ಶಿಕಾರಿಪುರ ಪುರಸಭಾ ಆರೋಗ್ಯ ನಿರೀಕ್ಷಕರೊಬ್ಬರಿಗೆ ಕರೋನ ಪಾಸಿಟಿವ್…!

ಶಿಕಾರಿಪುರ ಪುರಸಭಾ ಆರೋಗ್ಯ ನಿರೀಕ್ಷಕರೊಬ್ಬರಿಗೆ ಕರೋನ ಪಾಸಿಟಿವ್…!

ಶಿವಮೊಗ್ಗ :ಶಿಕಾರಿಪುರ ಪುರಸಭೆಯ ಆರೋಗ್ಯ ನಿರೀಕ್ಷಕರೊಬ್ಬರಿಗೆ ಕರೋನ ಸೋಂಕು ದೃಢವಾಗಿದೆ ಎಂದು ಮುಖ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.

ಕರೋನ ಸೋಂಕಿನ ವಿರುದ್ಧ ಹಗಲಿರುಳು ಶ್ರಮವಹಿಸಿ ಸೇವೆ ಸಲ್ಲಿಸುತ್ತಿರು ಪುರಸಭಾ ಸಿಬ್ಬಂದಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು ಸಿಬ್ಬಂಧಿಗಳಲ್ಲಿ ಆತಂಕ ಎದುರಾಗಿದೆ.

ಈ ಹಿನ್ನಲೆಯಲ್ಲಿ ಪುರಸಭೆ ಕಛೇರಿಯನ್ನು ಸ್ಯಾನಿಟೈಸ್ ಮಾಡಲಾಗಿದ್ದು ಒಂದು ವಾರಗಳ ಕಾಲ ಪುರಸಭಾ ಕಛೇರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು ಅತ್ಯಂತ ತುರ್ತು ಸೇವೆಗಳು ಮಾತ್ರ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಪುರಸಭಾ ಸಿಬ್ಬಂಧಿಯೊರ್ವರಿಗೆ ಸೋಂಕು ತಗುಲಿದ್ದು ಇದರಿಂದ ಅವರೋಂದಿದೆ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಹಾಗೂ ಸ್ನೇಹಿತ ಕುಟುಂಬದವರ ಸ್ಲ್ಯಾಬ್ ಪರೀಕ್ಷೆ ನಡೆಸಲಾಗುವುದು.

ಕರೋ‌ರ ವಾರಿಯರ್ಸ್ ಎಂದು ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆ ರು, ಪೋಲಿಸ್, ಹೀಗೆ ಅನೇಕ ಇಲಾಖೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೋವೀಡ್ ವಿಮೆ ನೀಡಲಾಗುತ್ತಿದೆ.

ಅದರೆ ಕರೋನ ಸೋಂಕು ಸಮರ್ಥವಾಗಿ ಎದರುಸುತ್ತಿರುವ ಕಂದಾಯ ಇಲಾಖೆ, ಪುರಸಭೆ,‌ತಾಲೂಕ್ ಪಂಚಾಯತ್, ಹೀಗೆ ಅನೇಕ ಇಲಾಖೆ ಇಲಾಖೆಗಳ ಸಿಬ್ಬಂದಿಗಳಿಗೆ ಯಾವುದೇ ರೀತಿಯ ವಿಮೆ ಇಲ್ಲದೇ ಇರುವುದು ವಿಪರ್ಯಾಸ ಸಂಗತಿಯಾಗಿದೆ ಸರ್ಕಾರ ಈ ಇಲಾಖೆಗಳನ್ನು ಗಮನಿಸಿ ಅವರಿಗೂ ವಿಮೆ ಸೌಲಭ್ಯ ಕಲ್ಪಿಸಬೇಕಾಗಿದೆ ಎಂಬುದು ನಮ್ಮ‌ಆಶಾಯವಾಗಿದೆ.

News: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!