ಶಿವಮೊಗ್ಗ : ಸಿಎಂ ಯಡಿಯೂರಪ್ಪ ಸ್ವಕ್ಷೇತ್ರಕ್ಕೆ ಆಗಮನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ…!

ಶಿವಮೊಗ್ಗ : ಸಿಎಂ ಯಡಿಯೂರಪ್ಪ ಸ್ವಕ್ಷೇತ್ರಕ್ಕೆ ಆಗಮನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ…!

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಕ್ಟೋಬರ್ 18 ರಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಸಿಎಂ‌ ಆದ ಬಳಿಕ ನಾಲ್ಕನೇ ಬಾರಿಗೆ ಶಿವಮೊಗ್ಗ ಜಿಲ್ಲೆ ಹಾಗೂ ಸ್ವಕ್ಷೇತ್ರ ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ.

ಅ.18ರಂದು ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 3.55 ಶಿಕಾರಿಪುರಕ್ಕೆ ಆಗಮಿಸಲಿರುವ ಅವರು ಅಂದು ವಾಸ್ತವ್ಯ ಮಾಡಲಿದ್ದಾರೆ.
ಅ.19ರಂದು ಬೆಳಗ್ಗೆ 11 ಗಂಟೆಗೆ ಕಸಬಾ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಉಡುತಡಿ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳದ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಲಿದ್ದಾರೆ.

ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ ಉದ್ಘಾಟನೆಯಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ.

ಎಲ್ಲ ಕಾರ್ಯಕ್ರಮಗಳಿಗೂ ಶಿಕಾರಿಪುರ ಸಾಂಸ್ಕೃತಿಕ ಭವನದಲ್ಲಿ ಚಾಲನೆ ನೀಡಲಿದ್ದು ಅಂದು ಶಿಕಾರಿಪುರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಅ.20ರಂದು ಮುಂಜಾನೆ 10 ಗಂಟೆಗೆ ಸಾಂಸ್ಕೃತಿಕ ಭವನದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!