ಶಿವಮೊಗ್ಗ : ಕುಟುಂಬಕ್ಕೆ ತಿಳಿಸದೇ ನಡೆಯಿತೆ ವೃದ್ಧನ ಅಂತ್ಯಕ್ರೀಯೆ ಸಾವನ್ನಪ್ಪಿದವರು ಯಾರು ಬದುಕಿರುವವರು ಯಾರು ಮಹಾ ಎಡವಟ್ಟಿಗೆ ಕಾರಣವಾಯ್ತಾ ಮೇಗ್ಗಾನ್ ಆಸ್ಪತ್ರೆ..??

ಶಿವಮೊಗ್ಗ : ಕುಟುಂಬಕ್ಕೆ ತಿಳಿಸದೇ ನಡೆಯಿತೆ ವೃದ್ಧನ ಅಂತ್ಯಕ್ರೀಯೆ ಸಾವನ್ನಪ್ಪಿದವರು ಯಾರು ಬದುಕಿರುವವರು ಯಾರು ಮಹಾ ಎಡವಟ್ಟಿಗೆ ಕಾರಣವಾಯ್ತಾ ಮೇಗ್ಗಾನ್ ಆಸ್ಪತ್ರೆ..??

ಶಿವಮೊಗ್ಗ :ಕರೋನಾದಿಂದ ಮೃತರಾದ ವೃದ್ಧರ ಸಾವಿನ ಸುದ್ದಿಯನ್ನು ಕುಟುಂಬಕ್ಕೆ ತಿಳಿಸದೆ ತಾವೇ ಅಂತ್ಯಕ್ರಿಯೆ‌ ನೆರವೇರಿಸಿದರಾ ಅಧಿಕಾರಿಗಳು..??

ಹೌದು ಈ ತರದ ಪ್ರಶ್ನೆಯೊಂದು ಮೇಗ್ಗಾನ್ ಆಸ್ಪತ್ರೆ ಎಡವಟ್ಟಿನಿಂದ ಮೂಡಿದೆ ವೃದ್ಧನ ಕುಟುಂಬದವರು ಕೋವಿಡ್ ಆಸ್ಪತ್ರೆಯಲ್ಲಿ ವೃದ್ಧ ಕಾಣದೇ ಇರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಲು ಹೋದಾಗ ಎರಡು ದಿನದ ಹಿಂದೆ ವೃದ್ಧರು ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆಯೂ ನಡೆದಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಬಳಿಕ ಮೃತರು ಬೇರೆ ನಿಮ್ಮ ತಂದೆ ಬೇರೆ ಅಂತ್ಯಕ್ರೀಯೆ ನಡೆದಿದ್ದು ಯಾರದ್ದು ಶಿಕಾರಿಪುರದ ವೃದ್ಧ ಎಲ್ಲಿದ್ದಾರೆ..?

ಏನಿದು ಪ್ರಕರಣ..

ಉಸಿರಾಟದ ತೊಂದರೆಯಿದ್ದ ಹಿನ್ನೆಲೆಯಲ್ಲಿ‌ ಮಹಾದೇವಪ್ಪ ಎಂಬ ವೃದ್ಧರನ್ನ ಶಿಕಾರಿಪುರ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದರು.

ಉಸಿರಾಟದ ಸಮಸ್ಯೆ ಇದ್ದರಿಂದ ವೈದ್ಯರು ಕರೋನ ಸೋಂಕಿನ ಪರೀಕ್ಷೆ ನಡೆಸಿದ್ದಾರೆ ಮೊದಲ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ ನಂತರ ರೆಫೀಡ್ ಟೆಸ್ಟ್ ನಲ್ಲಿ ವೃದ್ಧರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಶಿಕಾರಿಪುರದಿಂದ ಮೆಗ್ಗಾನ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ.

ಈ ಮಾಹಿತಿಯನ್ನು ಮಹಾದೇವಪ್ಪ ಅವರ ಕುಟುಂಬಕ್ಕೆ ತಿಳಿಸಿದ್ದು ಬಳಿಕ ವಿಷಯ ತಿಳಿದು ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿ ಕುಟುಂಬಸ್ಥರು ಮಹಾದೇವಪ್ಪ ಬಗ್ಗೆ ವಿಚಾರಿಸಿದರೆ ಈ ಹೆಸರಿನವರು ಯಾರೂ ಇಲ್ಲ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.

ಇದರಿಂದ ಕಕ್ಕಾಬಿಕ್ಕಿಯಾದ ಮಹಾದೇವಪ್ಪ ಕುಟುಂಬದವರು
ಮೂರ್ನಾಲ್ಕು ದಿನ ಮೆಗ್ಗಾನ್ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಮಾಹಿತಿ ಸಿಗದಿದ್ದಾಗ ಪೊಲೀಸರ ಮೊರೆ ಹೋಗಿದ್ದಾರೆ ಆಗ ಆರೋಗ್ಯ ಇಲಾಖೆ ಅಧಿಕಾರಿಗಳು ಮಹದೇವಪ್ಪ ಮೃತಪಟ್ಟಿರುವ ಮಾಹಿತಿ ನೀಡಿದ್ದಾರೆ ಎಂದು ಕುಟುಂಬದವರ ಆರೋಪ ಮಾಡಿದ್ದಾರೆ‌

ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವುದೇ ಬೇರೆ.
ಮಹಾದೇವಪ್ಪ ಅವರಿಗೆ ಕರೋನಾ ಸೋಂಕು ಕಾಣಿಸಿಕೊಂಡಾಗ ಅವರ ಜೊತೆ ಆಸ್ಪತ್ರೆಯಲ್ಲಿ‌ ಕುಟುಂಬದವರು ಯಾರೂ ಇರಲಿಲ್ಲ.

ಹೀಗಾಗಿ ಅವರನ್ನು ನಾವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದೆವು ಬಳಿಕ ಅವರ ಕುಟುಂಬದವರಿಗೆ ಹುಡುಕಾಟ‌ ನಡೆಸಿದರೂ ಸಿಕ್ಕಿರಲಿಲ್ಲ ಹಾಗಾಗಿ ಅವರ ವಿರುದ್ಧ ಅಂದೇ ದೂರು ದಾಖಲಿಸಿದ್ದೇವೆ.

ಎರಡು ದಿನದ ಹಿಂದೆ ಕರೋನಾ ಸೋಂಕಿನಿಂದ 90 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು

ಅವರೇ ಮಹಾದೇವಪ್ಪನವರಾ ಅಥವಾ ಬೇರೆಯವರಾ ಎಂಬುದನ್ನು ಪರಿಶೀಲಿಸುತ್ತೇವೆ ಎನ್ನುತ್ತಿದ್ದಾರೆ ಈ ಬಗ್ಗೆ ಯಾವೂದೇ ಮಾಹಿತಿ ತಿಳಿದು ಬಂದಿಲ್ಲ .

ಈ ಕುರಿತು ಮೇಗ್ಗಾನ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀಧರ್ ಶಿಕಾರಿ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದು ಮೃತ ವೃದ್ಧ ಚನ್ನಬಸಪ್ಪ ಎಂದು ಹೇಳಲಾಗಿದೆ‌.

ಶಿಕಾರಿಪುರದ ವೃದ್ಧ ನಮ್ಮ ಆಸ್ಪತ್ರೆಗೆ ದಾಖಲಾದ ಕುರಿತು ಕೇಸ್ ಸೀಟ್ ಇದೆ ಅದರೆ ರೋಗಿ ಎಲ್ಲಿದ್ದಾರೆ ಎಂಬ ಮಾಹಿತಿ ಪತ್ತೆಯಾಗಿಲ್ಲ ಅವರು ಕಾಣೆಯಾಗಿದ್ದಾರಾ..‌ಅಥವಾ ಎಲ್ಲಿದ್ದಾರೆ ಎಂಬ ಮಾಹಿತಿ ಇನ್ನೂ ಪತ್ತೆಯಾಗಿಲ್ಲ ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು‌.

ಒಟ್ಟಾರೆ ಮಹಾದೇವಪ್ಪ ಎಲ್ಲಿದ್ದಾರೆ ಮೃತರಾಗಿದ್ದಾರೆ ಎಂದರೇ ಕುಟುಂಬವರಿಗೆ ತಿಳಿಸಿಲ್ಲ ಏಕೆ..
ಕಾಣೆಯಾಗಿದ್ದಾರೆ ಎನ್ನುವುದದ್ದಾರೆ ಆಸ್ಪತ್ರೆಯ ನಿರ್ಲಕ್ಷ್ಯ ಕಾರಣಾನಾ..?

ಕುಟುಂಬದವರು ಕೇಳುತ್ತಿರುವುದು ನಮ್ಮ ಅಜ್ಜನ ಹುಡುಕಿಕೊಡಿ ಮೃತರಾಗಿದ್ದಾರೆ ಎನ್ನುವುದ್ದಾರೆ ದಾಖಲೆ ಕೊಡಿ ಎಂದು ಕೇಳುತ್ತಿದ್ದಾರೆ ಈ ಸಂಬಂಧದ ಕುಟುಂಬದವರು ದೂರು ನೀಡಲು ಹೊದರು ಪೋಲಿಸರು ದೂರು ತೆಗೆದುಕೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಒಂದು ಕುಟುಂಬದ ಹಿರಿಯರನ್ನು ಕಳೆದುಕೊಂಡು ಸದಸ್ಯರು ಸಂಪೂರ್ಣ ವಿಚಲಿತರಾಗಿದ್ದಾರೆ‌.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕುಟುಂಬದವರಿಗೆ ನ್ಯಾಯಾ ಒದಗಿಸಬೇಕು ಎಂಬುದು ನಮ್ಮ‌ಆಶಾಯ..

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!