ಶಿವಮೊಗ್ಗ :ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ರೈಲ್ವೆ ನಿಲ್ದಾಣ ಮುತ್ತಿಗೆ…!

ಶಿವಮೊಗ್ಗ: ರಾಷ್ಟ್ರದಲ್ಲಿ ದಿನೇ ದಿನೇ ಬೆಳೆ ಏರಿಕೆ ನಡೆಯುತ್ತಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದರು.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.

ಮೈಸೂರು ತಾಳಗುಪ್ಪ ರೈಲು ಬರುವ ವೇಳೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಕಾರ್ಯಕರ್ತರು ರೈಲು ತಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಕೇಂದ್ರ ಸರ್ಕಾರ ಮೋದಿ ವಿರುದ್ಧ ಪ್ರತಿಭಟನಾರರು ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ಮೋದಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
News By: Raghu Shikari-7411515737