ಶಿಶುಗಳಲ್ಲಿ “ನಿಜ ಜಾಂಡೀಸ್” ಏಕೆ‌ ಬರುತ್ತದೆ..?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಶಿಶುಗಳಲ್ಲಿ “ನಿಜ ಜಾಂಡೀಸ್” ಏಕೆ‌ ಬರುತ್ತದೆ..?

ನಿನ್ನೆಯ ಸಂಚಿಕೆಯಲ್ಲಿ ಕೆಂಪುರಕ್ತಕಣಗಳ ಒಡೆಯುವಿಕೆಯಿಂದ (Haemolysis) ಬರುವ ತಾತ್ಕಾಲಿಕ ಜಾಂಡೀಸ್ ನ ವಿವರಣೆಯನ್ನು ನೋಡಿದೆವು ಮತ್ತು ವಾಸ್ತವದಲ್ಲಿ ಅದು ಜಾಂಡೀಸ್ ಅಲ್ಲ ಎಂದು ತಿಳಿದೆವು.

ಇಂದು ಒಂದು ರೋಗವಾಗಿ ಕಂಡುಬರುವ
“ನಿಜ ಜಾಂಡೀಸ್” ಅನ್ನು ನೋಡೋಣ👇

ಶಿಶುಗಳಲ್ಲಿ ಈ ತರಹದ ನಿಜ ಜಾಂಡೀಸ್ ಅತ್ಯಂತ ವಿರಳ. ಅಂದರೆ, ಇಲ್ಲಿ ಯಕೃತ್ತಿನ ತೊಂದರೆಯಿಂದ Direct bilirubin ಹೆಚ್ಚಾಗಿರುತ್ತದೆ. Haemolysis ನಿಂದ ಹೆಚ್ಚಾಗುವ Indirect bilirubin ಮೂರು-ನಾಲ್ಕು ದಿನಗಳಲ್ಲಿ ಸಂಪೂರ್ಣ ಗುಣವಾಗುವುದು. ಆದರೆ, ಯಕೃತ್ತಿನ ತೊಂದರೆಯಿಂದ ಬರುವ ರೋಗವಾದ ನಿಜ ಕಾಮಾಲೆ ಅಥವಾ ನಿಜ ಜಾಂಡೀಸ್ ಬಹಳ ಕಾಲ ಶಿಶುವನ್ನು ಕಾಡುತ್ತದೆ ಮತ್ತು ಕೆಲವೊಮ್ಮೆ ಪ್ರಾಣಾಪಾಯವನ್ನೂ ತರುತ್ತದೆ.

ಈ ನಿಜ ಜಾಂಡೀಸ್ ಪೂರ್ಣ ಗುಣವಾದ ಮೇಲೂ ಸಹ ಇದರ ಅನೇಕ ಆಯಾಮಗಳನ್ನು ಶಿಶುವು ಜನ್ಮಪೂರ್ತಿಯಾಗಿ ದುರ್ಬಲತೆಯ ಅಥವಾ ರೋಗದ ರೂಪದಲ್ಲಿ ಅನುಭವಿಸಬೇಕಾಗುತ್ತದೆ. ಏಕೆಂದರೆ, “ಯಕೃತ್ತೇ ಮಾನವನ ಸರ್ವ ಅವಯವಗಳ ತಾಯಿ”💫
ಈ ಶರೀರ ಇರುವವರೆಗೂ ಎಲ್ಲಾ ಜೀವಕೋಶಗಳೂ ಯಕೃತ್ತಿನಿಂದಲೇ ಪೋಷಿಸಲ್ಪಡುತ್ತವೆ.

ಇಂತಹ ಯಕೃತ್, ಶಿಶು ಜನಿಸಿದಾರಭ್ಯವೇ ರೋಗಕ್ಕೆ ತುತ್ತಾಗಿ ದುರ್ಬಲತೆಯನ್ನು ಉಳಿಸಿಕೊಂಡರೆ ಮುಂದೆ ಯಾವುದೋ ಒಂದು ಅಥವಾ ಅನೇಕ ಅವಯವಗಳನ್ನು ದುರ್ಬಲಗೊಳಿಸಬಹುದು ಮತ್ತು ಆ ವ್ಯಕ್ತಿಯ ಆಹಾರ-ವಿಹಾರಾಭ್ಯಾಸಗಳ ಆಧಾರದಿಂದ ಅವಯವಗಳನ್ನು ರೋಗಕ್ಕೆ ತಳ್ಳಲೂಬಹುದು.

ಪೋಷಕರ ದೃಷ್ಟಿ:
ಹೀಗೆ ನಿಜ ಜಾಂಡೀಸ್ ಗೆ ತುತ್ತಾಗುವ ಶಿಶುವಿನ ಪೋಷಕರು ನಮ್ಮ ಹಣೆಬರಹ ಎಂದು ಕೊರಗುತ್ತಾರೆ ಮತ್ತು ಶಿಶುವಿಗೆ ಈ ರೋಗ ಬರುವಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದುಕೊಳ್ಳುತ್ತಾರೆ.

ಏಕೆಂದರೆ, ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಈ ರೋಗದ ಮೂಲಕಾರಣ ತಿಳಿದಿಲ್ಲವಾದ್ದರಿಂದ ಜಗತ್ತಿನ ಯಾವ ಗರ್ಭಿಣಿಗೂ ಇದನ್ನು ತಡೆಯಲು ಹೇಗೆ ನಿಗಾವಹಿಸಬೇಕೆಂಬ ಒಂದು ಸಣ್ಣ ಮಾಹಿತಿಯನ್ನೂ ಕೊಡುತ್ತಿಲ್ಲ‼️

ಈ ರೋಗಕ್ಕೆ ನಿಜವಾದ ಕಾರಣವೇನು❓
ಗರ್ಭಧರಿಸುವ ಪೂರ್ವದಿಂದಲೂ ಪೋಷಣೆಗೆ ಬೇಕಾದ ಪದಾರ್ಥಗಳನ್ನು ಅಲ್ಪ ಬಳಕೆ ಮಾಡುತ್ತಾ, ಬಾಯಿರುಚಿಗಾಗಿ ಉಪ್ಪು, ಹುಳಿ, ಖಾರ ಮತ್ತು ತೀಕ್ಷ್ಣ ಮಸಾಲೆಗಳನ್ನು ಮತ್ತು ಎಣ್ಣೆ ಪದಾರ್ಥಗಳನ್ನು (ಚಿತ್ರಾನ್ನ, ಫ್ರಯ್ಡ್ ರೈಸ್….) ಅತಿಯಾಗಿ ಸೇವಿಸುವ ರೂಢಿಯನ್ನು ಇಟ್ಟುಕೊಂಡ ಸ್ತ್ರೀಯು ಗರ್ಭಧರಿಸಿದ ಮೇಲೂ ತನ್ನ ಬಾಯಿಚಪಲವನ್ನು ಮುಂದುವರಿಸಿದರೆ, ಅವಳ “ರಸಧಾತು”ವು ಅತ್ಯಂತ ದುರ್ಬಲವಾಗಿಯೂ ಮತ್ತು ಪಿತ್ತದೋಷದ ಪ್ರಾಧಾನ್ಯತೆಯಿಂದಲೂ ಗರ್ಭಸ್ಥ ಶಿಶುವಿಗೆ ತಲುಪುತ್ತದೆ. ಏಕೆಂದರೆ, ಗರ್ಭಪೋಷಣೆಯು ಗರ್ಭಿಣಿಯ ರಸಧಾತುವಿನಿಂದಲೇ ಆಗುತ್ತಿರುತ್ತದೆ.

ಹಾಗೆಯೇ, ಜನಿಸಿದ ನಂತರ ಆ ಶಿಶುವಿಗೆ ಬಾಣಂತಿಯ / ತಾಯಿಯ ರಸಧಾತುವಿನಿಂದಲೇ ಎದೆಹಾಲಿನ ರೂಪದಲ್ಲಿ ಪೋಷಣೆಯಾಗುತ್ತಿರುತ್ತದೆ.

“ಪಿತ್ತ ದೋಷಪ್ರಧಾನ ಮತ್ತು ದುರ್ಬಲತೆ”ಯಿಂದ ಕೂಡಿದ ತಾಯಿಯ ರಸಧಾತುವೇ ಶಿಶುವಿನ ಯಕೃತ್ ವಿಕಾರಕ್ಕೆ ನೇರ ಕಾರಣ👀

ಆತ್ಮೀಯರೇ 👥
ನಿಜ ಜಾಂಡೀಸ್ ರೋಗವನ್ನು ಹೊಂದಿರುವ ಶಿಶುಗಳ ತಾಯಿಯ ಆಹಾರ-ವಿಹಾರಗಳನ್ನು ದಯಮಾಡಿ ಗಮನಿಸಿ ನೋಡಿ.

ನಿಮ್ಮಲ್ಲಿ ಯಾರಾದರೂ ಈ ಸಂಕಟವನ್ನು ಅನುಭವಿಸಿದ್ದಲ್ಲಿ ಮತ್ತು ಈ ಮೇಲಿನ ಕಾರಣಗಳು ಸರಿ ಎನಿಸಿದಲ್ಲಿ ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು, ಪರಿಚಯಸ್ಥರಲ್ಲಿ ಈ ವಿಷಯವನ್ನು ಹಂಚಿಕೊಂಡು ಶಿಶುಗಳು ಜಾಂಡೀಸ್ ಗೆ ತುತ್ತಾಗುವುದನ್ನು ತಪ್ಪಿಸಿರಿ.

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!