ಶಿಕಾರಿಪುರ: ಸದಾಶಿವ ಆಯೋಗ ಜಾರಿ ಆಗಲೇ ಬೇಕು: ಲಕ್ಷ್ಮಿ ನಾರಾಯಣ್…!

ಶಿಕಾರಿಪುರ: ಸದಾಶಿವ ಆಯೋಗ ಜಾರಿ ಆಗಲೇ ಬೇಕು: ಲಕ್ಷ್ಮಿ ನಾರಾಯಣ್…!

ಶಿಕಾರಿಪುರ: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ಜಾರಿಯಾಗದೇ ಹೊದರೇ ಮಾದಿಗ ಸಮಾಜ ಇನ್ನೂ ಕೆಳಸ್ಥಿತಿ ತಲುಪ ಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಲಕ್ಷ್ಮಿ ನಾರಾಯಣ್ ಹೇಳಿದರು,

ಗುರುವಾರ ಪಟ್ಟಣಕ್ಕೆ ಆಗಮಿಸಿದ ಮಾದಿಗ ಚೈತನ್ಯ ರಥಯಾತ್ರೆಯ ನೇತೃತ್ವ ವಹಿಸಿಕೊಂಡಿರುವ ಸಮಾಜಿಕ ಹೋರಾಟಗಾರ ಲಕ್ಷ್ಮಿ ನಾರಾಯಣ್ ಡಾ. ಬಿ.ಆರ್ ಅಂಭೇಡ್ಕರ್ ಸಮುದಾಯ ಭವನದಲ್ಲಿ ಮಾತನಾಡಿ ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ಸಮಾಜವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತದೆ ಅದರೆ ಕೆಳವರ್ಗದ ಅಭಿವೃದ್ಧಿಗೆ ಬೇಕಾದ ಚಿಂತನೆಯನ್ನು ಯಾರು ಮಾಡುವುದಿಲ್ಲ ಮಾದಿಗ ಸಮುದಾಯದ ಸಂಪೂರ್ಣ ಅಭಿವೃದ್ಧಿಗೆ ಸದಾಶಿವ ಆಯೋಜ ಜಾರಿ ಅವಶ್ಯಕ ಎಂದರು.

ಅಸ್ಪರ್ಷ ಗುಂಪಿಗೆ ಸೇರಿರುವ, ಜನಸಂಖ್ಯೆಯಲ್ಲಿ ಹೆಚ್ಚಿರುವ ಮಾದಿಗರು ಮೀಸಲಾತಿ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ,

ಸ್ಪರ್ಷ ಗುಂಪಿಗೆ ಸೇರಿದ ಜಾತಿಯವರು ಆರ್ಥಿಕ, ಸಾಮಾಜಿಕವಾಗಿ ಮುಂದಿದ್ದರೂ ಮೀಸಲಾತಿ ಸೌಲಭ್ಯ ಹೆಚ್ಚು ಪಡೆದಿದ್ದಾರೆ ಅದಕ್ಕಾಗಿ ಒಳಮೀಸಲಾತಿ ಜಾರಿಗೊಳ್ಳಬೇಕು ಆಗ ನಮ್ಮ ಜನಾಂಗಕ್ಕೆ ಅನುಕೂಲ ಆಗುತ್ತದೆ ಎಂದರು.

ಪ್ರತಿ ಚುನಾವಣೆಗಳಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಸದಾಶಿವ ಆಯೋಗ ಜಾರಿ ಮಾಡುತ್ತೇವೆ ಎಂದು ಭರವಸೆಗಳನ್ನು ನೀಡುತ್ತದೆ ಅದರೆ ಯಾರುಕೂಡ ನಮ್ಮ ಸಮಾಜದ ಏಳಿಗೆಗೆ ಗಮನ ನೀಡುತ್ತಿಲ್ಲ ಅದರೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪವನರು ಸದಾಶಿವ ಆಯೋಗ ಕುರಿತು ಗಮನ ನೀಡಿ ಜಾರಿಗೆ ತೋರುತ್ತಾರೆ ಎನ್ನುವ ಆಕಾಂಕ್ಷೆ ಇದೆ ಬಿಜೆಪಿ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇದ್ದು ಇದನ್ನು ಜಾರಿ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಆಯೋಗ ಜಾರಿಯಾಗದೇ ಹೋದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ನಮ್ಮ ಹೋರಾಟ ದಿಕ್ಕು ಬದಲಾಗಲಿದೆ ಎಂದರು.

ನ್ಯಾ.ಸದಾಶಿವ ಆಯೋಗದ ಶಿಫಾರಸ್ಸು ಜಾರಿಗೊಳಿಸದೆ ಮಾದಿಗರಿಗೆ ಅನ್ಯಾಯ ಆಗುತ್ತಿದೆ ಅದಕ್ಕಾಗಿ ರಾಜ್ಯದಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕನ್ನು ಪಡೆಯಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕ ಅಧ್ಯಕ್ಷ ಜಗದೀಶ್ ಚುರ್ಚಿಗುಂಡಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟಿನ ಹಿರಿಯ ವಕೀಲರಾದ ಪ್ರೋ.ಹರಿರಾಮ್, ಗಾಯಕ ಅಂಬಣ್ಣ, ನಿವೃತ ಅಬಕಾರಿ ಜಿಲ್ಲಾಧಿಕಾರಿ ಸಾವಕ್ಕನವರು.ನಿವೃತ ಇಂಜಿನಿಯರ್‌ ಶಿವಪ್ಪ, ಬಸವರಾಜಪ್ಪ, ಹೊಳೆಯಪ್ಪ, ಚಂದ್ರಪ್ಪ, ದುರುಗಪ್ಪ, ರಾಮಪ್ಪ, ಜಗದೀಶ್,ಶೇಖರಪ್ಪ,ಪ್ರಕಾಶ್,ಪರಮೇಶ್ವರಪ್ಪ,ಹಾಲಪ್ಪ, ಶಿವಮೂರ್ತಿ, ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!