ಶಿಕಾರಿಪುರ: ನಿವೃತಿ ಕೆವಲ ವೃತಿಗೆ ಪ್ರವೃತಿಗೆ ಅಲ್ಲ ನಿಮ್ಮ ಸಲಹೆ ಸಹಕಾರ,ಮಾರ್ಗದರ್ಶನ ಮುಂದಿನ ಪೀಳಿಗೆಗೆ ಅವಶ್ಯಕ :ಸಂಸದ ಬಿ.ವೈ ರಾಘವೇಂದ್ರ …!

ಶಿಕಾರಿಪುರ: ನಿವೃತಿ ಕೆವಲ ವೃತಿಗೆ ಪ್ರವೃತಿಗೆ ಅಲ್ಲ ನಿಮ್ಮ ಸಲಹೆ ಸಹಕಾರ,ಮಾರ್ಗದರ್ಶನ ಮುಂದಿನ ಪೀಳಿಗೆಗೆ ಅವಶ್ಯಕ :ಸಂಸದ ಬಿ.ವೈ ರಾಘವೇಂದ್ರ …!

ಶಿಕಾರಿಪುರ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಜಿ.ಆರ್ ಹೆಗಡೆ ಇಂದು ನಿವೃತಿಯಾಗಿದ್ದು 1985 ರಲ್ಲಿ ಉಪನ್ಯಾಸಕರಾಗಿ ಆಗಮಿಸಿ 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿದ್ದಾರೆ ಅವರು ನಿವೃತಿ ವೃತಿಗೆ ಮಾತ್ರ ಪ್ರವೃತಿಗೆ ಅಲ್ಲ ಮುಂದಿನ ಪೀಳಿಗೆಗೆ ನಿಮ್ಮ ಸಲಹೆ ಸಹಕಾರ ಇರಲಿ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಶಿಕಾರಿಪುರ ಪಟ್ಟಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವ್ಯಕ್ತಿ ಸಹಜ ವೃತ್ತಿಯಲ್ಲಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸುದೀರ್ಘ ಸೇವೆಗಳ ನಡುವೆ ಸಾವಲುಗಳು ಎದರಿಸಿದ ಹೆಗಡೆ ಅವರು ನಮ್ಮ ಶಿಕಾರಿಪುರ ಪದವಿ ಕಾಲೇಜಿನ ಅಭಿವೃದ್ಧಿಗೆ ಅವರ ಶ್ರಮ ಬಹಳಷ್ಟಿದೆ.

ಶಿಕಾರಿಪುರ ತಾಲೂಕು ನಕ್ಸಲ್ ಕೇಂದ್ರವಾಗ ಬಾರದ್ದು ವಿದ್ಯಾರ್ಥಿಗಳ ಜೀವನದಲ್ಲಿ ಮುಂದಿನ ಹೆಜ್ಜೆಗಳು  ಮಕ್ಕಳನ್ನು ಸರಿದಾರಿಗೆ ತರುವ ಕೆಲಸ ದೊಡ್ಡ ಸವಾಲಾಗಿರುತ್ತದೆ.

ಜಿ.ಆರ್ ಹೆಗಡೆಯವರು ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸಲು ಅವರ ಧರ್ಮಪತ್ನಿ ಅವರ ಸಹಕಾರ ತುಂಬಾ ಇದೆ ತಾವು ರಾಜ್ಯದ ಯಾವುದೇ ಮೂಲೆಯಲ್ಲಿ ಇದ್ದರು ನಮ್ಮ ಕಾಲೇಜಿನ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸಹಕಾರ ಇರಲಿ ಮಾತಿಗೆ ಬಿಳ್ಕೋಡಿಗೆ ಹೇಳುತ್ತೇವೆ ನಿಮ್ಮ ಸಲಹೆ ಸಹಾಕರ ನಮಗೆ ಬೇಕು ಒಂದು ಸರ್ಕಾರಿ ಸಂಸ್ಥೆಯನ್ನು ಉತ್ತಮ ಮಟ್ಟದಲ್ಲಿ ತೆಗೆದುಕೊಂಡ ಕೀರ್ತಿ ಡಾ.ಜಿ.ಆರ್ ಹೆಗಡೆ ಅವರಿಗೆ ಸಲ್ಲುತ್ತದೆ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಬೇಕು ಸಾಕಷ್ಟು ಕಟ್ಟಡಗಳು ತರಗತಿ ಉಪನ್ಯಾಸಕರನ್ನು ನೀಡಿದೆ ಬೇರೆ ತಾಲೂಕಿಗೆ ಹೊಲಿಸಿದ್ದರೆ ನಮ್ಮ ಕಾಲೇಜಿನ ಉತ್ತಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ ವಸಂತಕುಮಾರ್ ಮಾತನಾಡಿ ಶಿಕಾರಿಪುರ ತಾಲೂಕು ಸಾಂಸ್ಕೃತೀಕ ಶ್ರಿಮಂತಿಕೆ ಹೊಂದಿರುವ ನಾಡು ಇಲ್ಲಿ ಬಂದವರನ್ನು ಪ್ರೀತಿಯಿಂದ ಸ್ವೀಕರಿಸುತ್ತದೆ ಅದೆ ರೀತಿ ನಾವು ಉಪನ್ಯಾಸಕರಾಗಿ ಆಗಮಿಸಿದ್ದೇವು ಅದರೆ ಈ ಊರು ನಮ್ಮ ಬದುಕಿನ ಜೀವನಾಡಿಯಾಗಿದೆ ಜಿ.ಆರ್ ಹೆಗಡೆ ಅವರು ಕೂಡ ಅದೇ ರೀತಿ ನೇರ ಮಾತು ನೇರ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿ ಕಾಲೇಜಿನ ಅಭಿವೃದ್ದಿ ಕುರಿತು ಸದಾ ಚಿಂತಿಸುವವರು ಅವರ ಸೇವೆಯನ್ನು ಶಿಕಾರಿಪುರ ಕಾಲೇಜು ಎಂದಿಗೂ ಮರೆಯೂವಂತಿಲ್ಲ ಎಂದು.

ಈ ವೇಳೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಮಾತನಾಡಿ ಜಿ.ಆರ್ ಹೆಗಡೆ ಅವರು ಉಪನ್ಯಾಸಕರಷ್ಟೆ ಅಲ್ಲದೇ ಅವರ ಸಮಾಜ ಸೇವೆ ಜನರ ಪರ ಕಾಳಜಿಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ ಸುದೀರ್ಘ 35  ವರ್ಷಗಳ ಕಾಲ ಶಿಕಾರಿಪುರ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಸಾವಿರಾರೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಉಪನ್ಯಾಸಕ ಪ್ರಾಂಶುಪಾಲರು ಎಂದರೆ ಕೆವಲ ಪಾಠ ಮಾಡುವುದು ಸಂಬಳ ಏಣಿಸುವುದಲ್ಲ ಅದರ ಜೊತೆಗೆ ಸಾಮಾಜಿಕ ಕಾರ್ಯ ಮಾಡುವುದು ಅಷ್ಟೆ ಮುಖ್ಯ ಈ ನಿಟ್ಟಿನಲ್ಲಿ ಡಾ.ಜಿ.ಆರ್ ಹೆಗಡೆ ಅವರು ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ ಎಂದರು.

ಈ ಸಂದರ್ಭದಲ್ಲಿ ಸನ್ಮಾನಿತರಾದ ಡಾ.ಜಿ,ಆರ್ ಹೆಗಡೆ ಮಾತನಾಡಿ ನನ್ನ 35 ವರ್ಷದ ವೃತಿ ಬದುಕಿನಲ್ಲಿ ಶಿಕಾರಿಪುರದ ಜನತೆ ತುಂಬಾ ಸಹಕಾರ ನೀಡಿದ್ದಾರೆ ಹಳೆ ವಿದ್ಯಾರ್ಥಿಗಳು ಉಪನ್ಯಾಸಕ ವೃಂದದವರು ಸಾಕಷ್ಟು ಸಹಕಾರ ನೀಡಿದ್ದಾರೆ ಯಾವುದೇ ಸಣ್ಣ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿ ಕಾಲೇಜಿನ ಅಭಿವೃದ್ಧಿಗೆ ಸದಾ ಯೊಚಿಸುತ್ತಿದೆ ಮನೆಯಲ್ಲೂ ಕಾಲೇಜಿನ ಬಗ್ಗೆ ಯೊಚಿಸುತ್ತಿದೆ ನಿವೃತಿ ನಂತರ ಏನು ಮಾಡಬೇಕು ಎಂಬುದು ತಿಳಿದಿಲ್ಲ.

ಇಷ್ಟು ವರ್ಷ ನಾನು ಸೇವೆಸಲ್ಲಿದ ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿಗೆ ಕಾಯಂ ದತ್ತಿಯಾಗಿ 1 ಲಕ್ಷ ನೀಡುತ್ತಿದ್ದು ಅದೇ ರೀತಿ ಶಿವಮೊಗ್ಗದ ಕಾಲೇಜಿಗೂ ದತ್ತಿಯನ್ನು ನೀಡುವುದಾಗಿ ತಿಳಿಸಿದರು ವೃತಿ ಬದುಕಿನ ಸಾರ್ಥಕತೆ ಇದೆ ಎಲ್ಲಾ ಸಹಕಾರ ಮಾರ್ಗದರ್ಶದಿಂದ ಸೇವೆ ಸಲ್ಲಿಸಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಜಿ.ಆರ್ ಹೆಗಡೆ ಅವರ ಕನ್ನಡಕ್ಕೆ ಅನುವಾದಿಸಿರುವ ಸುವ್ವಿ ಪ್ರಕಾಶನದ ರೋಮ್ತಾ ಕಾದಂಬರಿ ಪುಸ್ತಕವನ್ನು ಸಂಸದ ಬಿ,ವೈ ರಾಘವೇಂದ್ರ ಬಿಡುಗಡೆ ಮಾಡಿದರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಪತ್ರಿಕೆ ಕುಮದಾವನ್ನು ಮಲೆನಾಡಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಬಿಡುಗಡೆಗೊಳ್ಳಿಸಿದರು,

ಶಿಕಾರಿಪುರ ತಾಲೂಕಿನ ಸಮಗ್ರ ಇತಿಹಾಸವನ್ನು ಸಾರುವ ಸಾಕ್ಷಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ,ಬಿ.ವಿ ವಸಂತಕುಮಾರ್ ಬಿಡುಗಡೆಗೊಳ್ಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಿದನಾಂದ , ನಿವೃತ ಪ್ರಾಂಶುಪಾಲರಾದ ನಂಜುಡಯ್ಯ,ಸವಿತ್ರಿ ಹೆಗಡೆ, ಹಳೆ ವಿದ್ಯಾರ್ಥಿ ಸಂಘದ ಬಿ.ಸಿ ವೇಣುಗೊಪಾಲ್, ಉಪನ್ಯಾಸಕರಾದ ವಿನಯ್,ಡಾ.ಎ.ಬಿ ಅನಿಲ್ ಕುಮಾರ್,ಡಾ.ನೇತ್ರಾವತಿ,ಸುವ್ವಿ ಪ್ರಕಾಶಕರಾದ ಸುನೀಲ್ ಕುಮಾರ್, ಸಿಡಿಸಿ ಸದಸ್ಯರಾದ ಡಿ.ಮಂಜುನಾಥ್, ಇದ್ದರು.

Admin

Leave a Reply

Your email address will not be published. Required fields are marked *

error: Content is protected !!