ಕೋವಿಡ್ ಬಾರದಂತೆ ತಡೆಗಟ್ಟಿ ನಮ್ಮ ಆರೋಗ್ಯ ನಮ್ಮ ಕೈಯಲಿ..ಕಷಾಯವೇ ರಾಮಬಾಣ…!

ಕೋವಿಡ್ ಬಾರದಂತೆ ತಡೆಗಟ್ಟಿ ನಮ್ಮ ಆರೋಗ್ಯ ನಮ್ಮ ಕೈಯಲಿ..ಕಷಾಯವೇ ರಾಮಬಾಣ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:- 1928 ರಲ್ಲಿ, ಬ್ರಿಟಿಷ್ ಸರ್ಕಾರ ಇದ್ದಾಗ, ಭಾರತೀಯ ಪದ್ಧತಿಯ ಕಷಾಯಗಳನ್ನು ಬಳಸಲು, ಸಾರ್ವಜನಿಕ ನೋಟೀಸ್ ಹೊರಡಿಸಿದ್ದಾರೆ.

ಈಗ ಏಕೆ ಆಯುರ್ವೇದದ ಕಷಾಯಗಳನ್ನು ಕುಡಿಸಲು ಅಡ್ಡಿ ಪಡಿಸುತ್ತಿದ್ದಾರೆ?!!!

ದಿನಾಂಕ 11.03.1928 ರಂದು ಆಗಿನ ಬೆಂಗಳೂರು ಪ್ರಾಂತದ ಆರೋಗ್ಯಾಧಿಕಾರಿಗಳಾದ J V Mascarnehas ತಮ್ಮ ಸಾರ್ವಜನಿಕ ಹಿತದೃಷ್ಟಿಯ ನೋಟೀಸ್ ನಲ್ಲಿ ಹೇಳಿದ್ದ ಅಂಶಗಳು ನೋಡಿ ಎಷ್ಟು ಸೂಕ್ತವಾಗಿವೆ. (ಲಗತ್ತಿಸಲಾದ ಚಿತ್ರವನ್ನು ಗಮನಿಸಿ). ಅವರು ಹೇಳುತ್ತಾರೆ.


ಆಯುರ್ವೇದದ ಕಷಾಯಗಳನ್ನು ಸೇವಿಸಿ
• ಮಲಬದ್ಧತೆ ಇಲ್ಲದಂತೆ ನೋಡಿಕೊಳ್ಳಿ.
• ಪಚನಕ್ಕೆ ಹಗುರವಾಗುವ ಆಹಾರ ಸೇವಿಸಿ
• ಗಾಳಿ ಬೆಳಕಿನ ಅವಶ್ಯಕತೆ ಇದೆ.
• ಸಾಮಾಜಿಕ ಅಂತರದ ಕಾಪಾಡಿಕೊಳ್ಳಿ.
• ಅತಿಯಾದ ಒತ್ತಡದ ಮನಸ್ಸು ಮತ್ತು ದೇಹದ ದಣಿವಿನಿಂದ ದೂರ ಇರಿ.

ಎಂದಿದ್ದಾರೆ, ಆದರೆ ಈಗ ಅದನ್ನು ದೂರ ತಳ್ಳಿದ್ದಾರೆ, ಹಾಗಾದರೆ,ನಮ‌್ಮ ಇಂದಿನ ಸಂಶೋಧಕರಿಗೆ ಏನಾಗಿದೆ?!

ಆಗಿನ ಕಾಲಕ್ಕಿಂತ ದೊಡ್ಡ ಆರೋಗ್ಯ ವ್ಯವಸ್ಥೆ ನಮ್ಮಲ್ಲಿ ಇದೆ ಎಂದೇ?!!!

ಆದರೆ ನಮ್ಮ ಈ ವ್ಯವಸ್ಥೆಗಳೆಲ್ಲಾ ಸೋಲುತ್ತಿರುವುದು ಗೊತ್ತಾಗಿದೆ. ಜನರ ಸೋಂಕು ಮತ್ತು ಸಾವು ಹೆಚ್ಚುತ್ತಿವೆ.

ಉಳಿದ ದಾರಿ ಏನೆಂದರೆ-
ನಿತ್ಯವೂ 2-3 ಬಾರಿ ಆಯುರ್ವೇದೀಯ ಕಷಾಯ ಸೇವಿಸಿ ಮತ್ತು ಆರೋಗ್ಯದಿಂದ ಇರಿ. ಯಾರೋ ಬಂದು ನಮ್ಮನ್ನು ರಕ್ಷಿಸಲೆಂದು ಕಾಯಬೇಡಿ.

ಕಷಾಯ ತಯಾರಿಕಾ ವಿಧಾನತಿಳಿಯಲು ಲಗತ್ತಿಸಿದ ವಿಡಿಯೋ ನೋಡಬಹುದು.

https://youtu.be/G00Z3MX7Jeo

ಕಷಾಯ ತಯಾರಿಸಲು ಬೇಕಾದ ದ್ರವ್ಯಗಳು-
ತುಳಸಿ ಎಲೆ, ಶುಂಠಿ , ಬೆಳ್ಳುಳ್ಳಿ, ಕಾಳುಮೆಣಸು, ಅರಿಶಿಣ, ಕರಿ ಜೀರಿಗೆ, ತುಂಬೆಗಿಡ, ಅಮೃತ ಬಳ್ಳಿ ಎಲ್ಲವನ್ನೂ ಸಮ ಪ್ರಮಾಣದಲ್ಲಿ ಪುಡಿಮಾಡಿ ಇಟ್ಟುಕೊಳ್ಳಿ.

ಉಪಯೋಗಿಸುವ ವಿಧಾನ:
ಒಬ್ಬರಿಗೆ ಒಂದು ಚಮಚದಂತೆ ಪುಡಿಯನ್ನು ½ ಚಿಕ್ಕ ಲೋಟದಷ್ಟು ನೀರನ್ನು ಹಾಕಿ ಕುದಿಸಿ ಸೋಸಿ ಕಷಾಯ ಮಾಡಿ ಬೆಲ್ಲ ಅಥವಾ ಕಲ್ಲುಸಕ್ಕರೆ ಬೆರೆಸಿ ದಿನಕ್ಕೆ ಎರೆಡು-ಮೂರು ಬಾರಿ ಸೇವಿಸಿ ಸುರಕ್ಷಿತವಾಗಿ ಇರಿ.

ಈ ಆಯುರ್ವೇದದ ಗಿಡಮೂಲಿಕೆಗಳಲ್ಲಿ ವೈರಸ್ ಮತ್ತು ಜ್ವರ ನಿವಾರಕ ಅಂಶಗಳು ಇರುವುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ.
(ಗೂಗಲ್ ನಲ್ಲಿ ಹುಡುಕಿದರೆ ಈ ದ್ರವ್ಯಗಳ ಸಂಶೋಧನಾ ಮಾಹಿತಿ ದೊರೆಯುತ್ತದೆ.)

ಲಕ್ಷಣಗಳಿದ್ದರೆ ಶುದ್ಧ ಆಯುರ್ವೇದ ಚಿಕಿತ್ಸಕನ ಸಲಹೆ ಪಡೆಯಿರಿ, ಅವರು ಸೂಕ್ತ ಔಷಧಿಗಳನ್ನು ಕೊಡುತ್ತಾರೆ.
ಮತ್ತು ಅಗತ್ಯ ಎನಿಸಿದರೆ ಅಲೋಪತಿ ಚಿಕಿತ್ಸೆಗೆ ಸಲಹೆ ನೀಡುತ್ತಾರೆ.

ಅಂದರೆ ಸಮಗ್ರ ಚಿಕಿತ್ಸೆ ಮತ್ತು ಸಲಹೆ ಎರಡೂ ದೊರೆಯುತ್ತದೆ.

ಇಂದಿನ ವಿಜ್ಞಾನ ರೋಗವನ್ನು ಕೇವಲ ತನ್ನ ದೃಷ್ಟಿಯಿಂದ ಮಾತ್ರ ನೋಡುತ್ತದೆ ಮತ್ತು ನಿರ್ದಿಷ್ಠ ಔಷಧ ಇಲ್ಲದ ಎಷ್ಟೋ ಕಾಯಿಲೆಗಳಲ್ಲಿ (ಅಂದರೆ ರುಮಟಾಯ್ಡ್ ಅರ್ಥ್ರೈಟೀಸ್, ಮೈಗ್ರೇನ್, ಮುಟ್ಟಿನ ಸ್ಯೆ, ಕ್ಯಾನ್ಸರ್…) ರೋಗಿ ಒದ್ದಾಡುತ್ತಿದ್ದರೂ ಸಹ ಅವರ ಪ್ರೊಟೊಕಾಲ್ ಅನುಸರಿಸಿ ಚಿಕಿತ್ಸಿಸುತ್ತಾರೆ ಯೇ ಹೊರತು ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ ಎಂದು ಯಾವ ಕಾರಣಕ್ಕೂ ಹೇಳುವುದಿಲ್ಲ!!

“ಕೇವಲ ಚಿಕಿತ್ಸಾ ಪ್ರೊಟೊಕಾಲ್ ಗಿಂತ ರೋಗಿಯ ಹಿತ ಮುಖ್ಯವಲ್ಲವೇ?”

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!