ಶಿವಮೊಗ್ಗ ಜಿಲ್ಲೆಯಲ್ಲಿ 700 ರ ಗಡಿ ದಾಟಿದ ಕರೋನಾ ಸೋಂಕಿತರ ಸಂಖ್ಯೆ ಇಂದು 58 ಜನರಿಗೆ ಪಾಸಿಟಿವ್..!

ಶಿವಮೊಗ್ಗ ಜಿಲ್ಲೆಯಲ್ಲಿ 700 ರ ಗಡಿ ದಾಟಿದ ಕರೋನಾ ಸೋಂಕಿತರ ಸಂಖ್ಯೆ ಇಂದು 58 ಜನರಿಗೆ ಪಾಸಿಟಿವ್..!

ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 700 ರ ಗಡಿ ದಾಟಿದೆ

ಜಿಲ್ಲೆಯಲ್ಲಿ ಇಂದು ಒಂದೇ ದಿನ 58 ಜನರಿಗೆ ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 702ಕ್ಕೆ ಏರಿಕೆಯಾಗಿದೆ.

702 ಸೋಂಕಿತರ ಪೈಕಿ ಈವರೆಗೆ 280 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 409 ಕರೋನಾ ಸಕ್ರೀಯ ಪ್ರಕರಣಗಳು‌ ಇದೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ 176, ಕೇರ್ ಸೆಂಟರ್ ನಲ್ಲಿ 219 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಹ 14 ಜನರಿಗೆ ಚಿಕಿತ್ಸೆ ವ್ಯವಸ್ಥೆ‌ ಮಾಡಲಾಗಿದೆ.

ಇಂದು ಒಬ್ಬರು ಸೇರಿದಂತೆ ಈವರೆಗೆ ಜಿಲ್ಲೆಯಲ್ಲಿ ಕರೋನಾಗೆ 13 ಜನರು ಸಾವನ್ನಪ್ಪಿದ್ದಾರೆ.

ಯಾವ ತಾಲೂಕಿನಲ್ಲಿ ಇಂದು ಎಷ್ಟು ಪಾಸಿಟಿವ್‌..!

ಶಿವಮೊಗ್ಗ:37
ಶಿಕಾರಿಪುರ:03
ಸಾಗರ:04
ಭದ್ರಾವತಿ: 03
ಹೊಸನಗರ:02
ಸೊರಬ:01

ಶಿವಮೊಗ್ಗ ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ಮೂಲಕ ಮಾಹಿತಿ ನೀಡಿದೆ.

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!