ಶಿವಮೊಗ್ಗದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಮಗನ ಜೊತೆ ಶಾಸಕ ಸಂಗಮೇಶ್‌ ಸಹೋದರನ ಪುತ್ರಿಯ ನಿಶ್ಚಿತಾರ್ಥ..!

ಶಿವಮೊಗ್ಗದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಮಗನ ಜೊತೆ ಶಾಸಕ ಸಂಗಮೇಶ್‌ ಸಹೋದರನ ಪುತ್ರಿಯ ನಿಶ್ಚಿತಾರ್ಥ..!

ಶಿವಮೊಗ್ಗ:ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಮಗನ ಜೊತೆ ಸಂಗಮೇಶ್‌ ಅವರ ಸಹೋದರ ಶಿವಕುಮಾರ್ ಅವರ ಪುತ್ರಿ ಡಾ. ಹಿತಾ ಅವರ ನಿಶ್ಚಿತಾರ್ಥ ಇಂದು ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಇಂದು ನಡೆದಿದೆ.

ಉತ್ತರ ಕರ್ನಾಟಕದ ಬಯಲು ಸೀಮೆ ಹಾಗೂ ಮಲೆನಾಡಿನ ಪ್ರಭಾವಿ ರಾಜಕಾರಣಿಗಳ ಮಧ್ಯೆ ಈ ಸಂಬಂಧ ಬೆಳೆದಿದ್ದು ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿಯಾಗಿದ್ದರೆ, ಸಂಗಮೇಶ್ ಭದ್ರಾವತಿಯ ಶಾಸಕರಾಗಿದ್ದಾರೆ.

ಇದೀಗ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹಾಗೂ ಸಂಗಮೇಶ್ ಅವರ ಸಹೋದರ ಶಿವಕುಮಾರ್ ಅವರ ಮಗಳು ಡಾ. ಹಿತಾ ನಿಶ್ಚಿತಾರ್ಥ ನಡೆಯಿತು.

ಕುಟುಂಬದ ಗುರು-ಹಿರಿಯರ ನಿಶ್ಚಯದಂತೆ ಶಿವಮೊಗ್ಗದ ಸರ್ಜಿ ಛತ್ರದಲ್ಲಿ ಮೃನಾಲ್ ಹಾಗೂ ಡಾ. ಹಿತಾ ನಿಶ್ಚಿತಾರ್ಥ ನಡೆದಿದ್ದು ಮದುವೆಯ ದಿನಾಂಕ ಇನ್ನೂ ತಿಳಿದುಬಂದಿಲ್ಲ.

ನಿಶ್ಚಿತಾರ್ಥ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಮುಂತಾದ ಗಣ್ಯರು ಇದ್ದರು.

News by:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!