ಶಿಕಾರಿಪುರ: ಕೇಂದ್ರ, ರಾಜ್ಯ ಸರಕಾರ ಜಿಲ್ಲೆಗೆ ನೀಡಿರುವ ಜನಪರ ಯೋಜನೆ ಜನತೆಗೆ ತಲುಪಿಸುವ ಕೆಲಸ ಆಗಬೇಕು: ಸಂಸದ ಬಿ.ವೈ.ರಾಘವೇಂದ್ರ..!

ಶಿಕಾರಿಪುರ: ಕೇಂದ್ರ, ರಾಜ್ಯ ಸರಕಾರ ಜಿಲ್ಲೆಗೆ ನೀಡಿರುವ ಜನಪರ ಯೋಜನೆ ಜನತೆಗೆ ತಲುಪಿಸುವ ಕೆಲಸ ಆಗಬೇಕು: ಸಂಸದ ಬಿ.ವೈ.ರಾಘವೇಂದ್ರ..!

ಶಿಕಾರಿಪುರ: ಕೇಂದ್ರ ರಾಜ್ಯ ಸರ್ಕಾರಗಳು ಜಿಲ್ಲೆ ಸಾಕಷ್ಟು ಅನುಧಾನ ನೀಡಿ ಅನೇಕ ಕಾಮಗಾರಿ ಅಭಿವೃದ್ಧಿ ಕೆಲಸವನ್ನು ಮಾಡಿದೆ ಈ ರೀತಿಯ ಅನೇಕ ಜನರಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು

ಪಟ್ಟಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕರ‍್ಯಕಾರಿ ಸಮಿತಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ, ಪಟ್ಟಣ, ಶಿರಾಳಕೊಪ್ಪಕ್ಕೆ ಅಂಜನಾಪುರ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಮಹಿಳೆಯರಿಗೆ ನೆಮ್ಮದಿ ನೀಡಿದೆ.

ಕೆರೆಗೆ ನೀರು ತುಂಬಿಸುವ ಯೋಜನೆ ಭರದಿಂದ ಸಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಯಾವುದೆ ಗ್ರಾಮದಲ್ಲೂ ಜನ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ, ಪಟ್ಟಣದಲ್ಲಿ ಗಾರ್ಮೆಂಟ್ ಆರಂಭಗೊಳ್ಳಲಿದ್ದು ಸಾವಿರಾರು ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಜ್ಯೋತಿ ರಮೇಶ್ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣ, ತುಮಕೂರು ಶಿವಮೊಗ್ಗ ಚತುಷ್ಪತ ರಸ್ತೆ, ಸಿಗಂಧೂರು ಸೇತುವೆ, ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಅಭಿವೃದ್ಧಿ, ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳು ಹೀಗೆ ಜಿಲ್ಲೆ, ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಆಗಿದ್ದು ಅವು ಪ್ರತಿ ಮನೆಗೆ ತಲುಪಿಸಬೇಕಿದೆ ಎಂದು ಹೇಳಿದರು.

ಮುಖಂಡರುಗಳಾದ ಜಿ.ಪಂ.ಸದಸ್ಯೆ ರೇಣುಕಾ, ನಿವೇದಿತಾ, ರೂಪಾ, ಗಾಯಿತ್ರಿದೇವಿ, ಬಿಜೆಪಿ ತಾಲೂಕು ಪ್ರಧಾನ ಕರ‍್ಯದರ್ಶಿ ಗಿರೀಶ್ ಮತ್ತಿತರರು ಇದ್ದರು.

News by: Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!