ಸೊರಬದಲ್ಲಿ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಸಿಪಿಐ ಮುರಳುಸಿದ್ದಪ್ಪ…!

ಸೊರಬದಲ್ಲಿ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಸಿಪಿಐ ಮುರಳುಸಿದ್ದಪ್ಪ…!

ಸೊರಬ: ತಾಲ್ಲೂಕಿನಲ್ಲಿ ಯಾವುದೇ ರೀತಿಯ ದುಷ್ಕೃತ್ಯಗಳಿಗೆ ಕೈ ಹಾಕಬಾರದು, ಅಹಿತಕರ ಘಟನೆಗಳು ಜರುಗಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಪಿಐ ಆರ್.ಡಿ. ಮರಳುಸಿದ್ದಪ್ಪ ಎಚ್ಚರಿಕೆ ನೀಡಿದರು.


ಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮುಂಭಾಗದಲ್ಲಿ ಮಂಗಳವಾರ ರೌಡಿ ಶೀಟರ್‌ಗಳನ್ನು ಕರೆಸಿ, ಖಡಕ್ ಸೂಚನೆ ನೀಡಿದ ಅವರು, ಮುಂಬರುವ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜನತೆಗೆ ಭಯ ಮೂಡಿಸುವುದು ಅಥವಾ ರಿಯಲ್ ಎಸ್ಟೆಟ್ ದಂಧೆಯಲ್ಲಿ ತೊಡಗಿಕೊಂಡು ಸಾರ್ವಜನಿಕರಿಗೆ ಕಮಿಷನ್‌ಗಾಗಿ ಹೆದರಿಸುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.


ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ಮಾತನಾಡಿ, ಬಹುತೇಕರು ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡು ರೌಡಿ ಶೀಟರ್‌ನಲ್ಲಿರುವುದು ಕಂಡು ಬಂದಿದೆ.

ಸಾರ್ವಜನಿಕರಿಗೆ ಅನಾಗತ್ಯ ಕಿರುಕುಳ ನೀಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಮಗಳಲ್ಲಿ ಯಾವುದೇ ರೀತಿಯ ದಬ್ಬಾಳಿಕೆ, ಗಲಭೆ ಎಬ್ಬಿಸಬಾರದು.

ಕಾನೂನು ನಿಯಮ ಉಲ್ಲಂಘಿಸದೆ ಸಾಮಾನ್ಯ ವ್ಯಕ್ತಿಗಳಂತೆ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದು ಕಂಡು ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಸಿದರು ಗಣೇಶ ಹಬ್ಬ ಆಚರಣೆ ಆಗಮಿಸುತ್ತಿದ್ದು, ಶಾಂತ ರೀತಿಯಿಂದ ವರ್ತಿಸಬೇಕು.

ನಿಮ್ಮಗಳ ನಡೆತೆಯ ಬಗ್ಗೆ ಗಮನ ಹರಿಸಿ, ಸನ್ನಡತೆ ಕಂಡು ಬಂದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಆದಷ್ಟು ಕಾನೂನಿಗೆ ಗೌರವಿಸಿ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬದುಕಬೇಕು ಎಂದ ಅವರು, ಬಡ್ಡಿ ವ್ಯವಾಹಾರದಿಂದ ತೊಡಗಿ ತೊಂದರೆ ನೀಡುವುದು.

ಅನಾಗತ್ಯವಾಗಿ ರೌಡಿ ಶೀಟರ್‌ಗಳಿಂದ ಸಮಸ್ಯೆಯಾಗುತ್ತಿದ್ದರೆ ಸಾರ್ವಜನಿಕರು ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸುವಂತೆ ತಿಳಿಸಿದರು.
ಎಸಿಐ ಶಬ್ಬೀರ್ ಆಹ್ಮದ್, ಕಾನ್‌ಸ್ಟೇಬಲ್‌ಗಳಾದ ಸುಧಾಕರ್, ಮೋಹನ್, ಸಂದೀಪ್ ಕುಮಾರ್, ದಿನೇಶ್, ಪ್ರಭಾಕರ್ ಇದ್ದರು.

News: Raghu shikari- 7411515737

Admin

Leave a Reply

Your email address will not be published. Required fields are marked *

error: Content is protected !!