆ ಶಬ್ದ ಬಳಸಿದರೆ ಅದು ಎಳ್ಳೆಣ್ಣೆ ಎಂದೇ ಅರ್ಥ.‌ ಬೇರೆ ಎಣ್ಣೆ ಹೇಳುವುದಾದರೆ ಆಯಾ ಹೆಸರಿನಿಂದ ಹೇಳಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಎಳ್ಳೆಣ್ಣೆ, ದೀಪದ ಎಣ್ಣೆ ಎಲ್ಲಾ ಅತ್ಯಂತ ಕಲಬೆರಕೆ ಉಳ್ಳಂತವಾಗಿವೆ. ಶುದ್ಧ ಎಳ್ಳೆಣ್ಣೆ ಲೀ.ಗೆ ₹360.00 ಇದೆ. ನೀವೇ ಎಳ್ಳೆಣ್ಣೆ ತೆಗೆಸುವುದೊಳಿತು.‌ ಸಿಗದೆ ಇದ್ದಲ್ಲಿ ಶುದ್ಧ ಅಡುಗೆಗೆ ಬಳಸುವ ಕೊಬ್ಬರಿಎಣ್ಣೆ ಬಳಸಿ. ಎಣ್ಣೆ ಹಾಕಿದ ಬಟ್ಟಲನ್ನು ಕುದಿವ ನೀರಿನಲ್ಲಿ ಇಟ್ಟು ಬಿಸಿ ಮಾಡಿ ಬಳಸಿ, ನೇರ ಕಾಯಿಸಿದರೆ, ಎಣ್ಣೆಯಿಂದ ಹೊಗೆ ಬಂದರೆ ಅದರ ಗುಣ ಕಳೆದುಕೊಳ್ಳುತ್ತದೆ.
ಆರೋಗ್ಯವಂತರೂ ಸಹ ನಿತ್ಯವೂ ಸ್ನಾನಕ್ಕೆ ಮುನ್ನ ಎಣ್ಣೆ ಹಚ್ಚಿಕೊಳ್ಳುವುದು ಸೂಕ್ತ.

🗣 ಮೊಳಕೆಕಾಳನ್ನು ಬಳಸುವ ವಿಧಾನ ತಿಳಿಸಿ.

….ವಿರೂಢಕಮ್….ದೋಷಲಂ…..|

ಮೊದಲನೆಯದಾಗಿ ಮೊಳಕೆ ಧಾನ್ಯಗಳ ಸೇವನೆ ದೋಷಕರ.

ಆದರೂ ನಿತ್ಯ ಹೆಚ್ಚು ಶಾರೀರಿಕ‌ ಶ್ರಮದ ಕೆಲಸ ಮಾಡುವ / ಬೆವರು ಸುರಿಸಿ ದುಡಿವ ಜನರು ಆಗೊಮ್ಮೆ ಈಗೊಮ್ಮೆ ಮೊಳಕೆಕಾಳುಗಳನ್ನು ಬಳಸಬಹುದು.
ಯಾವುದೇ ಸಸ್ಯಗಳ ಹೊದಿಕೆ/ಹೊಟ್ಟು ಅಥವಾ ಪ್ರಾಣಿಗಳ ಚರ್ಮವು ಸೇವನೆಗೆ ಯೋಗ್ಯವಲ್ಲ, ಅದು ಆ ಪ್ರಾಣಿಯ/ಸಸ್ಯದ ರಕ್ಷಣಾತ್ಮಕ ಪೊರೆಯಾದ್ದರಿಂದ, ಅದು ಈ ಪ್ರಕೃತಿಯಲ್ಲಿ ಇತರ ಜೀವಿಗಳ ದಾಳಿಯಿಂದ ರಕ್ಷಿಸಿಕೊಂಡು ಬದುಕುಳಿಯಲು ಸಾಕಷ್ಟು ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತದೆ. ಆದುದರಿಂದಲೇ ಯಾವುದೇ ಕಾಳಿನ ಸಿಪ್ಪೆಯನ್ನು ಇರುವೆಗಳಾಗಲೀ, ಹುಲಿ, ಸಿಂಹಗಳು ಇತರ ಪ್ರಾಣಿಗಳ ಚರ್ಮವನ್ನಾಗಲೀ ತಿನ್ನುವುದಿಲ್ಲ.
ಆದರೆ ವಿಜ್ಞಾನವು ಎಲ್ಲ ಆಹಾರದ ಶಕ್ತಿಯನ್ನು ರಾಸಾಯನಿಕಗಳ ಆಧಾರದಲ್ಲಿ ಅಳೆಯುವುದು, ಅದು ಸರಿಯಲ್ಲ. ಯಾವುದೇ ಆಹಾರ ಪದಾರ್ಥಗಳೂ ಸ್ವತಃ ತಾವೇ ಶಕ್ತಿದಾಯಕವಲ್ಲ, ಅದನ್ನು ನಮ್ಮ ಅಗ್ನಿ ಜೀರ್ಣಿಸಿ ಒಳಗೆಳೆದುಕೊಂಡರೆ ಮಾತ್ರ ಶಕ್ತಿಕೊಡುತ್ತದೆ. ಸಿಪ್ಪೆ ಮತ್ತು ಚರ್ಮವನ್ನು ಜೀರ್ಣಿಸುವ ಶಕ್ತಿ ನಮಗೆ ಇಲ್ಲ, ಹಾಗಾಗಿ ಅದು ದೋಷಕರ. ಅಂದರೆ ತಾನು ಜೀರ್ಣವಾಗಲು ಗ್ಯಾಸ್ ಬಿಟ್ಟುಕೊಳ್ಳುತ್ತದೆ, ಅದೇ ಲಿಗಮೆಂಟ್ ಗಳನ್ನು ಒಣಗಿಸಿ ನೋವನ್ನುಂಟುಮಾಡುತ್ತದೆ.

ಬಳಸುವ ವಿಧಾನ:
ಸ್ವಲ್ಪ ಮೊಳಕೆ ಬಂದ ಕಾಳಿನ ಮೊಳಕೆ ಮತ್ತು ಸಿಪ್ಪೆಯನ್ನು ತೆಗೆದು, ಬೇಯಿಸಿ ನೀರು ತೆಗೆದು ತಿನ್ನಬಹುದು.

🗣 ತ್ರಿಕ್ ಶೂಲದಲ್ಲಿ ಸೂರ್ಯನಮಸ್ಕಾರ ಮಾಡಬಹುದೇ?
✍ ತ್ರಿಕ್ ಶೂಲ ಇರುವವರು ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಇದ್ದ ಸಂದರ್ಭದಲ್ಲಿ ಆರೋಗ್ಯವಂತರೂ ಸಹ ಯಾವುದೇ ಮುಂದೆ ಬಗ್ಗುವ ಮತ್ತು ಬಗ್ಗಿ ಭಾರ ಎತ್ತುವ ಕೆಲಸವು ನಿಶಿದ್ಧ. ಹಾಗಾಗಿ ನೋವಿನ ಸಂದರ್ಭದಲ್ಲಿ ಸೂರ್ಯ ನಮಸ್ಕಾರದ ಮುಂದೆ ಬಗ್ಗುವ ಭಂಗಿ ಮಾಡಬಾರದು.

ಈಜುವುದು (ಅಜೀರ್ಣ, ಜ್ವರ, ಶೀತ ಇದ್ದಾಗ ಬಿಟ್ಟು) ಸರ್ವತ್ರ ಶ್ರೇಷ್ಠ ವ್ಯಾಯಾಮ.

🗣 ಪಥ್ಯ ಎಷ್ಟು ದಿನ ಮಾಡಬೇಕು?
✍ ದಯಮಾಡಿ ಗಮನಿಸಿ, ಪಥ್ಯ ಎಂದರೆ ಏನೋ ಹೊಸದಲ್ಲ. ನಮ್ಮ ಶರೀರಕ್ಕೆ ಯಾವ ಆಹಾರ ಸಾತ್ಮ್ಯ(ಒಗ್ಗುವುದಿಲ್ಲವೋ) ವಲ್ಲವೋ ಅದು ಅಲರ್ಜಿಯನ್ನುಂಟುಮಾಡುತ್ತದೆ. ಅಲರ್ಜಿ ಎಂದರೆ ಹೊರ ಚರ್ಮಕ್ಕೆ ಮಾತ್ರ ಬರುವುದಲ್ಲ. ಕರುಳಿನ ಒಳಗಿನ (ಮ್ಯೂಕಸ್ ಲೇಯರ್) ಚರ್ಮಕ್ಕೂ ಅಲರ್ಜಿ ಬರುತ್ತದೆ ಅದು ಹೊಟ್ಟೆಯುಬ್ಬರದ ರೂಪದಲ್ಲಿ ಕಾಣುತ್ತದೆ.
ಯಾವ ಆಹಾರ ತಿನ್ನುವುದರಿಂದ ಹೊಟ್ಟೆಯುಬ್ಬರ ಬರುವುದೋ ಅದು ಅಜೀರ್ಣವಾಗಿದೆ, ಅದರಿಂದ ಯಾವ ಲಾಭವೂ ಇಲ್ಲ, ಬದಲಿಗೆ ಕಾಯಿಲೆ ತರುತ್ತದೆ ಎಂದು ತಿಳಿದು ತ್ಯಜಿಸಬೇಕು ಅಷ್ಟೆ.

🗣 ಚಳಿಗಾಲದದಲ್ಲಿ ಮಾತ್ರ ಕತ್ತು-ಬೆನ್ನು ನೋವು ಬರುತ್ತದೆ, ಇದು ವಿಶೇಷ ಕಾಯಿಲೆಯೇ ಹೇಗೆ?
✍ ಚಳಿಗಾಲದಲ್ಲಿ ನಮ್ಮ ಶರೀರ ಸ್ವಭಾವತಃ ಪ್ರವರ(ಹೆಚ್ಚು) ಬಲವನ್ನು ಹೊಂದಿರುತ್ತದೆ. ಆಗ ಶಾರೀರಿಕ ಕೆಲಸಗಳನ್ನು ಹೆಚ್ಚು ಮಾಡಬೇಕು.
ಹಿಡಿದುಕೊಂಡಿದೆ, ನೋವಾಗಿದೆ ಎಂದು ಹೊದ್ದು ಮಲಗಬಾರದು. ಚಳಿಗೆ ಆದ ಸ್ನಾಯು ಸಂಕೋಚವನ್ನು ವ್ಯಾಯಾಮದ ಉಷ್ಣದಿಂದಲೇ ನಿಯಂತ್ರಿಸಬೇಕು. ಈ ಹಂತದಲ್ಲಿ ಇದು ವಿಶೇಷ ಕಾಯಿಲೆಯಲ್ಲ, ಆದರೆ ಆಮವಾತ, ಮನ್ಯಾಸ್ಥಂಭ(ಪೂರ್ಣ ಕಶೇರುಕ ಹಿಡಿದುಕೊಳ್ಳುವ ದಾರುಣ ಅವಸ್ಥೆ- ankylosing spondylitis) ಬರುವ ಪೂರ್ವರೂಪವೂ ಹೀಗೇ ಇರುತ್ತದೆ.‌ ಅವನ್ನು ಈಗಲೇ ತಡೆಯಲು, ಪಥ್ಯ ಮತ್ತು ಶಾರೀರಿಕ ವ್ಯಾಯಾಮ ಮಾಡಿ.

🗣 ಸಂಸ್ಕೃತ ಶಬ್ದಗಳನ್ನೇ ಹೆಚ್ಚು ಬಳಸುತ್ತಿರುವಿರಿ, ಅರ್ಥವಾಗುವುದು ಕಷ್ಟ.
✍ ಅನೇಕ ಬಾರಿ ಇದೇ ಪ್ರಶ್ನೆ ಬಂದಿದೆ. ಸಂಸ್ಕೃತ ಭಾಷೆಯ ವ್ಯಾಪ್ತಿ(ಆಳ‌ ವಿಸ್ತಾರ) ಬಹಳ ದೊಡ್ಡದು, ಅದರ ಶಬ್ದ ಸಂಸ್ಕೃತ ಭಾಷೆಬಾರದವರಿಗೂ ಭಾವದಿಂದ ಅರ್ಥವಾಗುತ್ತದೆ. ಇನ್ನು ಬಹಳಷ್ಟು ಬಾರಿ ಅದಕ್ಕೆ ಪರ್ಯಾಯ ಶಬ್ದವೇ ಸಿಗದು, ಹಾಗಾಗಿ ಮೂಲ ಭಾಷಾ ಶಬ್ದ ಬಳಕೆ ಮಾಡಲಾಗಿದೆ.
ಮತ್ತು
ಕೆಲ ಸಮಯದ ನಂತರ ತಮಗೆ ಈ ವೈಜ್ಞಾನಿಕ ಶಬ್ದಗಳ ಪರಿಚಯವಾಗುವುದು.

ನಾಳೆ ಸಂಸ್ಕೃತ ಭಾಷೆಯಲ್ಲಿ ಶರೀರದ ಅವಯವಗಳ ಹೆಸರುಗಳನ್ನು ನೋಡೋಣ….

8792290274
9148702645

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

Admin

Leave a Reply

Your email address will not be published. Required fields are marked *

error: Content is protected !!