ಬೆಂಗಳೂರು: FDA ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಪರೀಕ್ಷೆ‌ ಮುಂದೂಡಿಕೆ…!

ಬೆಂಗಳೂರು: FDA ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಪರೀಕ್ಷೆ‌ ಮುಂದೂಡಿಕೆ…!

ಬೆಂಗಳೂರು: ನಾಳೆ ನಡೆಯಬೇಕಾಗಿದ ಎಫ್ ಡಿಎ ಪರೀಕ್ಷೆಯನ್ನು ಮುಂದೂಡಿಕೆ‌‌ ಮಾಡಿ ಕೆಪಿಎಸಿ ಆದೇಶವನ್ನು ಹೊರಡಿಸಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ ಕೆಪಿಎಸ್ ಸಿ ನಡೆಸುವ ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ನಾಳೆ ನಡೆಯಬೇಕಿದ್ದ ಪರೀಕ್ಷೆ ರದ್ದು ಮಾಡಿ ಕರ್ನಾಟಕ ಲೋಕ ಸೇವಾ ಆಯೋಗ ಆದೇಶಿಸಿದೆ.

ಪ್ರಶ್ನೆಗಳನ್ನು ಲೀಕ್ ಮಾಡಿದ್ದ ಆರೋಪಿಗಳಾ ರಾಚಪ್ಪ ,ಚಂದ್ರು ಸೇರಿ ಆರು ಮಂದಿ ಬಂಧಿಸಲಾಗಿದೆ.

ಎಫ್ ಡಿಎ ಎಕ್ಸ್ ಪೇಪರ್ ಪೊಲೀಸರು ವಶಕ್ಕೆ ಪಡೆದು ಆಯೋಗದ ಅಧಿಕಾರಿಗಳಿಗೆ ಕಳಿಸಿದ್ರು .

ಆಯೋಗ ಇದೇ ಪತ್ರಿಕೆ ಎಂದು ತಿಳಿಸಿದಾಗ ಸೋರಿಕೆಯಾಗಿರೋದು ಗೊತ್ತಾಗಿದೆ.

ಆರೋಪಿಗಳು ಪತ್ರಿಕೆ ಸೋರಿಕೆ ಮಾಡಿ ಮಾರಾಟ ಮಾಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಸಿಸಿಬಿ ಟೀಮ್ ಆರೋಪಿಗಳನ್ನು ಬಂಧಿಸಿದೆ.

ಸದ್ಯ 24 ಲಕ್ಷ ಹಣ ,3 ವಾಹನಗಳು ಸಿಸಿಬಿ ವಶಕ್ಕೆ ಪಡೆದಿದ್ದು,ಪೇಪರ್ ಲೀಕ್ ಆಗಿರುವ ಬಗ್ಗೆ ಕೆಪಿಎಸ್ ಸಿಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನಲೆ ನಾಳೆ ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆ  ಲೋಕಸೇವಾ ಆಯೋಗ ಮುಂದೂಡಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!