ದಣಿವಾರಿಸುವ ದಾಳಿಂಬೆ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-23..!

ದಣಿವಾರಿಸುವ ದಾಳಿಂಬೆ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-23..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-23

ದಣಿವಾರಿಸುವ ದಾಡಿಮ”

22)ದಾಡಿಮ(Punica granatum)
(ದಾಳಿಂಬೆ)

ಸಾಂದರ್ಭಿಕ

ರಕ್ತ ಹೆಚ್ಚಿಸುವ, ಹೃದಯಕ್ಕೆ ತೃಪ್ತಿ ಕೊಡುವ ದಾಳಿಂಬೆ ಹಣ್ಣು ತನ್ನ ಸಿಪ್ಪೆಯಲ್ಲೂ ವಿಶೇಷ ಔಷಧಿ ಗುಣಗಳನ್ನು ಹೊಂದಿದೆ.

ಈ ಕಷಾಯದಲ್ಲಿ ಬಳಸಲಾದ ದಾಳಿಂಬೆ ಹಣ್ಣಿನ ಸಿಪ್ಪೆಯ ಔಷಧೀಯ ಕಾರ್ಮುಖತೆಯನ್ನು ನೋಡೋಣ –

ದಾಳಿಂಬೆಯು-

  1. “ಗ್ರಾಹೀ” ಅಂದರೆ ಅತಿಸಾರವನ್ನು ತಡೆಯುತ್ತದೆ.
  2. ಕರುಳು ಆಹಾರವನ್ನು ಹೀರುವಂತೆ ಮಾಡುತ್ತದೆ.
  3. ಕರುಳಿನಲ್ಲಿ ಇರಬಹುದಾದ ಕ್ರಿಮಿಗಳ ಮೊಟ್ಟೆಗಳು ಲಾರ್ವಾ(ಮರಿಗಳು) ಆಗದಂತೆ ತಡೆಯುತ್ತದೆ.
  4. ಘಂಗಲ್ ಸೋಂಕನ್ನು ನಿಯಂತ್ರಿಸುತ್ತದೆ.
ಸಾಂದರ್ಭಿಕ

ಆಯುರ್ವೇದವು ಯಾವುದೇ ರೋಗವನ್ನು ಚಿಕಿತ್ಸಿಸುವಾಗ, ರೋಗಿಯ ಕರುಳಿನ ಹೀರುವಿಕೆಯನ್ನು ಶ್ರೇಷ್ಠಮಟ್ಟದಲ್ಲಿ ಇಡಲು ಮೊದಲ ಆದ್ಯತೆಯನ್ನು ಕೊಡುತ್ತದೆ. ಏಕೆಂದರೆ, ಪೋಷಕಾಂಶಗಳ ಕೊರತೆಯಾದರೆ ಎಷ್ಟೇ ಸಣ್ಣ ರೋಗವು ಬಂದರೂ ವ್ಯಕ್ತಿಯನ್ನು ಮೆತ್ತಗೆ ಮಾಡಿಬಿಡುತ್ತದೆ.

ಇಂದು,ನಮ್ಮನ್ನು ಕಾಡುವ ಅನೇಕ ರೋಗಗಳಾದ ಬಿ.ಪಿ, ಮಧುಮೇಹ, ಮೂಳೆಸವೆತ, ರಕ್ತಹೀನತೆ, ಥೈರಾಯ್ಡಿಸಮ್, ವಿಟಮಿನ್ ಬಿ12 ಕೊರತೆ, ವಿಟಮಿನ್ ಡಿ ಕೊರತೆ, ಬೊಜ್ಜು, ಕೂದಲು ಉದುರುವಿಕೆ ಮುಂತಾದವುಗಳು ಬಂದಿರುವುದು “ನಾವುಗಳು ಪೋಷಕಾಂಶ ರಹಿತ ಆಹಾರ ಸೇವಿಸಿದ ಕಾರಣದಿಂದ ಅಲ್ಲ”! ಎಂಬುದು ಎಲ್ಲರಿಗೂ ತಿಳಿಯುವಂತದ್ದು!!

ಆಶ್ಚರ್ಯಕರವಾಗಿ ಕಂಡರೂ ಇದೇ ಸತ್ಯ. ಗಮನಿಸಿ ನೋಡಿ ನಾವ್ಯಾರೂ ಪೋಷಕಾಂಶಗಲಿಲ್ಲದ ಆಹಾರವನ್ನೇನೂ ಬಳಸುತ್ತಿಲ್ಲ , ಆದರೂ ಇಷ್ಟೊಂದು ವಿಟಮಿನ್, ಮಿನರಲ್ ……..ಕೊರತೆ!!!

ಸಾಂದರ್ಭಿಕ

ಅಂದರೆ, “ನಮ್ಮ ಕರುಳಿನ ಹೀರುವಿಕೆಯು ದೋಷಪೂರಿತವಾಗಿದೆ ಅಥವಾ ಅದರಲ್ಲಿ ಶಕ್ತಿಯ ಕೊರತೆ ಇದೆ”ಎಂದರ್ಥ.

ಇದು ಹೀಗೆಯೇ ಮುಂದುವರಿದರೆ ನಮ್ಮ ದೇಹ ‘ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ’ ಮತ್ತು ‘ಸಣ್ಣ ಸೋಂಕೂ ಸಹ ನಮ್ಮನ್ನು ಮಣಿಸಲು ನೋಡುತ್ತದೆ’.

ರೋಗಬಂದ ನಂತರ “ವಿಟಮಿನ್-ಸಿ” ಮಾತ್ರೆ ಕೊಟ್ಟರೆ ರೋಗನಿರೋಧಕತೆ ಬಂದೀತೆ?!! ಅದರ ಬದಲು ಕೆಮ್ಮು ಬರುವ ಸಾಧ್ಯತೆಯೇ ಹೆಚ್ಚು.

ಸಾಂದರ್ಭಿಕ

ಹಾಗಾಗಿ, ನಮ್ಮ ಕರುಳು, ಆಹಾರದ ಪೋಷಕಾಂಶಗಳನ್ನು ಹೀರಿಕೊಂಡು ಶರೀರವನ್ನು ಸಧೃಢವಾಗಿಡಲು, ಈ ಕಷಾಯ ಚೂರ್ಣದಲ್ಲಿ “ದಾಡಿಮ ಫಲ ತ್ವಕ್” ಅನ್ನು ಅತ್ಯಂತ ನಿಯಮಿತ ಪ್ರಮಾಣದಲ್ಲಿ ಬಳಸಲಾಗಿದೆ.

ದಯಮಾಡಿ ಪ್ರಮಾಣ, ಪರಿಣಾಮದ ತಿಳುವಳಿಕೆ ಇಲ್ಲದೇ ಯಾರೂ ಸಹ ದಾಳಿಂಬೆ ಸಿಪ್ಪೆಯನ್ನು ಕುದಿಸಿ ಸೇವನೆ ಮಾಡಬೇಡಿ. ಅದು, ಅಪಾಯಕರ ಆಗುವ ಸಾಧ್ಯತೆ ಹೆಚ್ಚು. ಹಾಗೆಯೇ, ಇಂದು “ದಾಳಿಂಬೆ ಬೆಳೆಗೆ ಅತಿ ಹೆಚ್ಚು ಕೀಟನಾಶಕ ಮತ್ತು ಹಾರ್ಮೋನ್ ಬಳಸುವ ಕಾರಣ ಅದು ಅಪಾಯಕರವಾಗಿದೆ”.

“ದಾಡಿಮ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.phcogj.com/sites/default/files/10.5530pj.2017.5.109_0.pdf

“ದಾಡಿಮ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News By:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!