ಬಹುವಾಗಿ ಕಾಡುವ ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು ಮತ್ತು ಅದರ ಶಾಶ್ವತ ಪರಿಹಾರ. ಭಾಗ-3

ಬಹುವಾಗಿ ಕಾಡುವ ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು ಮತ್ತು ಅದರ ಶಾಶ್ವತ ಪರಿಹಾರ. ಭಾಗ-3

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಬಹುವಾಗಿ ಕಾಡುವ ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು ಮತ್ತು ಅದರ ಶಾಶ್ವತ ಪರಿಹಾರ.
ಭಾಗ-3

🏷 ವಿಶೇಷಸ್ತು…………. ಕ್ಷಾರಂ ಪಿಬೇನ್ ನರಃ
||89||
ಪಾಚನೈಃ ದೀಪನೈಃ………. ಪಾಚಯೇತ್ ಮಲಾನ್||90||

  • ಚರಕ ಸಂಹಿತಾ. ವಾತ ಚಿಕಿತ್ಸಾಧ್ಯಾಯ 28

🔹 ಆಚಾರ್ಯ ಚರಕರು, ತ್ರಿಕ್ ಶೂಲ ಚಿಕಿತ್ಸೆಯಾಗಿ-
• ಕ್ಷಾರ(ಪ್ರತ್ಯಾಮ್ಲ) ಯೋಜನೆ
• ಹಸಿವು ವರ್ಧನೆ
• ಜೀರ್ಣಕ್ರಿಯೆ ವೃದ್ಧಿ
ಮತ್ತು
ಮುಖ್ಯವಾಗಿ
• ಮಲಪಾಚನ
ಹೇಳುತ್ತಾರೆ.

ಒಟ್ಟಾರೆ,
ಮಲೋತ್ಪತ್ತಿ ಸರಿಯಾಗಿ ಆಗದಿರುವುದೇ ಸೊಂಟ, ಬೆನ್ನು ಕತ್ತು ನೋವುಗಳಿಗೆ ಕಾರಣ ಎಂದು ಈ ಚಿಕಿತ್ಸಾ ಸೂತ್ರದಿಂದ ತಿಳಿದುಬರುತ್ತದೆ.

📝 ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳನ್ನು ನೋಡೋಣ.

🔺 ವಿ.ಸೂಚನೆಗಳು:

  1. ಇಲ್ಲಿ ವಿಶದಪಡಿಸುವ ಪರಿಹಾರಗಳು, ನಿರಂತರ, ತೀವ್ರ ಮತ್ತು ಬಹುಕಾಲದ ತ್ರಿಕ್ ಶೂಲಗಳನ್ನೂ ಸಹ ನಿವಾರಿಸಲು ಸಮರ್ಥವಾಗಿವೆ, ಅಳವಡಿಸಿಕೊಂಡರೆ ಪರಿಹಾರ ನಿಶ್ಚಿತ. ಆದರೆ ಅಪಘಾತಾದಿ ಅತ್ಯುಗ್ರ ಮತ್ತು ತೀಕ್ಷ್ಣ ಅವಸ್ಥೆಗಳಲ್ಲಿ ಮಾತ್ರ ಈ ಪರಿಹಾರಕ್ಕೆ ಮುಂದಾಗಬಾರದು.
  2. ಈ ಪರಿಹಾರಗಳನ್ನು ನಿತ್ಯವೂ ಸ್ವಲ್ಪ ಸ್ವಲ್ಪವಾಗಿ ಅಳವಡಿಸಿಕೊಂಡು 16ನೇ ದಿನಕ್ಕೆ ಪರಿಪೂರ್ಣ ಪಾಲಿಸಬೇಕೇ ಹೊರತು, ಮೊದಲನೇ ದಿನವೇ ಹೇಳಿದುದಕ್ಕಿಂತ ಹೆಚ್ಚು ಮಾಡಿ ತೊಂದರೆಯನ್ನು ಹೆಚ್ಚು ಮಾಡಿಕೊಳ್ಳಬಾರದು.

👉 ಪರಿಹಾರಗಳು:

*⃣ ಆಹಾರ-ನಿದ್ರೆಗೆ ಸಂಬಂಧಿಸಿದ ವಿಷಯಗಳು:
ಎಲ್ಲಾ ತ್ರಿಕ್ ಶೂಲಗಳಿಗೂ ಮಲ ಉತ್ಪತ್ತಿಯನ್ನು ಸುಗಮಗೊಳಿಸುವುದೇ ಶಾಶ್ವತ ಪರಿಹಾರವಾಗಿದೆ. ಆದ್ದರಿಂದ-

  1. ರಾತ್ರಿ ಆಹಾರವನ್ನು 7:30ರೊಳಗೆ ಮುಗಿಸಿಬಿಡಿ. ಯಾವ ಕಾರಣಕ್ಕೂ ರಾತ್ರಿ ಅತಿಪ್ರಮಾಣ ಅಥವಾ ಶಕ್ತಿಯುತ ಆಹಾರ ಸೇವನೆ ಮಾಡಬೇಡಿ.
  2. ಸುಲಭವಾಗಿ ಜೀರ್ಣಿಸಿಕೊಳ್ಳುವಷ್ಟು ಮಾತ್ರ ಆಹಾರ ಸೇವಿಸಿ ಅಥವಾ ಸೇವಿಸಿದ ಪ್ರಮಾಣಕ್ಕೆ ಸಮಸಮವಾಗಿ ಬೆವರು ಬರುವ ಕೆಲಸ ಮಾಡಿ.
  1. ಒಂದು ಊಟದ ನಂತರ ಮತ್ತೆ ಹಸಿವಾಗುವವರೆಗೆ ಏನನ್ನೂ ಸೇವಿಸಬೇಡಿ, ಸಮಯವಾಯಿತು, ಗ್ಯಾಸ್ ಆಗುತ್ತದೆ, ವಿಜ್ಞಾನ ಹೇಳಿದೆ, ವೈದ್ಯರು ಹೇಳಿದ್ದಾರೆ ಎಂದೆಲ್ಲಾ ಯೋಚಿಸಿ ಪದೇ ಪದೇ ತಿನ್ನುವ ಬದಲು ನಿಮ್ಮ ನಿಮ್ಮ ಹೊಟ್ಟೆಯ ಮಾತನ್ನು ಕೇಳಿರಿ. ಅದಕ್ಕಿಂತ ದೊಡ್ಡ personal ವೈದ್ಯ ಇಲ್ಲ.
  2. ಅತ್ಯಂತ ಶಕ್ತಿಯಿಂದ ಕೂಡಿದ ಮೊಳಕೆಕಾಳುಗಳನ್ನು ಮತ್ತು ಯಾವುದೇ ಪ್ರೋಟೀನ್ ಆಹಾರವನ್ನು ಸೇವಿಸುವ ವಿಧಾನ ತಿಳಿದುಕೊಂಡು ಬಳಸಿ,‌ ಆಗದಿದ್ದಲ್ಲಿ ಸಂಪೂರ್ಣವಾಗಿ ನಿಲ್ಲಿಸಿ, ಇಲ್ಲದಿದ್ದರೆ ಗ್ಯಾಸ್ ಉಂಟಾಗಿ ಸ್ನಾಯುಗಳು ಒಣಗುತ್ತವೆ.
  3. ಅತಿಯಾದ ಜಲಸೇವನೆ ನಂತರ ಮತ್ತು ಪಚನವಾಗದ ಆಹಾರ ಸೇವನೆ ನಂತರ ತೀವ್ರ ಶಾರೀರಿಕ ಕೆಲಸ ಮಾಡಿದರೆ ಅಗ್ನಿಯು ತೀವ್ರ ಮಂದವಾಗಿ, ಅಜೀರ್ಣ, ಮಲಬದ್ಧತೆಯನ್ನುಂಟುಮಾಡುತ್ತದೆ. ಇದು ಕೆಲವರಲ್ಲಿ ಆಮವಾತದಿಂದ ಆರಂಭಿಸಿ, ankylosing spondylitis ವರೆಗೆ ತೊಂದರೆ ತರುತ್ತವೆ, ಹಾಗಾಗಿ ಲೆಕ್ಕ ಮಾಡಿ ಹೆಚ್ಚು ಹೆಚ್ಚು ಜಲಸೇವನೆ, ಹೆಚ್ಚು ಆಹಾರ ಸೇವನೆ ಮಾಡುವ ಬಗ್ಗೆ ಎಚ್ಚರ ವಹಿಸಿ.
  4. ಉದ್ದಿನಬೇಳೆ ಮಲವನ್ನು ಹೆಚ್ಚಿಸುವ ಕಾರಣ, ಸೊಂಟನೋವಿಗೆ ಕಾರಣವಾಗುತ್ತದೆ. ಅತಿ ದುರ್ಬಲತೆಯಿಂದ ಬಂದ ಸೊಂಟ ನೋವಿನಲ್ಲಿ, ಚಿಕಿತ್ಸಾ ದೃಷ್ಟಿಯಿಂದ ಸೇವಿಸಬಹುದು, ಆದರೆ ನಿತ್ಯ ಆಹಾರವಾಗಿ ಅಲ್ಲ.
  5. ಕಾಫಿ, ಟೀ ಸೇವನೆಯಿಂದ ಸ್ನಾಯುಗಳು ಒಣಗುತ್ತವೆ, ಹಾಗಾಗಿ ಪೂರ್ಣ ನಿಲ್ಲಿಸುವುದೊಳಿತು. ಆಗದದಿದ್ದವರು ದಿನಕ್ಕೆ ಒಂದು-ಎರೆಡು ಬಾರಿ ಅತ್ಯಲ್ಪ ಪುಡಿ ಬಳಸಿ ತಯಾರಿಸಿ ಸೇವಿಸಬಹುದು.
  1. ನಿದ್ದೆಗೆ ಈ ಜಗತ್ತಿನಲ್ಲಿ ಪರ್ಯಾಯವೇ ಇಲ್ಲ, ತಡರಾತ್ರಿ ನಿದ್ದೆ ಮಾಡುವುದರಿಂದ, ಶರೀರದ ಪ್ರಾಕೃತ ಸ್ನೇಹಾಂಶವೇ ಒಣಗಿ ಸ್ನಾಯುಗಳು ಒಣಗುತ್ತವೆ, ಇನ್ನೂ ಕೆಲವರಲ್ಲಿ ನಿದ್ರೆ ತೊಂದರೆಯಿಂದ ವಿಕೃತ ಸ್ನೇಹ(ಕ್ಲೇದ) ಸಂಚಯವಾಗಿ ಸ್ಥೂಲದೇಹಿಗಳಾಗಿರುತ್ತಾರೆ, ಆಗಲೂ ಸ್ನಾಯುಗಳು ಒಣಗುತ್ತವೆ. ಹಾಗಾಗಿ ರಾತ್ರಿ ಊಟದ ನಂತರ 90ನಿಮಿಷ ಆರಾಮವಾಗಿ ಕುಳಿತುಕೊಂಡಿದ್ದು ನಂತರ 100 ಹೆಜ್ಜೆ ನಡೆದು, ಮೂತ್ರ ವಿಸರ್ಜಿಸಿ ಮಲಗಿಬಿಡಿ.

ಇನ್ನು,
*⃣ ವ್ಯಾಯಾಮಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ನೋಡೋಣ:

  1. ಬೆನ್ನಿನ ಸ್ನಾಯುಗಳಿಗೆ ಕೆಲಸ ಕೊಡುವುದೇ ಸರ್ವಶ್ರೇಷ್ಠ ಉಪಾಯ. ಶರೀರದ ಎಲ್ಲಾ ಸ್ನಾಯುಗಳಿಗೆ ಸಣ್ಣ ಕೆಲಸಗಳಿಂದಲೇ ವ್ಯಾಯಾಮವಾಗುತ್ತದೆ ಆದರೆ ಬೆನ್ನಿನ ಸ್ನಾಯುಗಳಿಗೆ ವಿಶೇಷ ರೀತಿಯ ಭಂಗಿಗಳು ಬೇಕಾಗುವುದರಿಂದ, ಎಲ್ಲಾ ವ್ಯಾಯಾಮಗಳಿಗಿಂತ ಅತೀ ಹೆಚ್ಚು ಫಲದಾಯಕ ವ್ಯಾಯಾಮ ಎಂದರೆ ಈಜುವುದು, ದಿನಕ್ಕೆ 48 ನಿಮಿಷ ಈಜುವುದನ್ನು ರೂಢಿಸಿಕೊಳ್ಳಿ ಎಲ್ಲಾ ತ್ರಿಕ್ ಶೂಲಗಳೂ ಶಾಶ್ವತವಾಗಿ ದೂರವಾಗುತ್ತವೆ.

ಅಥವಾ

  1. ವಿಶೇಷ ರೀತಿಯ ಭಂಗಿಗಳ ಇರುವ ಸೂರ್ಯನಮಸ್ಕಾರ ಮಾಡಬಹುದು(ಒಂದೇ ದಿನಕ್ಕೆ ಹೆಚ್ಚು ಬೇಡ).
  2. ಪದೇ ಪದೇ ಮೆಟ್ಟಿಲು ಹತ್ತಿ ಇಳಿಯುವುದು ವ್ಯಾಯಾಮವಾಗುವ ಬದಲು, ನೇರವಾಗಿ lumbar discಗೆ ಒತ್ತಡಬೀಳುವುದರಿಂದ ಅತ್ಯಂತ ದಾರುಣ ನೋವನ್ನು ಅನುಭವಿಸುತ್ತೀರಿ, ಹಾಗಾಗಿ ಸಾಧ್ಯವಾದಷ್ಟು ಹತ್ತಿಳಿಯುವುದನ್ನು ನಿಲ್ಲಿಸಿ, ಅನಿವಾರ್ಯ ಪ್ರಸಂಗದಲ್ಲಿ ಹಗುರವಾಗಿ ಹತ್ತಿಳಿಯಿರಿ. ಆ ಕಾಲದಲ್ಲಿ ಮೇಲಿನ ಮನೆಯ ಕಲ್ಪನೆ ಅತ್ಯಂತ ಕಡಿಮೆ ಇತ್ತು, ಈಗ ಈ ತರಹದ ಮನೆ ಜೊತೆಗೆ ಸೊಂಟನೋವು ಬಳುವಳಿ.
  3. ನಿತ್ಯವೂ ಶಾರೀರಿಕ ಶ್ರಮದ ವ್ಯಾಯಾಮ ಮಾಡಿದ ನಂತರ ಬೆನ್ನು ಮತ್ತು ಕಾಲುಗಳನ್ನು ಮೃದುವಾಗಿ ಒತ್ತಿಸಿಕೊಳ್ಳಿ.
  4. ಕತ್ತು ಮತ್ತು ಬೆನ್ನು ನೋವಿಗೆ ತೈಲ ಹಚ್ಚುವ ಬದಲು, ಶುಷ್ಕಪೀಡನ(ಎಣ್ಣೆ ಹಚ್ಚದೇ ಹಿಚುಕುವುದು) ಮತ್ತು ಒಣ ಶಾಖ ತೆಗೆದುಕೊಳ್ಳುವುದು ಅತ್ಯಂತ ಸೂಕ್ತ.
  5. ಆದರೆ ಸೊಂಟಕ್ಕೆ ಮಾತ್ರ ತೈಲ ಹಚ್ಚಿ ಬಿಸಿನೀರನ್ನು ಹಾಕಿಕೊಳ್ಳುವುದು ಸೂಕ್ತ.
  6. ಮಕ್ಕಳಾದಿ ಎಲ್ಲರೂ ನಿತ್ಯವೂ ಎಣ್ಣೆ ಸವರಿಕೊಂಡು ಬಿಸಿನೀರ ಸ್ನಾನ ಮಾಡುವುದು ಸರಿಯಾದ ಪದ್ಧತಿ. ಆದರೆ ವಸಂತ ಋತುವಿನಲ್ಲಿ(ಮಾರ್ಚ್-ಏಪ್ರಿಲ್-ಮೇ) ಎಣ್ಣೆ, ಬಿಸಿ ನೀರು ಸೂಕ್ತವಲ್ಲ.

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!