ಜೀರ್ಣಕ್ರಿಯೆಯಲ್ಲಿ ಪುಪ್ಪುಸಗಳ ಅನಿವಾರ್ಯತೆ…!

ಜೀರ್ಣಕ್ರಿಯೆಯಲ್ಲಿ ಪುಪ್ಪುಸಗಳ ಅನಿವಾರ್ಯತೆ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಜೀರ್ಣಕ್ರಿಯೆಯಲ್ಲಿ ಪುಪ್ಪುಸಗಳ ಅನಿವಾರ್ಯತೆ…!

ಇಂದೇಕೋ ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಅತ್ಯಂತ ಬೇಸರ ಮೂಡುತ್ತಿದೆ. ಜೀರ್ಣಕ್ರಿಯೆಯಲ್ಲಿ ಆಮ್ಲಜನಕದ ಪಾತ್ರ ಅತ್ಯಂತ ಅನಿವಾರ್ಯ ಎಂದು ಗೊತ್ತಿದ್ದೂ ಸುಲಭವಾಗಿ ಜೀರ್ಣವಾಗದ ಶಕ್ತಿಯುತ ಆಹಾರಗಳನ್ನು ಸೋಂಕಿತರಿಗೆ ಸೇವಿಸಲು ಸಲಹೆ ನೀಡುತ್ತಾ ಮತ್ತು ಅದರಿಂದ ಶಕ್ತಿ ಬರುತ್ತದೆಂಬ ಅವೈಜ್ಞಾನಿಕ ಕಾರಣಗಳನ್ನು ಹೇಳುತ್ತಿರುವುದು ಅತ್ಯಂತ ಬಾಲಿಶವಾಗಿ ಕಾಣುತ್ತಿದೆ. ಇದೊಂದು ಆಧುನಿಕ ಮೂಢನಂಬಿಕೆಯೇ ಸರಿ.

ಸೋಂಕಿತನ ಜೀವಉಳಿಸಲು ಕೊಡಬೇಕಾದುದು ಮಾಂಸಾಹಾರ, ಉದ್ದಿನಬೇಳೆ (ಇಡ್ಲಿ, ದೋಸೆ….), ಮೈದಾ(ಬ್ರೆಡ್, ಬಿಸ್ಕೆಟ್….), ಗೋಧಿ, ಆಲೂಗಡ್ಡೆ , ಎಣ್ಣೆ , ಸಿಹಿ ಮುಂತಾದ ಆಹಾರಗಳು ಅಲ್ಲವೇ ಅಲ್ಲ. ಇವುಗಳಿಂದ ಅಪಾಯವೇ ಹೆಚ್ಚು.

ಏಕೆಂದರೆ,
ಯಾವುದೇ ಆಹಾರ ಉದರದಲ್ಲಿ, ಕರುಳಿನಲ್ಲಿ, ಜೀವಕೋಶಗಳ ಹಂತದಲ್ಲಿಯೂ ಸಹ ಪಚನವಾಗಿ ಶರೀರಗತವಾಗಿ ಶಕ್ತಿ ಕೊಡಲು,ಪೋಷಣೆ ಮಾಡಲು ಪ್ರತೀ ಹಂತದಲ್ಲೂ ಆಮ್ಲಜನಕದ ಉಪಸ್ಥಿತಿ ಅತ್ಯಂತ ಅನಿವಾರ್ಯ.
【ಉದಾ: ಬೆಂಕಿ ಉರಿಯಲು ಗಾಳಿ, ಅಂದರೆ ಆಮ್ಲಜನಕದ ಉಪಸ್ಥಿತಿ ಅನಿವಾರ್ಯ】
ಜೀರ್ಣಕ್ರಿಯೆಯಲ್ಲಿ ಅರೆಕ್ಷಣ ಆಮ್ಲಜನಕದ ಕೊರತೆ ಉಂಟಾದರೂ ತಿಂದ ಆಹಾರ ಅಜೀರ್ಣವಾಗುತ್ತದೆ. ಅದರಿಂದ, ಯಾವ ಜೀವಕೋಶವೂ ಶಕ್ತಿಯನ್ನು ಗಳಿಸಲಾರದು. ಇನ್ನೂ ಕೆಲ ಕಾಲ ಆಮ್ಲಜನಕ ಸಿಗದೇ ಹೋದರೆ ಅದೇ ಆಹಾರ ವಿಷವಾಗಿ ಪರಿಣಮಿಸುತ್ತದೆ!!

ನಮ್ಮ ಶರೀರದಲ್ಲಿ ಬೇಕಾಗುವ ಆಮ್ಲಜನಕದ ಎಲ್ಲಾ ಪ್ರಮಾಣವನ್ನು ಪೂರೈಕೆ ಮಾಡುವುದು ನಮ್ಮ ಪುಪ್ಪುಸಗಳು ಮಾತ್ರ. ಜೀರ್ಣಕ್ರಿಯೆಯಲ್ಲಿ ಪುಪ್ಪುಸಗಳ ಸಹಾಯವಿಲ್ಲದಿದ್ದರೆ- “ಬೆಂಕಿಯಿಲ್ಲದೇ ಅಡುಗೆ ಮಾಡಲು ಹೊರಟವನಂತೆ ಅರ್ಥಹೀನ”. ಅಂದರೇ, ನಾವು ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಿದರೂ, ಶಕ್ತಿ ಬರಲೆಂಬ ಭ್ರಮೆಯಿಂದ ಮೇಲೆ ತಿಳಿಸಿರುವ ಮಾಂಸಾದಿ….. ಬಲವಾನ್ ಆಹಾರಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಸಹ ನಮ್ಮ ಪುಪ್ಪುಸಗಳಿಗೆ ಒತ್ತಡವನ್ನು ಹೇರುತ್ತಿದ್ದೇವೆ ಎಂದೇ ಅರ್ಥ.

ಸೋಂಕಿತ ಅವಸ್ಥೆಯಲ್ಲಂತೂ ಈ ವಿಷಯದಲ್ಲಿ ಪುಪ್ಪುಸಗಳಿಗೆ ವಿಶ್ರಾಂತಿ ಕೊಡುವ ಬದಲು ಇನ್ನಷ್ಟು, ಮತ್ತಷ್ಟು ಒತ್ತಡವನ್ನು ಹೇರಿದರೆ ಸೋಂಕು ಬೆಳೆಯಬಲ್ಲದೇ ಹೊರತು ಕಡಿಮೆ ಹೇಗಾದೀತು??

ಇಲ್ಲಿ, ಮೂರು ರೀತಿಯಿಂದ ಅಪಾಯವನ್ನು ತಂದುಕೊಳ್ಳುತ್ತಿದ್ದೇವೆ.
◆ಮೊದಲನೆಯದಾಗಿ, ಈಗಾಗಲೇ ರೋಗ ಹರಡಿದ ಭಾಗವಾದ ಪುಪ್ಪುಸಗಳನ್ನು ಬಲವಂತದಿಂದ ಕೆಲಸ ಮಾಡಿಸಿಕೊಂಡು ಅವುಗಳನ್ನು ಮತ್ತಷ್ಟು ದುರ್ಬಲಗೊಳಿಸುವುದು.!

◆ಎರಡನೆಯದಾಗಿ:
ಆಮ್ಲಜನಕದ ಕೊರತೆಯಿಂದ ಜೀರ್ಣವಾಗದೇ, ವಿಷರೂಪಕ್ಕೆ ಪರಿವರ್ತನೆಯಾದ ಆಹಾರದಿಂದ ಪುಪ್ಪುಸಗಳು ಪೋಷಣೆಯಾಗುವ ಬದಲು ಇನ್ನಷ್ಟು ದುರ್ಬಲವಾಗುವವು.!!

ಮತ್ತು

◆ಮೂರನೆಯದಾಗಿ:
ಈ “ಆಹಾರ ವಿಷ”ದಿಂದ ವೈರಾಣುಗಳನ್ನು ಚನ್ನಾಗಿ ಪೋಷಣೆ ಮಾಡಿ ಬೆಳೆಸುವುದು.!!!

ಪ್ರಾಥಮಿಕ ಶಾಲೆಯ ಪಠ್ಯದಲ್ಲಿಯೇ ನಾವು ಓದಿದ್ದೇವೆ, ಪ್ರಯೋಗಮಾಡಿ ನೋಡಿದ್ದೇವೆ- “ಬೆಂಕಿ ಉರಿಯಲು ಆಮ್ಲಜನಕದ ಉಪಸ್ಥಿತಿ ಅನಿವಾರ್ಯ” ಎಂದು.
ಹಾಗೆಯೇ,
“ಜೀರ್ಣಕ್ರಿಯೆಗೆ ಆಮ್ಲಜನಕವನ್ನು ಪೂರೈಕೆ ಮಾಡುಲು ಪುಪ್ಪುಸಗಳು ಅನಿವಾರ್ಯ” ಎಂಬ ಸಣ್ಣ ಮಕ್ಕಳಿಗೂ ಅರ್ಥವಾಗುವ ಈ ಅತ್ಯಂತ ಸರಳ ಸಿದ್ಧಾಂತವನ್ನು
• ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳವಲ್ಲಿ ನಾವು ಗಮನಹರಿಸದಿರುವುದು ಎಷ್ಟು ಬಾಲಿಶವಾಗಿದೆ ಅಲ್ಲವೇ‼️❓❓

• ಇದರಿಂದ ಆಗುವ ಅಪಾಯದ ಊಹೆಯಾದರೂ ಬೇಡವೇ ‼️❓❓

• ಆಗುವ ನಷ್ಟವನ್ನು ಮರಳಿ ತುಂಬಲು ಸಾಧ್ಯವೇ ‼️❓❓

•••••••••••••••••••••••••••••
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9606616165
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)
.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!