ಶಿಕಾರಿಪುರ: ಪಟ್ಟಣ‌ ಮಾರಿಕಾಂಬಾ ದೇವಸ್ಥಾನದ ಜಾಗ ಸಮಿತಿ ಹೆಸರಿಗೆ ಖಾತೆ ವರ್ಗಾವಣೆ ಪತ್ರ ಹಸ್ತಾಂತರ…!

ಶಿಕಾರಿಪುರ: ಪಟ್ಟಣ‌ ಮಾರಿಕಾಂಬಾ ದೇವಸ್ಥಾನದ ಜಾಗ ಸಮಿತಿ ಹೆಸರಿಗೆ ಖಾತೆ ವರ್ಗಾವಣೆ ಪತ್ರ ಹಸ್ತಾಂತರ…!

ಶಿಕಾರಿಪುರ: ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ನಿರ್ಮಾಣಕ್ಕೆ ಆಗಿನ ಪುರಸಭಾ ಅಧ್ಯಕ್ಷರಾಗಿದ್ದ ಶಿವಕುಮಾರ್, ಮಹಾಲಿಂಗಪ್ಪ ರವರು ಚಿಂತನೆ ನಡೆಸಿ, ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯಿಂದ ರೆಜುಲೇಷನ್ ಕೂಡ ಮಾಡಲಾಗಿತ್ತು.

ಅದರ ಪ್ರತಿಫಲವಾಗಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಈಗ ಉತ್ತಮ ದೇವಸ್ಥಾನ ನಿರ್ಮಾಣವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಈ ದೇವಿಯ ಜಾಗವನ್ನು ಶ್ರೀ ಮಾರಿಕಾಂಬಾ ದೇವಿಯ ಸಮೀತಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರರ ತಿಳಿಸಿದರು.

ಪಟ್ಟಣದ ಹಳೇ ಸಂತೆ ಮೈದಾನದಲ್ಲಿರುವ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದ ಜಾಗದ ಹಕ್ಕುಪತ್ರವನ್ನು ಸಮಿತಿಗೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕಾನೂನಿನ ತೊಡಕುಗಳ ನಡುವೆಯೂ ವಿಧಾನ ಸಭೆಯಲ್ಲಿ ಚರ್ಚಿಸಿ ಅನುಮೋದನೆಯಾದ ನಂತರ ದೇವಸ್ಥಾನದ ಆವರಣದ ಜಾಗವನ್ನು ಶ್ರೀ ಮಾರಿಕಾಂಬಾ ದೇವಿಯ ಸಮೀತಿಗೆ ಇದರ ಹಕ್ಕು ಪತ್ರ ಹಾಗೂ ಅಗತ್ಯವಿರುವ ದಾಖಲೆಗಳನ್ನ ಹಸ್ತಾಂತರ ಮಾಡಲಾಗುತ್ತಿದೆ.

ಪುರಸಭಾ ಕಾರ್ಯಾಲಯಕ್ಕೆ ಮೀಸಲಿಟ್ಟ ಜಾಗದ 430/430/413 ರ ಖಾತೆಯ ಒಟ್ಟು ನಿವೇಶನದ ಪೈಕಿ, 1380 ಚದುದರಡಿ ಜಾಗವನ್ನು ಒಟ್ಟು ಒಂದು ಲಕ್ಷಕ್ಕೆ ಬೆಲೆ ನಿಗದಿ ಪಡಿಸಿ ಆದೇಶ ಹೊರಡಿಸಲಾಗಿದೆ.

ಸರ್ಕಾರ ಈ ಜಾಗವನ್ನು ಖಾತೆ ಮಾಡಲು 54 ಲಕ್ಷ ನಿಗದಿ ಮಾಡಿತ್ತು ಅದರೆ ಮುಖ್ಯಮಂತ್ರಿಗಳು ವಿಶೇಷ ಗಮನ ನೀಡಿ ಉಚಿತವಾಗಿ ನೀಡಲು ಪ್ರಯತ್ನದ ಫಲವಾಗಿ ಒಂದು ಲಕ್ಷ ಹಣವನ್ನು ಪುರಸಭಾಗೆ ನಮ್ಮ ತಾಯಿ ಮೈತ್ರಾದೇವಿ‌ ಅವರ ಹೆಸರಿನಲ್ಲಿ ನಾನು ನೀಡುತ್ತಿದ್ದೇನೆ ಎಂದು ಪುರಸಭಾ ಮುಖ್ಯಾಧಿಕಾರಿಗಳಿಗೆ ಸ್ಥಳದಲ್ಲಿಯೇ ಒಂದು ಲಕ್ಷ ನಗದು ನೀಡಿದರು.

ವಿಷೇಶವಾಗಿ ಪುರಸಭಾ ಸದಸ್ಯರ ಅನುಮೋದನೆ ಹಾಗೂ ರಮೇ‌ಶ್ ಗುಂಡ ಅವರ ಪ್ರಯತ್ನದ ಫಲವಾಗಿ ಸರ್ಕಾರ ಕೆಬಿನೆಟ್ ನಲ್ಲಿ ರಾಜ್ಯಪಾಲರ‌ ಸಹಿಯೊಂದಿಗೆ ಜಾಗಕ್ಕೆ ಅಧಿಕೃತ ಖಾತೆ ಮಾಡಲಾಗಿದೆ ಎಂದರು.

ಅನೇಕ ವರ್ಷಗಳ ಕನಸಾಗಿರುವ ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಗೆ ‌ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಉತ್ತಮ ಖಾಸಗಿ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬೇಕಾದ ಸುಸಜ್ಜಿತ ಡಿಪೋ ನಿರ್ಮಾಣ ಕಾರ್ಯ ನಡೆದಿದೆ.

ಇಲ್ಲಿ ನಡೆಯುತ್ತಿದ್ದ ಸಂತೆಯನ್ನು ಪಟ್ಟಣದ ಸ್ವಚ್ಛತೆಗಾಗಿ ಸಂತೆ ಮೈದಾನವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರಿಗೆ ರೈಲ್ವೆ ಯೋಜನೆ ಜಾರಿಗೆ ತರುತ್ತಿದ್ದು, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಕೇಂದ್ರ ಸರ್ಕಾರದ ಸಚಿವರನ್ನು ಕರೆಸಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.

ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷ ಕೆ. ಎಸ್ ಗುರುಮೂರ್ತಿ, ಪುರಸಭಾ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ, ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಗೋಣಿ ಬಸವರಾಜಪ್ಪ, ಕಾರ್ಯದರ್ಶಿ ಹುಲ್ಲುಗಾವಲು ಮಲ್ಲಪ್ಪ, ಪುರಸಭಾ ಸದಸ್ಯರಾದ ಹುಲ್ಮಾರ್ ಮಹೇಶ್, ಮುಖ್ಯಾಧಿಕಾರಿ ಸುರೇಶ್, ಸಮೀತಿಯ ಅನೇಕ ಸದಸ್ಯರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!