ಸದೃಢ ಮೂತ್ರಪಿಂಡಗಳು ಬೇಕೇ❓ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಿ…!

ಸದೃಢ ಮೂತ್ರಪಿಂಡಗಳು ಬೇಕೇ❓ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಿ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಸದೃಢ ಮೂತ್ರಪಿಂಡಗಳು ಬೇಕೇ ❓ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಿ…!

ಹಿಂದಿನ ಸಂಚಿಕೆಯಲ್ಲಿ ನೋಡಿದಂತೆ ಪ್ರಾಕೃತ ಗುಣಾತ್ಮಕ ಮೂತ್ರೋತ್ಪತ್ತಿಯಾಗಲು ಯಕೃತ್ತಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳೇ ಕಾರಣ ಮತ್ತು ಅಲ್ಲಿಯೇ ಮೂತ್ರೋತ್ಪತ್ತಿ ಆಗುವುದು.
ಹಾಗಾಗಿ ಆರೋಗ್ಯವಂತ ಯಕೃತ್ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೂತ್ರಪಿಂಡಗಳ ಸಂರಕ್ಷಣೆಯನ್ನು ಮಾಡುತ್ತದೆ.

ಯಕೃತ್ ಈ ಕೆಳಗಿನ ಹಲವಾರು ಕಾರ್ಯಗಳನ್ನು ಮಾಡುತ್ತದೆ ⏬
★ಜೀರ್ಣಕ್ರಿಯೆ
★ಹಾರ್ಮೋನ್ ಉತ್ಪತ್ತಿ
★ರಕ್ತೋತ್ಪತ್ತಿ
★ರಕ್ತನಾಳಗಳ ಸಂರಕ್ಷಣೆ
★ಹೃದಯ ಸಂರಕ್ಷಕ ಹಾರ್ಮೋನ್ ಉತ್ಪತ್ತಿ
★ಮಾಂಸಖಂಡಗಳ ಆರೋಗ್ಯ ಕಾಪಾಡುವುದು
★ಮೂತ್ರೋತ್ಪತ್ತಿ.

ಹೀಗೆ, ಶರೀರದ ಎಲ್ಲ ಜೀವಕೋಶಗಳನ್ನು ಯಕೃತ್ ತಾಯಿಯಂತೆ ಸಂರಕ್ಷಿಸುತ್ತದೆ.
〰️〰️〰️〰️〰️〰️〰️〰️〰️〰️〰️

ಮೂತ್ರಪಿಂಡಗಳ ಆರೋಗ್ಯಕ್ಕಾಗಿ
ಮೂತ್ರೋತ್ಪತ್ತಿಯನ್ನು ಮಾಡುವ ಯಕೃತ್ತಿನ ಕೆಲಸಕ್ಕೆ ಸಹಾಯಕವಾಗುವ ಅಂಶಗಳನ್ನು ನೋಡೋಣ ಮತ್ತು ಸರ್ವದಾ ಪಾಲಿಸೋಣ.

ಆಹಾರ
★ವಿಹಾರ
★ಜೀವನಶೈಲಿ
★ನಿದ್ರೆ
★ಅನುರಕ್ತಭಾವ

1️⃣ಆಹಾರ:
ಯಾವ ಆಹಾರವನ್ನು ಸೇವಿಸಿದರೆ ನಿಮಗೆ ಹೊಟ್ಟೆ ಭಾರವಾಗುವುದಿಲ್ಲವೋ ಮತ್ತು ಆಹಾರ ಸೇವಿಸಿ 90 ನಿಮಿಷಗಳಲ್ಲಿ ಜಠರದ ಭಾಗ ಹಗುರವಾಗುವುದೋ ಅದೇ ಯಕೃತ್ತಿನ ಆರೋಗ್ಯದ ಮೂಲ ಗುಟ್ಟು.
ಏಕೆಂದರೆ, ಜೀರ್ಣಗೊಂಡು ಪ್ರತ್ಯೇಕವಾಗದ ಆಹಾರದ ಕಣಗಳು ಉದರ ಭಾರವನ್ನು ಉಂಟುಮಾಡುತ್ತವೆ. ಜೀರ್ಣವಾಗದ ಈ ಆಹಾರದ ಕಣಗಳೇ ದೊಡ್ಡ ಕಣಗಳುಳ್ಳ ಮೂತ್ರವನ್ನು ಉತ್ಪತ್ತಿ ಮಾಡಿ ಮೂತ್ರಪಿಂಡಗಳನ್ನು ಹಾಳುಮಾಡುತ್ತವೆ.

ಇನ್ನೊಂದು ಪ್ರಮುಖ ಅಂಶವೆಂದರೆ, ಬಾಯರಿಕೆಯಾಗದೇ ಅನಗತ್ಯವಾಗಿ ಮತ್ತು ಯಾವುದೋ ಪುಸ್ತಕ, ವಿಜ್ಞಾನ ಮತ್ತು ವ್ಯಕ್ತಿ ಹೇಳಿದರೆಂದು ಲೀಟರ್ ಗಳ ಲೆಕ್ಕದಲ್ಲಿ ಅತಿಯಾಗಿ ನೀರನ್ನು ಕುಡಿದರೆ ಯಕೃತಿನ ಮೂತ್ರೋತ್ಪತ್ತಿ ಮಾಡುವ ಭಾಗ (ಯಕೃತ್ತಿನಲ್ಲಿರುವ ಅಪಾನ ವಾಯುವಿನ ಸ್ಥಾನ) ದೂಷಣೆಗೊಳ್ಳುತ್ತದೆ.

2️⃣ವಿಹಾರ:
ದಿನನಿತ್ಯದ ಶಾರೀರಿಕ ಶ್ರಮವನ್ನೇ ವಿಹಾರವೆಂದು ಹೇಳುತ್ತೇವೆ. ಅತೀ ಕಡಿಮೆಯೆಂದರೂ ಹಣೆಯಲ್ಲಿ ಬೆವರು ಬರುವ ತನಕ ಶಾರೀರಿಕ ಕೆಲಸಗಳನ್ನು ನಿತ್ಯವೂ ಮೂರುಬಾರಿಯಾದರೂ ಮಾಡುತ್ತಿರಬೇಕು. ಹಾಗಾದಾಗ ಮಾತ್ರ ಚಯಾಪಚಯಕ್ರಿಯೆ ಸರಿಯಾಗಿ ನಡೆದು ಮಲಾಂಶವು ಜೀವಕೋಶಗಳಿಂದ ಹೊರಬರುತ್ತದೆ.

3️⃣ಜೀವನಶೈಲಿ:
ಶರೀರ-ಮನಸ್ಸುಗಳಿಗೆ ಒಗ್ಗುತ್ತದೆಯೋ ಅಥವಾ ಅಲರ್ಜಿಯನ್ನುಂಟು ಮಾಡುತ್ತದೆಯೋ ಎಂಬುದನ್ನು ತಿಳಿಯದೇ ತಿನ್ನುವ, ಕುಡಿಯುವ, ತೊಡುವ , ಕರ್ಮಗಳಿಂದ ಶರೀರದಲ್ಲಿ ಆಂತರಿಕ ವಿಷ ಹೆಚ್ಚುತ್ತದೆ. ಕಾಲಾಂತರದಲ್ಲಿ ಪರಿಣಾಮ ಬೀರುವ ಈ ವಿಷವು ಯಕೃತ್-ಮೂತ್ರಪಿಂಡಗಳನ್ನು ಹಾಳುಮಾಡುತ್ತದೆ.

4️⃣ನಿದ್ರೆ:
ಕಡ್ಡಾಯವಾಗಿ ರಾತ್ರಿ 9 ರಿಂದ 10 ರ ಒಳಗೆ ಆರಂಭವಾಗಿ ಬೆಳಗಿನ ಜಾವ 5 ರಿಂದ 6 ರ ವರೆಗಿನ ನಿದ್ರೆಯೇ ನಿಜವಾದ ಆರೋಗ್ಯವನ್ನು ತಂದುಕೊಡುವ ನಿದ್ರೆಯಾಗಿದೆ. ಅದರ ಹೊರತು 24 ಗಂಟೆಗಳಲ್ಲಿ ಯಾವುದೋ 8 ತಾಸು ನಿದ್ರೆ ಆರೋಗ್ಯವನ್ನು ತಂದುಕೊಡದು.
ಏಕೆಂದರೆ, ಈ ಶರೀರವು ಜಡವಸ್ತುವಲ್ಲ. ಅಂದರೆ, ಹೊರಪ್ರಕೃತಿಯಲ್ಲಿನ ಬದಲಾವಣೆಗಳೊಂದಿಗೆ ನಿರಂತರ ಸಂಬಂಧವನ್ನು ಹೊಂದಿರುತ್ತದೆ.

5️⃣ಅನುರಕ್ತಭಾವ:
ತಂದೆ-ತಾಯಿಗಳು ತಮ್ಮ ಮಗುವಿನೊಂದಿಗೆ ಹೊಂದಿರುವ ಭಾವವನ್ನು ಅನುರಕ್ತಭಾವ ಎಂದು ಹೇಳಬಹುದು.

ಈ ಭಾವದ ಸ್ವಲ್ಪ ಅಂಶವನ್ನಾದರೂ ಪ್ರಪಂಚದ ಜನರೊಂದಿಗೆ (ಸಹಜೀವಿಗಳೊಂದಿಗೆ), ಪ್ರಾಣಿ-ಪಕ್ಷಿಗಳೊಂದಿಗೆ, ಗಿಡ-ಮರಗಳೊಂದಿಗೆ ಹೊಂದಿದ್ದರೆ ನಮ್ಮ ಅಂತರಿಕ ಅವಯವಗಳ ನಡುವಿನ ಅನುರಕ್ತಭಾವ ವೃದ್ಧಿಯಾಗುತ್ತದೆ. ಆಗ, ಯಕೃತ್-ಮೂತ್ರಪಿಂಡಗಳ ನಡುವಿನ, ಯಕೃತ್-ರಕ್ತನಾಳಗಳ ನಡುವಿನ, ಯಕೃತ್-ಹೃದಯದ ನಡುವಿನ , ಯಕೃತ್-ಇತರ ಅವಯವಗಳ ನಡುವಿನ ಪರಸ್ಪರ ಭಾವನಾತ್ಮಕ ಹೊಂದಾಣಿಕೆ ಏರ್ಪಡುತ್ತದೆ.
👤🍃🍃👦👧
ಆಗ, ಸಹಜವಾಗಿ ಯಕೃತ್ ಯಾವ ರೀತಿಯ ಗುಣಾತ್ಮಕ ಮೂತ್ರವನ್ನು ಉತ್ಪತ್ತಿ ಮಾಡಬೇಕೆಂದು ಕಿಡ್ನಿ ಮೊದಲು ಮಾಡಿ ಇತರ ಅವಯವಗಳು ನಿರ್ಧರಿಸುತ್ತವೆ ಮತ್ತು ಸಹಕಾರ ನೀಡುತ್ತವೆ.

ಇದೇ, ನಿಜವಾದ ಆರೋಗ್ಯವಲ್ಲವೇ⁉️

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!