ಶಿಕಾರಿಪುರ : ಗಾಮ‌ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ..!

ಶಿಕಾರಿಪುರ : ಗಾಮ‌ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ..!

ಶಿಕಾರಿಪುರ: ತಾಲೂಕಿನ ಗಾಮ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹೆಚ್.ಎಂ.ವಿ. ಆರಾಧ್ಯ ಅಧ್ಯಕ್ಷರಾಗಿ ರೇಣುಕಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ದುರ್ಮಜ್ಜಿ, ಎಚ್.ಎಂ.ವಿ.ಆರಾಧ್ಯ ನಾಮಪತ್ರ ಸಲ್ಲಿಸಿದ್ದರು, ಆರಾಧ್ಯ 6, ಪ್ರಕಾಶ್ 4 ಮತ ಪಡೆದರು, ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಮ್ಮ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣಕ್ಕೆ ಅವಿರೋಧ ಅಯ್ಕೆ ಘೋಷಿಸಲಾಯಿತು. ಬಿಇಒ ಉಮಾಮಹೇಶ್ ಚುನಾವಣೆ ಅಧಿಕಾರಿಯಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರೂ ಬಿಜೆಪಿ ಬೆಂಬಲಿತರು ಆದರೂ ಸ್ಪರ್ಧೆ ಅನಿವಾರ್ಯ ಆದ ಕಾರಣಕ್ಕೆ ಚುನಾವಣೆ ಕುತೂಹಲ ಮೂಡಿಸಿತ್ತು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರಕಾಶ್ ಬೆಂಬಲಿಸಿದರು.

ಅಭಿವೃದ್ಧಿಗೆ ಆದ್ಯತೆ: ಗ್ರಾಮದ ಸ್ವಚ್ಛತೆ, ನೀರಿನ ಸೌಲಭ್ಯ ಕಲ್ಪಿಸುವುದು ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ನೂತನ ಅಧ್ಯಕ್ಷ ಆರಾಧ್ಯ ಭರವಸೆ ನೀಡಿದರು.

ಅಧ್ಯಕ್ಷರಾಗಿ ಆಯ್ಕೆ ಆಗುವುದಕ್ಕೆ ಬೆಂಬಲ ನೀಡಿದ ಎಲ್ಲ ಸದಸ್ಯರು, ಗ್ರಾಮಸ್ಥರು, ಮುಖ್ಯಮಂತ್ರಿ ಬಿಎಸ್‌ವೈ, ಸಂಸದ ಬಿ.ವೈ.ರಾಘವೇಂದ್ರ ಅವರ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಅಧಿಕಾರ ನಡೆಸುವುದಾಗಿ ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ವಿರೇಂದ್ರ ಪಾಟೀಲ್, ತಾ.ಪಂ. ಅಧ್ಯಕ್ಷ ಸುರೇಶ್‌ನಾಯ್ಕ, ಮುಖಂಡರುಗಳಾದ ಶಶಿಧರ್, ದಯಾನಂದ, ಸುಕುಮಾರ್, ಸಚಿನ್ ಎಲ್ಲ ಸದಸ್ಯರು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!