ಶಿಕಾರಿಪುರ: ನ.9 ರಂದು ಪುರಸಭೆ ಅಧ್ಯಕ್ಷ ಉಪಧ್ಯಾಕ್ಷ ಚುನಾವಣೆ ಯಾರಾಗ್ತಾರೆ ಶಿಕಾರಿಪುರ ಪಟ್ಟಣದ ಮೊದಲ ಪ್ರಜೆ..!

ಶಿಕಾರಿಪುರ: ನ.9 ರಂದು ಪುರಸಭೆ ಅಧ್ಯಕ್ಷ ಉಪಧ್ಯಾಕ್ಷ ಚುನಾವಣೆ ಯಾರಾಗ್ತಾರೆ ಶಿಕಾರಿಪುರ ಪಟ್ಟಣದ ಮೊದಲ ಪ್ರಜೆ..!

ಸ್ಟೋರಿ -ರಘು ಶಿಕಾರಿ

ಶಿಕಾರಿಪುರ: ಬಾರಿ ಕುತೂಹಲಕ್ಕೆ ಕಾರಣವಾಗಿರುವ ಪುರಸಭೆ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಇದೆ ತಿಂಗಳ 9 ರಂದು ನಡೆಯುತ್ತಿದ್ದು ಬಿಜೆಪಿ ಪಕ್ಷ ಅಧಿಕಾರ ಹಿಡಿಯುವು ನಿಶ್ಚಿತವಾಗಿದ್ದು ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಬಿಜೆಪಿ ಮಾಡಿಕೊಂಡಿದ್ದೆ.

ಪುರಸಭೆಯ ಈ ಬಾರಿ ಪಕ್ಷಗಳ ಬಲಬಲ:

ಶಿಕಾರಿಪುರ ಪುರಸಭೆಯ ಒಟ್ಟು 23 ಸ್ಥಾನಗಳನ್ನು ಹೊಂದಿದ್ದು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ 12 ಸ್ಥಾನ ಪಡೆದಿದ್ದು ಬಿಜೆಪಿ 8 ಸ್ಥಾನವನ್ನು ಪಡೆದುಕೊಂಡಿತ್ತು ಪಕ್ಷೇತರರು 3 ಸ್ಥಾನವನ್ನು ಪಡೆದುಕೊಂಡಿದ್ದರು

ಇನ್ನೇನೂ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿಯುತ್ತದೆ ಎನ್ನುವಷ್ಟರಲ್ಲಿ ಇಬ್ಬರು ಕಾಂಗ್ರೇಸ್ ಸದಸ್ಯರು ಪುರಸಭಾ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದರು 9 ನೇ ವಾರ್ಡ್ ನ ರಮೇಶ್, 20 ನೇ ವಾರ್ಡ್ ನ ಉಮಾವತಿ ರಾಜಿನಾಮೆ ನೀಡಿದ್ದರು ಇದರ ಜೋತೆಗೆ 3 ಜನ ಪಕ್ಷೇತತರು ಬಿಜೆಪಿ ಪಕ್ಷವನ್ನು ಸೇರಿದರು ಕಳೆದ ವಾರದ ಹಿಂದೆ ಮತ್ತೋಬ್ಬ ಪುರಸಭಾ ಕಾಂಗ್ರೇಸ್ ಸದಸ್ಯೆ 5 ನೇ ವಾರ್ಡ್ ನ ಜ್ಯೋತಿ ಸಿದ್ದಲಿಂಗೇಶ್ ರಾಜಿನಾಮೆ ನೀಡಿ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ.

ಇದರಿಂದ ಬಿಜೆಪಿ 8ಸ್ಥಾನ 3 ಪಕ್ಷೇತರರು ಸೇರಿ 11ಜನ ಸದಸ್ಯ ಬಲವಿದ್ದು ಶಾಸಕರು ಮತ್ತು ಸಂಸದರು ಕೂಡ ಮತ ಹಾಕಬಹುದಾಗಿದೆ ಕಾಂಗ್ರೇಸ್ ಪಕ್ಷದಲ್ಲಿ ಇದ 12 ಜನ ಸದಸ್ಯರಲ್ಲಿ ಈಗ 9 ಜನ ಇಳಿದಿದೆ ಇನ್ನೂ ಇಬ್ಬರು ಸದಸ್ಯರು ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಪುರಸಭೆ ಅಧಿಕಾರ ಹಿಡಿಯಲು ಮುಂದಾಗಿದ ಕಾಂಗ್ರೇಸ್ ಪಕ್ಷಕ್ಕೆ ಬಾರಿ ನಿರಾಸೆಯಾಗಿದ್ದು ಬಿಜೆಪಿ ಪಕ್ಷ ಪುರಸಭೆ ಆಡಳಿತ ನಡೆಸಲು ಸಿದ್ದವಾಗಿದೆ .

ಯಾರಾಗ್ತಾರೆ ಪುರಸಭೆ ಅಧ್ಯಕ್ಷರು

ರೇಖಾಬಾಯಿ ಮಂಜುಸಿಂಗ್

ಶಿಕಾರಿಪುರ ಪುರಸಭೆಯ ಅಧ್ಯಕ್ಷ ಈ ಬಾರಿಯ ಮೀಸಲಾತಿಯ ಬಿಸಿಎಂ ಎ ಮಹಿಳೆ ಸ್ಥಾನ ನೀಡಿದ್ದು ಈ ಮೀಸಲಾತಿಗೆ ಬಿಜೆಪಿಯಲ್ಲಿ ಪ್ರಸ್ತುತ 3 ಜನ ಸದಸ್ಯರು ಇದ್ದು 16 ನೇ ವಾರ್ಡ್ ನ ಪುರಸಭಾ ಸದಸ್ಯರಾದ ರೇಖಾಬಾಯಿ ಮಂಜುಸಿಂಗ್ ಪಕ್ಷೇತರಾಗಿ ಜಯಗಳಿಸಿ ಮರುದಿನವೇ ಬಿಜೆಪಿ ಪಕ್ಷವನ್ನು ಸೇರಿದ್ದರು ಇವರ ಮಾವ ಕೃಷ್ಣಸಿಂಗ್ ಮಾಜಿ ಪುರಸಭಾ ಅಧ್ಯಕ್ಷರಾಗಿದ್ದು ಹಾಗೂ ಬಿಜೆಪಿ ಪಕ್ಷದ ಕಟ್ಟಾಲುಗಳಾಗಿದ್ದು ಎನ್ನಲಾಗಿದ್ದು ಇವರಿಗೆ ಅಧ್ಯಕ್ಷ ಸ್ಥಾನ ಬಿಜೆಪಿ ಪಕ್ಷ ನೀಡುಬಹುದು ಎನ್ನಲಾಗುತ್ತಿದೆ.

ಲಕ್ಷ್ಮಿ ಮಹಾಲಿಂಗಪ್ಪ

ಇನ್ನೂ 12 ನೇ ವಾರ್ಡ್ ಲಕ್ಷ್ಮಿ ಮಹಾಲಿಂಗಪ್ಪ ಬಿಜೆಪಿ ಪಕ್ಷದಿಂದ ಜಯಗಳಿಸಿದ್ದು ಬಿಜೆಪಿಯಲ್ಲಿ ಮಹಾಲಿಂಗಪ್ಪ ಅವರ ಸಹೋದರ ಶಾಂತಕುಮಾರ್ (ಶಾಂತಣ್ಣ) ಕ್ರೀಯಶೀಲ ಕಾರ್ಯಕರ್ತರಾಗಿದ್ದರು ಅವರ ಪ್ರಸ್ತುತ ಅವರು ಮರಣ ಹೊಂದಿದ್ದು ಅವರ ಜನರ ಪರವಾದ ಕಳಾಜಿ ಇಂದಿಗೂ ಜನರ ಮನಸ್ಸಿನಲ್ಲಿ ಇದ್ದು ಲಕ್ಷ್ಮಿ ಮಹಾಲಿಂಗ ಅವರಿಗೆ ಅಧ್ಯಕ್ಷ ಸ್ಥಾನ ಹೊಲಿಯುವುದಾ ಎಂಬುದು ಕಾದುನೊಡಬೇಕಾಗಿದೆ.

ರೂಪ ಮಂಜುನಾಥ್

7 ನೇ ವಾರ್ಡ್ ನ ರೂಪ ಮಂಜುನಾಥ್ ಕಳೆದ 20 ವರ್ಷದಿಂದಲ್ಲೂ ಈ ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷವೇ ಜಯಗಳಿಸುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಈ ವಾರ್ಡ್ ನಲ್ಲಿ ಗೆದಿದ್ದು ಬಿಜೆಪಿ ಪಕ್ಷ ಹೊಸಬರಿಗೆ ಯುವಕರಿಗೆ ಇತ್ತಿಚೀಗೆ ಹೆಚ್ಚಿನ ಒಲವು ತೊರುತ್ತಿದ್ದು ಇವರಿಗೆ ಅಧ್ಯಕ್ಷ ಸ್ಥಾನ ನೀಡಬಹುದಾ ಕಾದು ನೊಡಬೇಕಾಗಿದೆ.

ಈ ಮೂರು ಸದಸ್ಯರೊಂದಿಗೆ “ಶಿಕಾರಿ ನ್ಯೂಸ್” ದೂರವಾಣಿ ಮೂಲಕ ಮಾತನಾಡಿದ್ದು ಪಕ್ಷದ ನಿರ್ಧಾರವೇ ಅಂತಿಮ ಪಕ್ಷದ ನಿರ್ಧಾರಕ್ಕೆ ತೀರ್ಮಾನಕ್ಕೆ ನಾವು ಬದ್ದರಿದ್ದೇವೆ ಎಂದಿದ್ದಾರೆ.

ಉಪಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿ:

ಶಿಕಾರಿಪುರ ಪುರಸಭೆಯ ಉಪಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಎದರಾಗಿದೆ ಏಕೆಂದರೆ ಉಪಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಘೋಷಣೆಯಾಗಿದ್ದು ಪಕ್ಷೇತರರಿಗೆ ನೀಡುತ್ತದೆಯೇ ಅಥವಾ ಪಕ್ಷದಲ್ಲಿಯೇ ಇರುವವರನ್ನು ಗುರುತಿಸಿ ಸ್ಥಾನ ನೀಡುತ್ತದಯೇ ಎಂಬುದು ಸಾಕಷ್ಟು ಗೊಂದಲವಾಗಿದ್ದು ಸೊಮವಾರ ಚುನಾವಣೆ ನಂತರ ಯಾರು ಉಪಧ್ಯಕ್ಷರಾಗುತ್ತಾರೆ ಎನ್ನುವುದು ತಿಳಿಯುತ್ತದೆ.

ಪುರಸಭೆ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಕುರಿತು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ ಶಿಕಾರಿಪುರ ಜನತೆ ಬಿಜೆಪಿ ದುರಾಡಳಿತಕ್ಕೆ ಬೆಸಾತ್ತು ಕಾಂಗ್ರೇಸ್ ಪಕ್ಷಕ್ಕೆ ಬಹುಮತ ನೀಡಿದ್ದರು ಅದರೆ ಕೆಲ ಪಕ್ಷದ್ರೋಹಿಗಳು ಕಾಂಗ್ರೇಸ್ ಪಕ್ಷಕ್ಕೆ ಪುರಸಭೆಗೆ ರಾಜಿನಾಮೆ ನೀಡಿ ಬಿಜೆಪಿ ಪಕ್ಷದ ಆಮೀಷಕ್ಕೆ ಒಳಗಾಗಿದ್ದಾರೆ ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ರಾಜ್ಯದಲ್ಲಿ ಹೇಗೆ ಎಂಎಲ್ ಎಗಳನ್ನು ರಾಜಿನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಂಡರು ಅದೇ ರೀತಿಯಲ್ಲಿ ಶಿಕಾರಿಪುರದಲ್ಲೂ ನಡೆದಿದೆ ಇದು ಅವರಿಗೆ ಹೊಸದೇನಲ್ಲ ನಾವು ಪ್ರಭಲ ವಿರೋಧ ಪಕ್ಷವಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಒಟ್ಟಿನಲ್ಲಿ ಶಿಕಾರಿಪುರ ಪುರಸಭೆ ಈ ಬಾರಿ ಅತ್ಯಂತ ಕೂತುಹಲಕ್ಕೆ ಸಾಕ್ಷಿಯಾಗಿದ್ದು ಬಾರಿ ಚೆರ್ಚೆಗೆ ಗ್ರಸವಾಗಿತ್ತು ಸೊಮವಾರ ಅಧ್ಯಕ್ಷ ಉಪಧ್ಯಕ್ಷ ಚುನಾವಣೆಯ ನಂತರ ಇದಕ್ಕೆಲ ತೆರೆಬಿಳಲಿದೆ ರಾಜಿನಾಮೆ ನೀಡಿದ ಸ್ಥಾನಗಳಿಗೆ ಮರು ಚುನಾವಣೆಗಳು ನಡೆಯಲಿದೆ.

News by: Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!