ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-3..!

ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-3..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-3

ಶಿವಮೊಗ್ಗದ ಅಥರ್ವ ಆಯುರ್ಧಾಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿದ್ಧ ಗಿಡಮೂಲಿಕೆಗಳಿಂದ ತಯಾರಿಸಿದ 36 ಔಷಧಿ ದ್ರವ್ಯಗಳ ಮತ್ತು ಕಷಾಯ ಚೂರ್ಣದ ಮಾಹಿತಿಯನ್ನು ಪಡೆಯಲು ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಕಷಾಯದಲ್ಲಿನ ಘಟಕ ದ್ರವ್ಯ:

03)ಕೃಷ್ಣ ತುಳಸಿ(occimum sanctum):
ಈ ಕಷಾಯದಲ್ಲಿನ ಇನ್ನೊಂದು ಪ್ರಧಾನ ಘಟಕ ದ್ರವ್ಯವಾದ ಕೃಷ್ಣ ತುಳಸಿ
ತುಳಸಿಗೆ ಶ್ರೇಷ್ಠ ಬ್ಯಾಕ್ಟೀರಿಯಾ, ವೈರಸ್, ಫಂಗಲ್ ನಿವಾರಕ ಎಂದು 1952,1988, 1984 ಗಳಲ್ಲಿ ನಡೆದ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಇದು ಲಘು-ರೂಕ್ಷ ಗುಣ ಮತ್ತು ಕಟು ಭಾವವನ್ನು ಹೊಂದಿದ್ದು ಕಫ ಮತ್ತು ವಾತ ದೋಷಗಳನ್ನು ನಿವಾರಿಸುತ್ತದೆ.
ಇದು ಕ್ರಿಮಿಘ್ನ ಮತ್ತು ವಿಷಘ್ನವಾಗಿರುವುದರಿಂದ ಸೋಂಕಿನಲ್ಲಿ ಉಂಟಾಗುವ ವಿಷವನ್ನು ನಿವಾರಿಸುವುದಾಗಿದೆ.

ಈ ಕಾರಣಕ್ಕಾಗಿ ತುಳಸಿಯನ್ನು ಕಾಸ(ಕೆಮ್ಮು), ಶ್ವಾಸ(ಉಸಿರಾಟದ ತೊಂದರೆ), ಹಿಕ್ಕಾ(ಬಿಕ್ಕಳಿಕೆ), ಪಾರ್ಶ್ವ ಶೂಲ(ಎದೆಯ ಪಕ್ಕೆಯ ಶೂಲ), ವಿಷಮ ಜ್ವರ(ವೈರಲ್ ಫಿವರ್)ಗಳಲ್ಲಿ ಬಳಸುತ್ತಾರೆ.

ಇದರಲ್ಲಿನ ಸಂಯುಕ್ತ ರಾಸಾಯನಿಕಗಳಾದ ಕರ್ವಾಕ್ರೋಲ್(carvacrol), ಬೀಟಾ-ಕ್ಯಾರಿಯೋಫೆಲ್ಲೇನ್(beta-caryophellene) ಮುಂತಾದವು ಪುಪ್ಪುಸಗಳಲ್ಲಿ ಸೋಂಕಿನಿಂದ ಉಂಟಾಗುವ ಊತವನ್ನು ಬಹುಬೇಗ ನಿವಾರಿಸುತ್ತವೆ. ಹಾಗೂ ಅಲ್ಲಿ ಸೋಂಕಿನಿಂದ ಉಂಟಾಗುವ ಗಾಯಗಳನ್ನು (ನ್ಯೂಮೋನಿಯದಿಂದ) ವಾಸಿಮಾಡುತ್ತವೆ ಮತ್ತು, ದೊಡ್ಡ ಕರುಳಿನ ಊತವನ್ನು ನಿವಾರಿಸುವ ಶಕ್ತಿಯನ್ನು ಹೊಂದಿವೆ.

ನಿನ್ನೆಯ ಸಂದೇಶದಲ್ಲಿ ಹೇಳಿದಂತೆ ದೊಡ್ದ ಕರುಳಿನಲ್ಲಿ ಬರುವ ಊತವು ಪುಪ್ಪುಸಗಳ ವಿಕಾರಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಮತ್ತು ತುಳಸಿಯಲ್ಲಿನ ಈ ರಾಸಾಯನಿಕವು ಶ್ರೇಷ್ಠ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.

ಮೃದುವಾದ ಜೀವಕೋಶಗಳಲ್ಲಿನ ಊತವನ್ನು ಅಂದರೆ, ಅಲರ್ಜಿ ಇಂದ ಉಂಟಾಗುವ ಸೀನು, ಗಂಟಲು ಕೆರೆತ, ಉಸಿರಾಡುವಾಗ ಬರುವ ಎಳೆತದ ಶಬ್ಧ ಹಾಗೂ ಚರ್ಮದ ಮೇಲೆ ಬರುವ ಪಿತ್ತದ ಗಂದೆಗಳನ್ನು ತನ್ನ ಅಲರ್ಜಿ ನಿವಾರಕ ಗುಣದಿಂದ ನಿಯಂತ್ರಿಸುತ್ತದೆ.

ಎಲೆ, ಬೇರು ಮತ್ತು ಬೀಜಗಳನ್ನು ಚಿಕಿತ್ಸಾರ್ಥವಾಗಿ ಬಳಸಲಾಗುತ್ತದೆ.
ಬೀಜದಿಂದ ತಯಾರಿಸಿದ ತೈಲದ ವಾಸನೆಯನ್ನು ಸೇವಿಸುವುದರಿಂದಲೇ ಕಫದಿಂದ ಉಂಟಾಗುವ ಮೂಗು ಕಟ್ಟುವಿಕೆಯು ನಿವಾರಣೆಯಾಗುತ್ತದೆ. ಆ ಮೂಲಕ ಅಲ್ಲಿ ಅಂಟಿಕೊಂಡಿರಬಹುದಾದ ಯಾವುದೇ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಹೊರಕ್ಕೆ ತಳ್ಳುತ್ತದೆ.

ಈ ಕಷಾಯ ಚೂರ್ಣದಲ್ಲಿ ಬಳಸಲಾದ ಕೃಷ್ಣ ತುಳಸಿಯು, ತುಳಸಿಯ ಅನೇಕ ಗುಣಗಳಲ್ಲಿ ಶ್ರೇಷ್ಠ ಗುಣಾಮಟ್ಟದ್ದಾಗಿದ್ದು ಅತ್ಯಂತ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ.

ಎಲೆಯಿಂದ ತಯಾರಿಸಿದ ಚೂರ್ಣ, ಕಷಾಯಗಳು ವೈರಲ್ ಹೆಪಾಟೈಟಿಸ್ ಅನ್ನು ಕೇವಲ 14 ದಿನಗಳಲ್ಲಿ ಗುಣಪಡಿಸುತ್ತದೆ ಎಂದು ಕ್ಲಿನಿಕಲ್ ಟ್ರಯಲ್ ಗಳಿಂದ ಸಾಬೀತಾಗಿದೆ.

ಎಲೆಯ ರಸದಿಂದ ತಯಾರಿಸುವ ಅಂಜನವು ನೇತ್ರದಲ್ಲಿ ಉಂಟಾಗುವ ಸೋಂಕನ್ನು ನಿವಾರಿಸುವ ಗುಣವನ್ನು ಹೊಂದಿದೆ. ತುಳಸಿಯು ಭಾರತೀಯರಲ್ಲಿ ಪೂಜನೀಯ ಸ್ಥಾನವನ್ನು ಹೊಂದಿದ್ದು, ಅಷ್ಟೇ ಸಮೃದ್ಧಿಯ ಔಷಧೀಯ ಗುಣಗಳನ್ನೂ ಸಹ ಹೊಂದಿದೆ.

ಆಸಕ್ತರು ಈ ಕೆಳಗಿನ ಲಿಂಕನ್ನು ನೋಡಿ ಪರಿಶೀಲಿಸಬಹುದು.

https://www.ncbi.nlm.nih.gov/pmc/articles/PMC4868837/

ಸಂಪರ್ಕ ಸಂಖ್ಯೆ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!