ಶಿಕಾರಿಪುರ : ತಾಲೂಕಿನ ನೀರಾವರಿ ಯೋಜನೆಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ: ಬಿ.ವೈ ರಾಘವೇಂದ್ರ..!

ಶಿಕಾರಿಪುರ : ತಾಲೂಕಿನ ನೀರಾವರಿ ಯೋಜನೆಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ: ಬಿ.ವೈ ರಾಘವೇಂದ್ರ..!


ಶಿಕಾರಿಪುರ ತಾಲೂಕಿನ ಹಾಗೂ ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನಗೆಳಿಗೆ ರಾಜ್ಯ ಸರ್ಕಾರ ಅನುದಾನಗಳನ್ನು ನೀಡಿ ಕಾಮಗಾರಿಗಳನ್ನು ನಡೆಸುತ್ತಿದೆ.

ಈ ಸಂದರ್ಭದಲ್ಲಿ ರಟ್ಟಿಹಳ್ಳಿಯ ತಾಲೂಕಿನ ರೈತರು ನಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸು ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರು ಅವರ ಬೆಂಬಲಕ್ಕೆ ನಿಂತು ನಮ್ಮ ತಾಲೂಕಿನ ನೀರಾವರಿ ಯೋಜನೆಗಳಿಗೆ ಕಲ್ಲು ಹಾಕುವ ಪ್ರಯತ್ನ ಮಾಡಿದ್ದಾರೆ ಎಂದರು.

ಪಟ್ಟಣ ಮಂಗಳ ಭವನ ಹಿಂಭಾಗ ಆವರಣದಲ್ಲಿ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಳ್ಳೇಯ ಕೆಲಸಗಳಿಗೆ ಕಲ್ಲು ಹಾಕುವ ಕೆಲಸ ಎಂದಿಗೂ ಮಾಡಬಾರದ್ದು ಎಂದರು.

ಬಿಜೆಪಿ ಪಕ್ಷ ಜನಸಂಘದಿಂದಲೂ ಅನೇಕ ಹಿರಿಯರ ಮಹನೀಯರ ಹೋರಾಟದ ಫಲವಾಗಿ ದೇಶ ರಾಜ್ಯ ಸ್ಥಳೀಯ ಚುನಾವಣೆಯಲ್ಲೂ ಅಧಿಕಾರ ಹಿಡಿಯುತ್ತಿದೆ ನೂತನ ಸದಸ್ಯರು ಹಿರಿಯ ಸದಸ್ಯೆರಿಗೆ ಗೌರವ ನೀಡಬೇಕು ಭ್ರಷ್ಠಚಾರ ರಹಿತ ಆಡಳಿತ ನೀಡಬೇಕು ಎಂದರು.

ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಮಾತನಾಡಿ 39 ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 35 ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಪಡೆದಿದ್ದು ಪಕ್ಷದ ಸಂಘಟನೆಯ ಕಾರ್ಯಕರ್ತರ ಪರಿಶ್ರಮದಿಂದ ಈ ಗೆಲವು ಕಳೆದ ಮೂವತ್ತು ನಾಲವತ್ತು ವರ್ಷಗ ಕಾಲ ಪರಿಶ್ರಮ ನಮ್ಮ ಪಕ್ಷದ ಹಿರಿಯರು ಪಕ್ಷ ವನ್ನು ಕಟ್ಟಿಬೆಳೆಸಿದ ಪರಿಣಾಮ ನಾವು ಇಂದು ಅಧಿಕಾಕ್ಕೆ ಬರಲು ಕಾರಣವಾಗಿದೆ ಎಂದರು.

ಬಿಜೆಪಿ ಪಕ್ಷ ಯಾವುದೇ ಚುನಾವಣೆಯನ್ನು ನಿರ್ಲಕ್ಷ ಮಾಡುವುದಿಲ್ಲ ಅತ್ಯಂತ ಗಂಭೀರವಾಗಿ ಸವಾಲಾಗಿ ಸ್ವೀಕರಿಸಿ ಪರಿಶ್ರಮ ಹಾಕುತ್ತೇವೆ ಈ ಚುನಾವಣೆಯಲ್ಲಿ ಅತೀ ಹೆಚ್ಚು ಯುವಕ ಯುವತಿಯರು ನೂತನವಾಗಿ ಆಯ್ಕೆಯಾಗಿದ್ದಾರೆ ದೇಶ ಮುನ್ನಡೆಸುವ ಜವಬ್ದಾರಿ ನಿಮ್ಮ ಮೇಲಿದೆ ಎಂದರು.


ಅಧ್ಯಕ್ಷರ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಲಾಭಿ ಮಾಡುವಂತಿಲ್ಲ ಪಕ್ಷ ಯಾರಿಗೆ ಕೊಡುತ್ತೆ ಅದಕ್ಕೆ ಎಲ್ಲಾರೂ ಬೆಲೆ ಕೊಡಬೇಕು ಲಾಭಿ ಮಾಡುವವರನ್ನು ಪಕ್ಷ ಶಿಸ್ತು ಕ್ರಮ ತೆಗೆದು ಕೊಳ್ಳುತ್ತೇವೆ ಜನರ ಪರವಾದ ಕೆಲಸ ಮಾಡಿ ಎಂದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!