ಶಿಕಾರಿಪುರ: ಕರ್ತವ್ಯದ ವೇಳೆ ಗುಂಡು,ತುಂಡು ಮೋಜು,ಮಸ್ತಿ 6 ಜನ ಮೆಸ್ಕಂ ನೌಕರರ ಅಮಾನತ್ತು..!

ಶಿಕಾರಿಪುರ: ಕರ್ತವ್ಯದ ವೇಳೆ ಗುಂಡು,ತುಂಡು ಮೋಜು,ಮಸ್ತಿ 6 ಜನ ಮೆಸ್ಕಂ ನೌಕರರ ಅಮಾನತ್ತು..!

ಶಿಕಾರಿಪುರ : ಕರ್ತವ್ಯದ ವೇಳೆ ಮೋಜು, ಮಸ್ತಿ, ಗುಂಡು, ತುಂಡು, ಅರೆಬೆತ್ತಲಾಗಿ ನೃತ್ಯಮಾಡಿದ ಮೆಸ್ಕಂ ನೌಕರರ ವಿಡಿಯೋ ಸಿಕ್ಕಪಟ್ಟೆ ವೈರಲ್ ಆಗಿದ್ದು 6 ಜನ ಮೆಸ್ಕಂ ನೌಕರರನ್ನು ಅಮಾನತುಗೊಳ್ಳಿಸಿ ಕಾರ್ಯಪಾಲಕ ಇಂಜಿನಿಯರ್ ಆದೇಶ ಹೊರಾಡಿಸಿದ್ದಾರೆ.

ಏನುದು ಘಟನೆ:

ಶಿಕಾರಿಪುರ ಪಟ್ಟಣದ‌ ಮೆಸ್ಕಂ ಸಿಬ್ಬಂದಿಗಳಾದ ಚಂದ್ರಶೇಖರ ರಾಥೋಡ್, ಎಸ್ ಎ ರವಿ ಹಾಗೂ ವಿನಯ್ ಕುಮಾರ್ ಕೆ.ಎಲ್, ಮಂಜುನಾಥ್ ಕೆ.ಎಸ್ ,ಸುರೇಶ್ ಎಲ್, ಮಹೇಶ್ವರಪ್ಪ ಟಿ, 4/11/2020 ರಂದು ಕಛೇರಿ ಕರ್ತವ್ಯದ ವೇಳೆಯಲ್ಲಿ ಕಂಪನಿಯ ಸಮವಸ್ತ್ರ ಧರಿಸಿ ಮಾದ್ಯಪಾನ ಮಾಡಿ ಅರೆಬೆತ್ತಲಾಗಿ, ಮೋಜು‌ಮಸ್ತಿ ಮಾಡಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.

ಕಂಪನಿ ಘನತೆ ಗೌರವಕ್ಕೆ ದಕ್ಕೆ ಉಂಟಾಗಿದೆ ಎಂದು ಈ ಘಟನೆಯನ್ನು ಗಂಭೀರಸ್ವರೂಪದ ಕರ್ತವ್ಯಲೋಪ ಎಂದು ಪರಿಗಣಿಸಿ ಈ ನೌಕರರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅಂಜನಾಪುರ ಜಲಾಶಯದ ಬಳಿ ಕರ್ತವ್ಯ ಸಮಯದಲ್ಲಿ ಮೆಸ್ಕಂ ಸಮವಸ್ತ್ರದಲ್ಲಿ ಮಾಧ್ಯಪಾನ, ಅರೆಬೆತ್ತಲಾಗಿರುವ ವಿಡಿಯೋ ಹಾಗೂ ಬೈಕ್ ನಲ್ಲಿ ಸ್ಟೇಟ್ ಮಾಡಿದ ವಿಡಿಯೋಗಳು ಸಮಾಜಿಕ ಜಾಲತಾಣದ ಸಕ್ಕತ್ ವೈರಲ್ ಆಗಿದ್ದು ಮೆಸ್ಕಂ ನೌಕರರ ಈ ವರ್ತನೆ ಇಡೀ ಅತ್ಯಂತ ಖಂಡನೀಯವಾಗಿದೆ‌.

ಅಮಾನತು ಮಾಡಿರುವುದು ಒಳ್ಳೆಯ ಪಾಠ ಕಲಿಸಿದಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!