ಹುಳಿ ಬರಿಸಿದ ಆಹಾರಗಳು ಅಪಾಯಕಾರಿ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ:

ಆಹಾರದಲ್ಲಿನ ಶಿಸ್ತು – ಭಾಗ 3

“ಹುಳಿ ಬರಿಸಿದ ಆಹಾರಗಳು ಅಪಾಯಕಾರಿ”.

ಸಮಶೀತೋಷ್ಣ ವಲಯದ ಜೀವಿಗಳಾದ ಭಾರತೀಯರಿಗೆ ಕಿಣ್ವೀಕರಣ (fermented) ಗೊಳಿಸಿದ ಆಹಾರಗಳು ಕಾಲಾಂತರದಲ್ಲಿ ಅಪಾಯವನ್ನುಂಟುಮಾಡುತ್ತವೆ.
ಉದಾಹರಣೆಗೆ: ಉದ್ದು ಹಾಕಿದ ದೋಸೆ, ಇಡ್ಲಿ, ಪಡ್ಡುಗಳು.
ಬ್ರೆಡ್, ಬಿಸ್ಕೆಟ್, ಕೇಕ್ ಗಳು.

★★★★★★★

50 ವರ್ಷಗಳ ಹಿಂದೆ ಭಾರತದಲ್ಲಿ ಯಾವುದೇ ಆಹಾರ ಹುಳಿಬಂದರೆ ಅದನ್ನು ಸಾಕುಪ್ರಾಣಿಗಳಿಗೆ ಹಾಕುತ್ತಿದ್ದರು. ದುರದೃಷ್ಟವಶಾತ್ ಇಂದು ನಾವಾಗಿ ಹುಳಿಬರಿಸಿಕೊಂಡು, ಅಷ್ಟಲ್ಲದೇ ಪರಮ ಶ್ರೇಷ್ಠ ಆಹಾರ ಎಂಬ ಬಿರುದನ್ನು ಕೊಟ್ಟುಕೊಂಡು ಅತೀ ಹೆಚ್ಚು ಇಡ್ಲಿಯನ್ನು ಸೇವಿಸುತ್ತಿದ್ದೇವೆ, ಹಾಗೆಯೇ, ದೋಸೆ, ಪಡ್ಡು, ಬ್ರೆಡ್, ಬಿಸ್ಕೆಟ್, ಕೇಕ್ ಗಳು.

★★★★★★★

ಮೇಲಿನ ಎಲ್ಲಾ ಆಹಾರ ಪದಾರ್ಥಗಳು ಪಚನ ಕ್ರಿಯೆಯಲ್ಲಿ ಉಷ್ಣತೆಯನ್ನು ಹೊರಹಾಕುವುದರಿಂದ ಮತ್ತು ರಕ್ತದಲ್ಲಿ ಆಮ್ಲದ ಪ್ರಭಾವವನ್ನು ಬೀರುವುದರಿಂದ (Acid) ಇಡೀ ಶರೀರವು ಉಷ್ಣತೆಯನ್ನು ಅನುಭವಿಸುತ್ತದೆ. ಸಾಮಾನ್ಯ ಭಾಷೆಯಲ್ಲಿ ಜನರು ಇದನ್ನು ” ನನಗೆ heat ಆಗಿದೆ”, “ನನ್ನ ಶರೀರ ಸ್ವಲ್ಪ heat” ಎಂದು ಹೇಳುತ್ತಾರೆ.

ದೋಸೆ ಇಡ್ಲಿಗಳಂತೂ ಆಲ್ಕೋಹಾಲ್ ಪ್ರಭಾವವನ್ನೇ ಬೀರುತ್ತವೆ. ಗಮನಿಸಿ ನೋಡಿ, ದೋಸೆ ತಿಂದ ನಂತರ, ಹೆಚ್ಚಿನ ಪ್ರಮಾಣದ ಇಡ್ಲಿ ತಿಂದ ನಂತರ ಸ್ವಲ್ಪಮಟ್ಟಿನ ಮತ್ತು ಬರುವುದು.
ಈ ರೀತಿಯ ಆಹಾರಗಳನ್ನು ಹೆಚ್ಚು ಹೆಚ್ಚು ಬಳಸುತ್ತಿರುವುದರಿಂದ ಹಿಂದೆ ಆಲ್ಕೋಹಾಲ್ ಸೇವಿಸುತ್ತಿದ್ದವರಿಗೆ ಮಾತ್ರ ಉಂಟಾಗುತ್ತಿದ್ದ fatty liver ಇಂದು ಬಹುಜನರಿಗೆ ಸಾಮಾನ್ಯವಾಗಿದೆ.

ಈ ಶರೀರದ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಕೃತ್ ಅನ್ನು ಹಾಳು ಮಾಡಿಕೊಳ್ಳಬಾರದು. ಏಕೆಂದರೆ, ಶರೀರದ ಎಲ್ಲಾ ಅವಯವಗಳೂ ಯಕೃತ್ ಅನ್ನು ಅವಲಂಬಿಸಿ ಆರೋಗ್ಯದಿಂದ ಕೆಲಸ ನಿರ್ವಹಿಸುತ್ತಿರುತ್ತವೆ.

★Fermented ಆಹಾರಗಳನ್ನು ಎಲ್ಲಿ ಬಳಸಬಹುದು?👇
ಶೀತ ಪ್ರದೇಶಗಳಾದ ಲಡಾಖ್, ಹಿಮಾಲಯದ ತಪ್ಪಲು, ಉತ್ತರಖಂಡ, ಚೀನಾ, ರಷ್ಯ, ಯು ಕೆ, ನಾರ್ಥ ಅಮೆರಿಕ , ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮುಂತಾದ ಧ್ರುವ ಪ್ರದೇಶಗಳಿಗೆ ಹತ್ತಿರವಿರುವ ದೇಶಗಳಲ್ಲಿ ಮಾನವ ಶರೀರವು ಆಂತರಿಕವಾಗಿ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿರುವುದರಿಂದ ಅಲ್ಲಿ ಈ ಪದಾರ್ಥಗಳ ಸೇವನೆ ಅನಿವಾರ್ಯ.

ಭೂಮಧ್ಯ ರೇಖೆಗೆ ಹತ್ತಿರವಿರುವ ಭಾರತ, ಶ್ರೀಲಂಕಾದಂತಹ ದೇಶಗಳಲ್ಲಿ ಹೊರಗಿನ ತಾಪಮಾನವೇ ಹೆಚ್ಚಿರುವುದರಿಂದ ಇಲ್ಲಿ ಆಂತರಿಕವಾಗಿ ಉಷ್ಣತೆಯನ್ನು ಬಿಡುಗಡೆ ಮಾಡುವಂತಹ ಆಹಾರಗಳ ಸೇವನೆಯಿಂದ ಅತೀ ಹೆಚ್ಚು ತೊಂದರೆ ಉಂಟಾಗುತ್ತದೆ.

ಹಾಗಾಗಿ, ಉದ್ದು ಹಾಕಿ ಹುಳಿಬರಿಸಿದ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!