ಎಮ್ಮೆ, ಆಡು ಮುಂತಾದ ಪ್ರಾಣಿಗಳ ಹಾಲಿನ ಗುಣಗಳು ಮತ್ತು ಮಹತ್ವ..!

ಎಮ್ಮೆ, ಆಡು ಮುಂತಾದ ಪ್ರಾಣಿಗಳ ಹಾಲಿನ ಗುಣಗಳು ಮತ್ತು ಮಹತ್ವ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಇಂದಿನ ವಿಷಯ ಸ್ವಲ್ಪ ಬಳಕೆಗೂ, ಸ್ವಲ್ಪ ಕೇವಲ ತಿಳುದುಕೊಳ್ಳಲು ಮಾತ್ರ ಇದೆ.

ಹಿತಂ ಅತ್ಯಗ್ನ್ಯಂ ನಿದ್ರೇಭ್ಯೋ……………….ಮಾಹಿಷಮ್………………….ಅಜಂ………………………..ಉಷ್ಟ್ರಂ………..ಮಾನುಷಂ……………………..ಆವಿಕಂ……….ಹಸ್ತಿನ್ಯಾಃ………………….. ಏಕ ಶಫಂ……………ಜಡಕಾರಕಮ್||
-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/23-27

ಮಹಿಷ(ಎಮ್ಮೆ) ಕ್ಷೀರ:
ನಿದ್ದೆ ಬಾರದವರಿಗೆ ಶ್ರೇಷ್ಠ, ಆದರೆ ಜೀರ್ಣಶಕ್ತಿ ಇರದವರಿಗೆ ಸೂಕ್ತವಲ್ಲ.

ಅಜ(ಆಡು)ಕ್ಷೀರ:
ಅಲ್ಪಜಲಪಾನ ಮಾಡುವ ಮತ್ತು ಎಲ್ಲಾ ಕಹಿರಸದ ಗಿಡಗಳನ್ನೇ ತಿನ್ನುವ ಆಡು, ಅತ್ಯಂತ ಔಷಧೀಗುಣಯುಕ್ತ ಹಾಲನ್ನು ಕೊಡುತ್ತದೆ.
ಟಿ.ಬಿ, ತೀವ್ರ ಅಜೀರ್ಣ, ರಕ್ತಪಿತ್ತ, ಅಸ್ತಮಾ, ಅತಿಸಾರಗಳಲ್ಲಿ, ದುರ್ಬಲರಿಗೂ ಶ್ರೇಷ್ಠ.

ಉಷ್ಟ್ರ(ಒಂಟೆ)ಕ್ಷೀರ:
ಉದರಕ್ರಿಮಿ, ಮೂಲವ್ಯಾಧಿ, ಅಜೀರ್ಣ ಜನ್ಯ ಹೊಟ್ಟೆಯುಬ್ಬರದಲ್ಲಿ ಯೋಗ್ಯ

ಆವಿ(ಕುರಿ) ಕ್ಷೀರ
ಅಹಿತಕಾರಿ, ಹೃದಯರೋಗ ಉತ್ಪನ್ನ ಮಾಡುವುದು.

ಗಜ(ಆನೆ)ಕ್ಷೀರ
ಜೀರ್ಣಶಕ್ತಿ ಅತ್ಯಂತ ಬಲವಾಗಿದ್ದವರಿಗೆ ಇದು ಸ್ಥಿರತ್ವವನ್ನು ತರುತ್ತದೆ.

ಏಕ ಖುರ(ಕುರೆ, ಕತ್ತೆ ಒಂಟಿ..ಮುಂತಾದವು) ಪ್ರಾಣಿಗಳ ಕ್ಷೀರ
ಆಮ್ಲ-ಲವಣರಸ ಉಳ್ಳದ್ದು ಅತ್ಯಂತ, ಉರುಸ್ಥಂಭ ಎಂಬ ಅತ್ಯಂತ ಕಷ್ಟಕರವಾದ ರೋಗವನ್ನು ಚಿಕಿತ್ಸಿಸಲು ಈ ಒಂದು ಗೊರಸಿನ ಪ್ರಾಣಿಗಳ ಕ್ಷೀರ ಒಳ್ಳೆಯದೆಂದು ಹೇಳಿದ್ದಾರೆ, ನಾವು ಈ ತನಕ ಈ ರೋಗವನ್ನು ನೋಡಿರುವುದಿಲ್ಲ.
ಆದರೆ ಸೋಮಾರಿತನವನ್ನುಂಟು ಮಾಡುತ್ತದೆ ಎಂದೂ ತಿಳಿಸಿದ್ದಾರೆ.

ಸ್ತನ್ಯ(ಸ್ತ್ರೀ ಎದೆಹಾಲು)
ನೇತ್ರರೋಗಗಳಾದ ಕೆಂಪಾಗುವುದು(conjunctivitis), ಉರಿ(burning eyes), ಅಶ್ರುಸ್ರಾವ, ನೋವು, ಕೀವುಗುಳ್ಳೆಗಳು ಬಂದಾಗ, ನಿತ್ಯವೂ ಮೂರುಬಾರಿ ಸ್ತನ್ಯ(ಎದೆಹಾಲು)ವನ್ನು ನೇತ್ರಗಳಿಗೆ ಹಾಕಿಕೊಂಡರೆ ಅತ್ಯಂತ ಶೀಘ್ರ ಪರಿಣಾಮ ಎಂದಿದ್ದಾರೆ ಆಚಾರ್ಯರು. ಈ ಅಚ್ಚರಿ ಫಲಿತಾಂಶಗಳನ್ನು ನಾವು ಚಿಕ್ಕವರಿದ್ದಾಗ ಕಂಡಿದ್ದೇವೆ.

ಸ್ವಾಸ್ಥ್ಯಕ್ಕಾಗಿ-ಸ್ವಲ್ಪ ಬದಲಾಗಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!