ಶಿಕಾರಿಪುರ ಪುರಸಭೆ ಆಪರೇಷನ್ ಕಮಲ ಮೂಲಕ ಹಿಂಭಾಗಿಲಿನಿಂದ ಅಧಿಕಾರ ಹಿಡಿಯಲು ಬಿಜೆಪಿ ಕುತಂತ್ರ: ಮಯೂರ್ ದರ್ಶನ್‌ ಉಳ್ಳಿ ಆರೋಪ..!

ಶಿಕಾರಿಪುರ ಪುರಸಭೆ ಆಪರೇಷನ್ ಕಮಲ ಮೂಲಕ ಹಿಂಭಾಗಿಲಿನಿಂದ ಅಧಿಕಾರ ಹಿಡಿಯಲು ಬಿಜೆಪಿ ಕುತಂತ್ರ: ಮಯೂರ್ ದರ್ಶನ್‌ ಉಳ್ಳಿ ಆರೋಪ..!

ಶಿಕಾರಿಪುರ :ಮುಖ್ಯಮಂತ್ರಿಗಳ ವಿಧಾನಸಭಾ ಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿ ಆಪರೇಷನ್ ಕಮಲ ಆರಂಭಿಸಿ ಹಿಂಬಾಗಿಲಿನಿಂದ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ ಎಂದು ಕಾಂಗ್ರೆಸ್ ಪುರಸಭೆ ಸದಸ್ಯ ಮತ್ತು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಯೂರ್ ದರ್ಶನ್ ಉಳ್ಳಿ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕಾರಿಪುರ ಪುರಸಭೆಯಲ್ಲಿ 23 ಸದಸ್ಯರ ಬಲವನ್ನು ಹೊಂದಿದ್ದು ಇದರಲ್ಲಿ ಪ್ರಸ್ತುತ 12 ಕಾಂಗ್ರೆಸ್, 8 ಬಿಜೆಪಿ,3 ಪಕ್ಷೇತರ ಸದಸ್ಯರು ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ಜನರ ಬೆಂಬಲ‌ ಕಾಂಗ್ರೇಸ್ ಪಕ್ಷದ‌ ಮೇಲಿದೆ ಜನರು‌ ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ.ಅದರೆ ಬಿಜೆಪಿ ಪಕ್ಷದ ಕುತಂತ್ರದಿಂದ ಕಾಂಗ್ರೆಸ್ ಇಬ್ಬರು ಸದಸ್ಯರು ರಾಜೀನಾಮೆ ಕೊಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರಾದ ಶಿಕಾರಿಪುರ ಜಯನಗರ ವಾರ್ಡ್ ನರಮೇಶ್(ಗುಂಡ) ಹಾಗೂ ಆಶ್ರಯ ಬಡಾವಣೆಯ ಓರ್ವ ಮಹಿಳೆ ಸದಸ್ಯೆ ಉಮಾವತಿ ಎಂಬುವವರು ಪುರಸಭೆ ಸ್ಥಾನಕ್ಕೆ ಮಾರ್ಚ್ 17 ರಂದು ರಾಜೀನಾಮೆ ನೀಡಿದ್ದಾರೆ.

ಕೊರೋನ ಸಂಕಷ್ಟದ ಸಮಯದಲ್ಲಿ ರಾಜೀನಾಮೆ ಕೊಡಿಸಲಾಗಿದ್ದು ಇವರ ರಾಜೀನಾಮೆ ಕೊಡಿಸಿರುವ ದಿನಾಂಕವನ್ನ ತಿದ್ದಲಾಗಿದೆ ಎಂದರು.

ಸಿಎಂ ಮನೆ ಇರುವ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ನೇರವಾಗಿ ಜನರ ಮನಸ್ಸನ್ನ ಗೆಲ್ಲಲಾಗದೇ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಸದಸ್ಯರ ರಾಜೀನಾಮೆ ಕೊಡಿಸಿ ಹಿಂದಿನ ಬಾಗಿಲಿನಿಂದ ಪ್ರವೇಶಿಸುತ್ತಿದ್ದಾರೆ ಎಂದು ದೂರಿದರು.

ರಾಜೀನಾಮೆ ಕೊಡಿಸುವ ಮೂಲಕ ಈಗ ಕಾಂಗ್ರೆಸ್ 10, ಬಿಜೆಪಿ 8 ಸ್ವತಂತ್ರ 3 ಸಂಸದರು ಸೇರಿ 12 ಸದಸ್ಯರಾಗಲಿದ್ದಾರೆ.

ಬಿಜೆಪಿಯ ಹಿಂಬಾಗಿಲಿನ ಪ್ರವೇಶವಾಗಿದೆ ಎಂದು ಜನತೆಗೆ ತಿಳಿಯುತ್ತಿದೆ ಈ ಹಿನ್ನಲೆಯಲ್ಲಿ ಬುಧವಾರ ಶಿಕಾರಿಪುರ ಪುರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

News By: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!