ತೂಕ ಕಡಿಮೆ ಮಾಡಿಕೊಳ್ಳುವ ಉಪಾಯ…!

ತೂಕ ಕಡಿಮೆ ಮಾಡಿಕೊಳ್ಳುವ ಉಪಾಯ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
👉ತೂಕ ಕಡಿಮೆ ಮಾಡಿಕೊಳ್ಳುವ ಉಪಾಯ.

ಅನೇಕರು ಜೇನು+ಬಿಸಿನೀರು ಸೇವನೆಯ ಅಪಾಯದ ಬಗ್ಗೆ ತಿಳಿದು,
ಹಾಗಾದರೆ ತೂಕ ಕಡಿಮೆ ಮಾಡಿಕೊಳ್ಳಲು ಉಪಾಯ ಏನು? ಎಂದು ಕೇಳಿದ್ದಾರೆ.
ಅತ್ಯಂತ ಸರಳ ಉಪಾಯಗಳಿವೆ. ಪಾಲಿಸಿದರೆ ಮಾತ್ರ, ಅಡ್ಡಪರಿಣಾಮಗಳು ಇಲ್ಲದೇ ದೀರ್ಘಕಾಲದ ಆರೋಗ್ಯಯುತ ಮತ್ತು ದೃಢ ಶರೀರ ಹೊಂದಬಹುದು.

📜 ಕಾರ್ಶಮೇವ ವರಂ………|
-ಅಷ್ಟಾಂಗ ಸಂಗ್ರಹ ಸೂತ್ರಸ್ಥಾನ.

📜 ಅನ್ನೇನ ಕುಕ್ಷೇ………ಚತುರ್ಥಂ ಅವಶೇಷಯೇತ್ ||

📜 ಅನುಪಾನಂ………………ಅನ್ನ ಸಂಘಾತ, ಶೈಥಿಲ್ಯ, ವಿಕ್ಲಿತ್ತಿ ಜರಣಾನಿ ಚ |

📜 ಸಮಃ, ಸ್ಥೂಲ, ಕೃಶಾ…..ಭುಕ್ತ ಮಧ್ಯ, ಅಂತಃ, ಪ್ರಥಮ ಅಂಬುಪಾಃ|

📜 ಮಂಡ,‌ ಪೇಯಾ, ವಿಲೇಪಿ…..ಲಾಘವಮ್|…..ಧಾತು ಸಾಮ್ಯಕೃತ್|….ಸ್ರೋತೋ ಮಾರ್ದವ….ಸ್ವೇದೀ….||….ಮಲಾನುಲೋಮನೇ ಪಥ್ಯಾ ಪೇಯಾ ದೀಪನಪಾಚನೀ||

📜 ……ಸ್ಥೂಲಾನ್ ಮಧೂದಕಮ್ ||

  • ಅಷ್ಟಾಂಗ ಹೃದಯ, ಸೂ.ಸ್ಥಾನ ಅಧ್ಯಾಯ-8,5 &6 ಮಾತ್ರಾಶಿತೀಯ, ದ್ರವದ್ರವ್ಯ ವಿಜ್ಞಾನೀಯ, ಅನ್ನಸ್ವರೂಪ ಅಧ್ಯಾಯ.

◆ ಆರೋಗ್ಯ, ಸುಖಜೀವನ ಮತ್ತು ಚಿಕಿತ್ಸೆಯನ್ನು ಆಧಾರವಾಗಿಟ್ಟುಕೊಂಡು ನಮ್ಮ ಶರೀರ ಕೃಶವಾಗಿ ಅಂದರೆ ತೆಳ್ಳಗೆ ಇರುವುದು ಶ್ರೇಷ್ಠ ಎಂದಿದೆ ಆಯುರ್ವೇದ.

📝 ನಾವು ಅತೀ ತೆಳ್ಳಗೂ ಅಲ್ಲದೇ, ಅತಿ ದಪ್ಪವೂ ಅಲ್ಲದೇ, ಮಧ್ಯಮ ಮತ್ತು ಸದೃಢ ಶರೀರಿಗಳಾಗಿ ಇರಲು ಸರಳ ಉಪಾಯಗಳು:

🔹 ಪಾಲನಾ ಯೋಗ್ಯ ಉಪಾಯ-
1) ಆಹಾರದ ಪ್ರಮಾಣ:
ನಮ್ಮ ಜಠರವೇ ಆಹಾರ ಸೇವನೆಗೆ ಅತ್ಯುತ್ತಮ ಮಾನದಂಡವೇ ಹೊರತು ಅಂಜಲಿ ಪ್ರಮಾಣ(calculation based on calories)ಅಲ್ಲ!!!
ಅಂದರೆ ಅಳತೆ ಮಾಡಿ ಆಹಾರ ಸೇವನೆ ಸರಿಯಲ್ಲ, ಇದಕ್ಕಾಗಿ “ಮಾತ್ರಾ ಆಶಿತೀಯ (food dosage)” ಅಧ್ಯಾಯ ವರ್ಣಿಸಿದ್ದಾರೆ.‌

ನಮ್ಮ ಜಠರವು ಇಂದಿನ ಶಾರೀರಿಕ ಶ್ರಮವನ್ನು ಆಧರಿಸಿ ಹಸಿವನ್ನೂ, ಹಸಿವನ್ನಾಧರಿಸಿ ಈ ದಿನದ ಆಹಾರ ಪ್ರಮಾಣವನ್ನೂ, ಎಷ್ಟು ಹಿಡಿಯುತ್ತದೆ ಎಂದು ಊಟಕ್ಕೆ ಕೂರುವ ಮೊದಲೇ ತಿಳಿಸುತ್ತದೆ. ಅದರಲ್ಲಿ ‘ಅರ್ಧಭಾಗ’ದಲ್ಲಿ ಘನ ಆಹಾರವನ್ನೂ, ಇನ್ನು ‘ಕಾಲುಭಾಗ’ ದ್ರವ ಆಹಾರಗಳಿಂದಲೂ ಮತ್ತು ಉಳಿದ ‘ಕಾಲುಭಾಗ’ ಗಾಳಿಯಾಡಲು ಖಾಲಿ ಉಳಿಸಲು ತಿಳಿಸುತ್ತಾರೆ.
ಅಂದರೆ ರೊಟ್ಟಿ, ಮುದ್ದೆ, ಅನ್ನ ಘನ ಆಹಾರ, ಪಲ್ಯೆಗಳು, ಸಂಬಾರು ದ್ರವ ಆಹಾರ…

🔹 ಪಾಲನಾ ಯೋಗ್ಯ ಉಪಾಯ-
2) ಆಹಾರದೊಡನೆ ನೀರು ಸೇವನೆ:
° ಆಹಾರದ ಮೊದಲೇ ನೀರುಕುಡಿದರೆ ದುರ್ಬಲ ಮತ್ತು ತೆಳ್ಳಗೂ,
° ನಂತರ ಕುಡಿದರೆ ದುರ್ಬಲ ಮತ್ತು ದಢೂತಿ ಶರೀರವೂ,
° ಮಧ್ಯ-ಮಧ್ಯ ನೀರು ಕುಡಿದರೆ ದೃಢ ಮತ್ತು ಸಮಶರೀರವೂ ದೊರಕುತ್ತದೆ.
ಏಕೆಂದರೆ ಎಂಜೈಮ್ ಗಳು(ಅಗ್ನಿ) ನೀರಿನಿಂದ ನಿರ್ಬಲವಾಗುವ ಕಾರಣ ಮಧ್ಯ ಮಧ್ಯ ಸ್ವಲ್ಪ ಪ್ರಮಾಣ ಅಂದರೆ ಲಾಲಾರಸ ಉತ್ಪತ್ತಿಗೆ ಸಹಾಯವಾಗುವಷ್ಟು ಅಂದರೆ ಬಾಯಿಯ ಎಂಜೈಮ್ ಸಮರ್ಥವಾಗಿ ಸ್ರಾವವಾಗುವಷ್ಟು ನೀರು ಮುಕ್ಕಳಿಸಿದರೆ ಜಠರದ ಅಗ್ನಿಗೆ ಬಾಯಿಯ ಅಗ್ನಿ ಸಹಾಯಮಾಡಿ ದೃಢ ಶರೀರ ಕೊಡುತ್ತದೆ.

🔹 ಪಾಲನಾ ಯೋಗ್ಯ ಉಪಾಯ-
3) ಅನುಪಾನ ಸೇವನೆ:
ಊಟದ ನಂತರ ಆಹಾರವು ಜೀರ್ಣವಾಗಲು, ಆಹಾರದ ನಂತರ ಏನನ್ನು ಕುಡಿಯಬೇಕು ಎನ್ನುವುದೇ “ಅನುಪಾನ” ಇದು ನಮ್ಮ ಶರೀರವನ್ನು ತೆಳ್ಳಗೆ ಇಡಲು ಅತ್ಯಂತ ಉತ್ತಮ ಮಾರ್ಗ.
★ ಸಿಹಿ ಪ್ರಧಾನ ಆಹಾರ, ಗೋಧಿ ಮುಂತಾದ ಜಿಗುಟುಳ್ಳ ಆಹಾರ, ಅಧಿಕ ಪ್ರಮಾಣದಲ್ಲಿ ಯಾವುದೇ ಆಹಾರವನ್ನು ತಿಂದಿದ್ದರೆ ಬಿಸಿ-ಬಿಸಿ ನೀರು ಅತ್ಯತ್ತಮ ಅನುಪಾನ ನಮ್ಮ ತಪ್ಪು ಎಂದರೆ ಹೊಟ್ಟೆ ಭಾರವಾದಾಗ ಜೀರ್ಣಕ್ಕೆ ಸಹಾಯವಾಗುವ ಅನುಪಾನ ಬಿಟ್ಟು ಐಸ್ ಕ್ರೀಮ್, ಜ್ಯೂಸ್, ಬಾಳೆಹಣ್ಣು ಅಥವಾ ಫ್ರೂಟ್ ಸಲಾಡ್ ತಿಂದರೆ ಎಂತಹ ಪಥ್ಯ ಮಾಡಿದರೂ ತೆಳ್ಳಗಾಗುವುದು ಅಸಾಧ್ಯ.

★ ಪ್ರೋಟೀನ್ ಹೆಚ್ಚಿರುವ ದಾಲ್ ಗಳನ್ನು(ಬೇಳೆ ಪಲ್ಯ) ಸೇವನೆ ನಂತರ ಮೊಸರಿನ ತಿಳಿನೀರು ಅಥವಾ ಆಗತಾನೇ ತಯಾರಿಸಿದ ಮಜ್ಜಿಗೆ ಅತ್ಯಂತ ಶ್ರೇಷ್ಠ ಅನುಪಾನ.

★ ದಪ್ಪ ಇರುವವರು ಆಹಾರ, ಮೇದಸ್ಸು, ಕಫ ಜೀರ್ಣವಾಗಲು ಜೇನುತುಪ್ಪ ಶ್ರೇಷ್ಠ ಅನುಪಾನ. ನೆನಪಿಡಿ ಬಿಸಿ ಜೇನುತುಪ್ಪ ಅಲ್ಲ, ಜೇನಿನೊಂದಿಗೆ ಬಿಸಿ ನೀರೂ ಸಲ್ಲದು.

★ ಮಾಂಸಾಹಾರ ತಿಂದವರಿಗೆ ಮದ್ಯಸೇವನೆ ಶ್ರೇಷ್ಠ(ಇಂದಿನ ಬಿಯರ್, ಬ್ರಾಂದಿ, ವಿಸ್ಕಿ….ಮುಂತಾದವುಗಳಲ್ಲ) ಅಂದರೆ
📜…..ಅರಿಷ್ಠಃ ಸರ್ವಮದ್ಯ ಗುಣಾಧಿಕಃ| ಎಂದಿದ್ದಾರೆ.
ಮಾಂಸ ಸೇವನೆ ನಂತರ ಮುಸ್ತಾರಿಷ್ಟ, ಅಭಯಾರಿಷ್ಟಗಳು ಶ್ರೇಷ್ಠ ಅನುಪಾನಗಳು. ಇದನ್ನು ಆಯುರ್ವೇದ ವೈದ್ಯರು ನಿರ್ಧರಿಸುತ್ತಾರೆ.

★ ಮಕ್ಕಳಿಗೂ, ವೃದ್ಧರಿಗೂ, ರೋಗದಿಂದ ಶಕ್ತಿ ಕಳೆದುಕೊಂಡವರಿಗೂ, ನಿತ್ಯ ಔಷಧಿ ಸೇವನೆಯಿಂದ ಶಕ್ತಿ ಹೀನರಿಗೂ ಹಾಲು ಶ್ರೇಷ್ಠ ಅನುಪಾನವಾಗಿದೆ.

ಒಟ್ಟಾರೆ,
★ ಅಧಿಕ ಭೋಜನದಲ್ಲಿ ಬಿಸಿನೀರು ಅಥವಾ ಮಜ್ಜಿಗೆಯೂ, ಹಗುರ ಅಲ್ಪ ಭೋಜನದಲ್ಲಿ ಹಾಲು ಉತ್ತಮ ಅನುಪಾನ.

🔹 ಪಾಲಾನಾಯೋಗ್ಯ ಉಪಾಯ-
4) ರಾತ್ರಿ ಆಹಾರದ ಪ್ರಮಾಣ:
ಅತ್ಯಂತ ಹಗುರವಾದ ಅನ್ನದ ಗಂಜಿ ಕುಡಿದು ಮಲಗಿಬಿಡಿ, ಕೆಲವರಿಗೆ ಮಧುಮೇಹದ ಕಾರಣ, ಅಭ್ಯಾಸದ ಕಾರಣ ಮಧ್ಯರಾತ್ರಿ ಹಸಿವಾದರೆ ಮತ್ತೆ ಅನ್ನದ ಗಂಜಿ ಸೇವಿಸಿ. ಎರಡನೇ ದಿನ ಮಧುಮೇಹಿಗಳು ಔಷಧ ಪ್ರಮಾಣ ಕಡಿಮೆ ಮಾಡಿ, ಸಾಮಾನ್ಯರು ಮಧ್ಯರಾತ್ರಿ ಹಸಿವಾದರೆ ಕೇವಲ ನೀರು ಸೇವಿಸಿ. ನಂತರ ಹೊಂದಿಕೆಯಾಗುತ್ತದೆ.

🔹 ಪಾಲಾನಾಯೋಗ್ಯ ಉಪಾಯ-
5) ಬೆಳಗಿನ ‌ಆಹಾರ:
ಅತ್ಯಂತ ಶ್ರೇಷ್ಟತೆಯನ್ನು ಹೊಂದಿದ ಬೆಳಗಿನ ಆಹಾರ ಉಪಹಾರದ ಹೆಸರಿನಲ್ಲಿ ಅತ್ಯಲ್ಪ ಪ್ರಮಾಣ, ತಂಗಳು(ಇಡ್ಲಿ,ದೋಸೆಗಳು), ತೀಕ್ಷ್ಣ ದ್ರವ(ಕಾಫೀ-ಟೀಗಳು) ಸೇವಿಸಿ ಅನಾರೋಗ್ಯಕ್ಕೆ ನಾಂದಿ ಹಾಡುತ್ತೇವೆ. ಬೆಳಿಗ್ಗೆ ಭೋಜನ ಅತ್ಯುತ್ತಮ ಪದಾರ್ಥಗಳಿಂದ ಕೂಡಿರಬೇಕು.

🔹 ಪಾಲಾನಾಯೋಗ್ಯ ಉಪಾಯ-
6) ಮಧ್ಯಾಹ್ನದ ಆಹಾರ:
ಹಸಿವಾದ ನಂತರ ಮಧ್ಯಮ ಪ್ರಮಾಣದ ಆಹಾರ ಸೇವಿಸಿ.
🔹 ಪಾಲಾನಾಯೋಗ್ಯ ಉಪಾಯ-
7) ಹಗಲು ನಿದ್ದೆ:
ಬಹಳ ಜನ ತಪ್ಪು ತಿಳಿದಿದ್ದಾರೆ, ನಿದ್ದೆಯಿಂದ ಶರೀರ ಆಯಾಸ ನೀಗುತ್ತದೆ ಎಂದು, ಆದರೆ ಹಗಲುನಿದ್ದೆಯಿಂದ ಎಂದೆಂದೂ ಸ್ಥೂಲ ಶರೀರ ನಮ್ಮದಾಗುತ್ತದೆ ಎಚ್ಚರ. ತೆಳ್ಳಗಾಗಬೇಕೆ? ಹಗಲು ನಿದ್ದೆ ತ್ಯಜಿಸಿ(ಬೇಸಿಗೆಯಲ್ಲಿ ಹೊರತು) .

🔹 ಪಾಲಾನಾಯೋಗ್ಯ ಉಪಾಯ-
8) ರಾತ್ರಿ ಭೋಜನ ಸಮಯ:
ತಡರಾತ್ರಿ ಭೋಜನ ಅತ್ಯಂತ ಅನಾರೋಗ್ಯಕರ ಮತ್ತು ದಪ್ಪದೇಹಕ್ಕೆ ಕಾರಣ. ರಾತ್ರಿ ಸೂರ್ಯ ಮುಳುಗುವ ಮೊದಲು ಗಂಜಿ ಸೇವಿಸಿ

ನಿಮ್ಮ ಸಂಪರ್ಕಕ್ಕೆ:
📞 8792290274
9148702645

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!