ಆನಂದಪುರ: ಲಾಕ್ ಡೌನ್ ನಿಯಮ ಉಲ್ಲಂಘಿಸಿ‌ ಅನಗತ್ಯ ತಿರುಗಾಡುವ ವಾಹನಗಳ ಸೀಜ್‌..!

ಆನಂದಪುರ: ಲಾಕ್ ಡೌನ್ ನಿಯಮ ಉಲ್ಲಂಘಿಸಿ‌ ಅನಗತ್ಯ ತಿರುಗಾಡುವ ವಾಹನಗಳ ಸೀಜ್‌..!

ಜಿಲ್ಲೆಯಾದ್ಯಂತ ಮಧ್ಯಾಹ್ನ 2 ಗಂಟೆಯ ನಂತರ ಲಾಕ್ ಡಾನ್ ಆದೇಶವಿದ್ದರೂ ಅನಗತ್ಯವಾಗಿ ಆನಂದಪುರದಲ್ಲಿ ತಿರುಗುತ್ತಿದ್ದ ವಾಹನಗಳು ಸೀಜ್.

ಶಿವಮೊಗ್ಗ ಜಿಲ್ಲೆಯಾದ್ಯಂತ ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್ ಈಶ್ವರಪ್ಪನವರು ಅರ್ಧ ದಿನ ಲಾಕ್ ಡೌನ್ಗೆ ಆದೇಶವನ್ನು ನೀಡಿದ್ದರು,ಹಾಗೂ ಅನಗತ್ಯವಾಗಿ ತಿರುಗುವವರ ನ್ನು ನಿಯಂತ್ರಿಸಲು ಪೊಲೀಸರಿಗೆ ಸಂಪೂರ್ಣವಾದ ಅಧಿಕಾರವನ್ನು ನೀಡಲಾಗಿದೆ ಎಂದು ತಿಳಿಸಿದ್ದರು.

ಹೀಗಾಗಿ ಆನಂದಪುರದಲ್ಲಿ ಇಂದು ಸಂಜೆ ಸಾಗರ ಗ್ರಾಮಾಂತರ ಪಿಎಸ್ಐ ಭರತ್ ಕುಮಾರ್ ನೇತೃತ್ವದ ತಂಡದವರು ಅನಗತ್ಯವಾಗಿ ತಿರುಗುತ್ತಿದ್ದ ವಾಹನಗಳನ್ನು ಸೀಜ್ ಮಾಡುವುದರ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಒಟ್ಟಾರೆ ಎರಡು ಗಾಡಿಗಳನ್ನು ಸೀಜ್ ಮಾಡುವುದರ ಮೂಲಕ ಲಾಕ್ ಡೌನ್ನಲ್ಲಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ವರದಿ : ಪವನ್ ಕುಮಾರ್

Admin

Leave a Reply

Your email address will not be published. Required fields are marked *

error: Content is protected !!