ಶಿವಮೊಗ್ಗ: ರೌಡಿ ಪರೇಡ್ ನಲ್ಲಿ ರೌಡಿಗಳಿಗೆ ಖಡಕ್ ವಾರ್ನಿಂಗ್…!
ಶಿವಮೊಗ್ಗ: ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡು ಜಾಮೀನಿನ ಮೇಲೆ ಹೊರಕ್ಕೆ ಬಂದಿರುವ ರೌಡಿಗಳು ಪದೇ ಪದೇ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡರೆ ಅಂತಹವರ ಬೇಲ್ ರದ್ದು ಮಾಡಲಾಗುವುದು ಎಂದು ಎಸ್’ಪಿ ಕೆ.ಎಂ. ಶಾಂತರಾಜು ರೌಡಿಗಳಿಗೆ ಎಚ್ಚರಿಕೆ ನೀಡಿದರು.
ಡಿಎಆರ್ ಮೈದಾನದಲ್ಲಿ ರೌಡಿಗಳ ಪೆರೇಡ್’ನಲ್ಲಿ ಮಾತನಾಡಿದ ಅವರು, ರೌಡಿ ಶೀಟರ್’ಗಳು ಬಾರ್ ಅಂಡ್ ರೆಸ್ಟೋರೆಂಟ್’ಗಳಲ್ಲಿ ಕುಡಿದು ಗಲಾಟೆ ಮಾಡುತ್ತಿರುವುದು, ವಾಹನಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇವೆಲ್ಲವನ್ನೂ ನಿಲ್ಲಿಸಬೇಕು.
ಬದಲಾಗಿ, ಇಂತಹ ಕೃತ್ಯಗಳನ್ನು ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೊಡ್ಡಪೇಟೆ, ತುಂಗನಗರ, ಜಯನಗರ, ಗ್ರಾಮಾಂತರ ಕೋಟೆ ಪೊಲೀಸ್ ಠಾಣೆಯ 150ಕ್ಕೂ ಹೆಚ್ಚಿನ ರೌಡಿಗಳು ಪೆರೇಡ್’ನಲ್ಲಿ ಪಾಲ್ಗೊಂದ್ದರು.