ಕೂದಲು ಬಿಳುಪೇ?ಕೂದಲು ಉದುರುತ್ತಿವೆಯೇ? ಅಲರ್ಜಿ ಮತ್ತು ಚರ್ಮದ ಕಾಯಿಲೆಯೇ?

ಕೂದಲು ಬಿಳುಪೇ?ಕೂದಲು ಉದುರುತ್ತಿವೆಯೇ? ಅಲರ್ಜಿ ಮತ್ತು ಚರ್ಮದ ಕಾಯಿಲೆಯೇ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ನಿಮ್ಮ ಹಾಲು ಬಳಕೆಯ ವಿಧಾನ ತಪ್ಪಾಗಿರಬಹುದು, ಸರಿ ಮಾಡಿಕೊಳ್ಳಿ ಚರ್ಮ ಮತ್ತು ಕೂದಲನ್ನೂ ಕಾಂತಿಯುತವಾಗಿ ಇಟ್ಟುಕೊಳ್ಳಿ

ವಿರುದ್ಧಂ…ಅಪಿ……………………….ವಿಶೇಷಾತ್ ಪಯಸಾ ಮತ್ಸ್ಯಾಃ……….ಭಕ್ಷಯಿತ್ವಾ…….ಮೂಲಕಾದಿ ಪಯಃ ತ್ಯಜೇತ್………ಮಾಷಸೂಪ,ಗುಡ,ಕ್ಷೀರ ದದ್ಯಾದ್………..||

ಮಧುರೋ ರಸಃ……………..ವರ್ಣ, ಕೇಶ, ಇಂದ್ರಿಯ, ಓಜಸಾಮ್……ಕ್ಷೀರ,ಇಕ್ಷು…..ಕ್ಷೌದ್ರ, ದ್ರಾಕ್ಷಾ…..ಮಧರ ಗಣಃ||

-ಅಷ್ಟಾಂಗ ಹೃದಯ ಸೂತ್ರಸ್ಥಾನ, ಅನ್ನರಕ್ಷಾ ಅಧ್ಯಾಯ-7/29-34 & ರಸಭೇದೀಯ ಅಧ್ಯಾಯ 10/7,25

ಚರ್ಮವು ಆರು ಪದರಗಳಿಂದ ಕೂಡಿದೆ, ಅದು ಮಾಂಸಧರಾ ತ್ವಚೆ ಎಂಬ ಮಾಂಸಧಾತುವಿನ ವಿಶೇಷ ಭಾಗದಿಂದ ಉಂಟಾಗಿದೆ. ಆದರೆ ಚರ್ಮದ ಪೋಷಣೆ ರಸಧಾತುವಿನಿಂದ ಆಗುತ್ತದೆ..!!! ಈ ವಿಷಯವನ್ನು ಹಿಂದೆಯೇ ನೋಡಿದ್ದೇವೆ.

ತ್ವಚೆಯ ಆರೂ ಪದರಗಳ ನಡುವೆ ಸ್ನಿಗ್ಧ ದ್ರವವೊಂದು ಸದಾ ಇರುತ್ತದೆ ಅದೇ “ರಸಧಾತು” ಅದರ ಆರೋಗ್ಯ ಮತ್ತು ಪ್ರಮಾಣವನ್ನಾಧರಿಸಿ ತ್ವಚೆ ಮತ್ತು ತ್ವಚೆಯಲ್ಲಿಯೇ ಬೆಳೆವ ಕೇಶ-ರೋಮಗಳು ಆರೋಗ್ಯವನ್ನೂ, ವರ್ಣ ಮತ್ತು ಕಾಂತಿಯನ್ನು ಪಡೆಯುತ್ತವೆ. ನಾವು ಇಷ್ಟು ವಿಷಯವನ್ನು ಆಧಾರವಾಗಿಟ್ಟುಕೊಳ್ಳೊಣ.

ನಮ್ಮ ಚರ್ಮ ಮತ್ತು ಕೂದಲುಗಳ ಕಾಯಿಲೆಗೆ ವಿರುದ್ಧ ಆಹಾರ ಅದರಲ್ಲೂ ವಿಶೇಷವಾಗಿ ಹಾಲಿನೊಂದಿಗೆ ಹೇಗೆ ಬೆರೆತುಕೊಂಡಿದೆ ಎಂದು ವಾಗ್ಭಟಾಚಾರ್ಯರು ಹೇಳಿದ್ದಾರೆ.

ವಿರುದ್ಧ ಆಹಾರ:
18ವಿಧಗಳಲ್ಲಿ ವಿರುದ್ಧ ಕಾರ್ಯ ನಿರ್ವಹಿಸಿ ರೋಗ ತರುವ ಪದಾರ್ಥ, ತಯಾರಿಕೆ ಮತ್ತು ಸೇವನಾ ವಿಧಾನಗಳನ್ನು ಆಯುರ್ವೇದ ವಿವರಿಸಿದೆ. ಅದರಲ್ಲಿ ವೀರ್ಯ ವಿರುದ್ಧ ವೂ ಒಂದು ಶಕ್ತಿ(ವೀರ್ಯ)ಯಲ್ಲಿ ಹಾಲು ಸೌಮ್ಯಭಾವ ಉಳ್ಳದ್ದು, ಶಕ್ತಿಯಲ್ಲಿ ಮೀನು, ಮೂಲಂಗಿ ಮತ್ತು ಅದರ ಸೊಪ್ಪು ಅಗ್ನಿ ಸ್ವಭಾವದವುಗಳು.

ಮೀನು-ಹಾಲು ಮಿಶ್ರ ಮಾಡಿದರೆ ಚರ್ಮದ ಅಲರ್ಜಿ, ವಿವಿಧ ಚರ್ಮರೋಗಗಳು, ಬಿಲ್ಲೆಯಾಕಾರದಲ್ಲಿ ಉದುರುವ ಕೂದಲಿನ ರೋಗಗಳು, ಬಿಳಿಕೂದಲು ಬರುತ್ತವೆ.

ಏಕೆ ಹೀಗೆ?

ಚರ್ಮದಲ್ಲಿನ ರಸಧಾತು ತನ್ನ ಸೌಮ್ಯ ಸ್ವಭಾವದಿಂದ ತ್ವಚೆಯನ್ನು ತುಂಬಿಕೊಂಡು ಕಾಂತಿಯನ್ನಿ ತರುತ್ತದೆ, ಅಲ್ಲೇ ಇರುವ ಕೂದಲನ್ನೂ ಪೋಷಣೆ ಮಾಡುತ್ತದೆ.
ಹಾಲು ಸ್ವಭಾವತಃ ರಸಧಾತುವನ್ನೇ ವರ್ಧಿಸುತ್ತದೆ, ಆ ಮೂಲಕ ಸರ್ವ ಧಾತುಗಳ ಪೋಷಣೆಗೆ ತೊಡಗುತ್ತದೆ.

ಹಾಲಿನೊಂದಿಗೆ ಮೀನು ಅಥವಾ ಮೂಲಂಗಿ ಸೇರಿ ಅದನ್ನು ರಸಾಯನಿಗಳಲ್ಲಿ(in the Channels)ಯೇ ದೂಷಿತಗೊಳಿಸುತ್ತದೆ, ಅಂದರೆ ಮೊಸರೂ ಅಲ್ಲದ ಹಾಲೂ ಅಲ್ಲದ ಕೀವಿನಂತ ಅಂಟುಳ್ಳ ಪದಾರ್ಥವಾಗಿ ಚರ್ಮವನ್ನು ಸೇರುತ್ತದೆ.

ಈ ಅಂಟಿನ ಗುಣದ ಕಾರಣ ಅದು ಬೆವರಿನ ರಂಧ್ರಗಳ ಮೂಲಕ ಹೋಗಲು ಸಾಧ್ಯವಾಗದೇ ಆ ರಂಧ್ರಗಳನ್ನು ಹಿಗ್ಗಿಸಲೂ ಆಗದೇ ಗುಳ್ಳೆಯಾಗಿ ಶೇಖರಣೆಯಾಗುವುದನ್ನೇ, ಅಲರ್ಜಿ, ಚರ್ಮದ ಕಾಯಿಲೆಗಳಾದ ಡರ್ಮಾಟಿಟೀಸ್, ಸೋರಿಯಾಸೀಸ್, ಎಕ್ಸಿಮಾ… ಮುಂತಾಗಿ ಕರೆಯುತ್ತಾರೆ.

ಆಯುರ್ವೇದ ಮೊದಲು ಈ ಕಾರಣವನ್ನು ಬಿಡಿಸುತ್ತದೆ, ಇದನ್ನೇ ಪಥ್ಯ ಎಂದು ಗೋಳಾಡುವ ಬದಲು ಶರೀರಶುದ್ಧಿಗೆ ಎಂದು ಭಾವಿಸಿದರೆ ಒಳಿತು.

ದಿನಾಂಕ 29.01.2020 ರ ತಪಾಸಣೆಯಲ್ಲಿ ಸಿಕ್ಕ ಒಂದು ಚಿಕ್ಕ ಉದಾಹರಣೆ:
ಒಬ್ಬ ತಾಯಿಗೆ ಅಲೋಪತಿ ವೈದ್ಯಕೀಯ ಕಾಲೇಜೊಂದರಲ್ಲಿ ನಿಮ್ಮ ಶಾರೀರಿಕ ದುರ್ಬಲತೆಗೆ ಕ್ಯಾಲ್ಸಿಯಮ್ ಕೊರತೆ ಕಾರಣ ಹಾಗಾಗಿ ಹಾಲು-ಮೊಸರನ್ನೂ, ಮೀನನ್ನೂ ಚನ್ನಾಗಿ ತಿನ್ನಲು ತಿಳಿಸಿದ್ದಾರೆ.

ನಂಬಿದ ತಾಯಿ ಬಳಸುತ್ತಾ ಬಂದರು ಅವರ ಚರ್ಮ ಅಲರ್ಜಿ ದಾಟಿ ಕಾಯಿಲೆ ಹಂತ ತಲುಪಿದರೂ, ಅದಕ್ಕೆ ಚರ್ಮದ ತಜ್ಞರಬಳಿ ಕಳಿಸಿ ಅದನ್ನು ಸಿಟ್ರಿಜನ್, ಸ್ಟಿರಾಯ್ಡ್ ಮಾತ್ರೆಗಳಿಂದ ಚಿಕಿತ್ಸಿಸಿದರೂ ಗುಣಕಾಣಲಿಲ್ಲ, ಕೊನೆಗೆ ಆಯುರ್ವೇದದ ಮೊರೆಬಂದರು.

ಹಾಸ್ಯಾಸ್ಪದ ಮತ್ತು
ಎಂತಹ ದುರಂತದ ವಿಷಯ ಇದು- ಅವರ ಅಜ್ಜಿ ಹೇಳಿದರಂತೆ “ಯಾರೇ ಮಗಾ ಹೇಳಿದ್ದು, ಮೀನು ಬೇಯಿಸಿದ ಒಲೆಯ ಮೇಲೆ ಹಾಲನ್ನೇ ಇಡುತ್ತರಲಿಲ್ಲ- ಅದು ಮನೆಗೆ ಅಶುಭ ತರುತ್ತದೆ, ನೀನು ತಿನ್ನುತ್ತೀಯಲ್ಲ?!!!
ಹಿರಿಯರ ಆಚರಣೆ, ಅನುಭವಗಳನ್ನು, ವಿಜ್ಞಾನ, ವೈದ್ಯಕೀಯದ ಹೆಸರಿನಲ್ಲಿ ಮೂಲೆಗೆ ತಳ್ಳಿ ಅನಾಹುತ ಮಾಡಿದ್ದೇವೆ.

ಮೀನು-ಹಾಲು ಜೊತೆಗೆ ತಿಂದರೆ ಕುಷ್ಠರೋಗ ಬರುತ್ತದೆ ಎಂದಿದೆ ಆಯುರ್ವೇದ, ಅದು ಲೆಪ್ರೋಸಿ ಇರಲಿಕ್ಕಿಲ್ಲ, ಚರ್ಮದ ಅಲರ್ಜಿ ಎಂದುಕೊಂಡಿದ್ದೆವು, ಪ್ರತ್ಯಕ್ಷವಾಗಿ ಬೆಂಗಳೂರಿನ ರೋಗಿಯೊಬ್ಬರಿಗೆ ಲೆಪ್ರೋಸಿ ಬಂದದ್ದನ್ನು ನೋಡಿ ಚಿಕಿತ್ಸಿಸಿದ ಮೇಲೆ ಮತ್ತು “ಮನೆಗೆ ಅಶುಭ” ಎಂಬ ಆ ಹಿರಿಜೀವದ ಮಾತು ಕೇಳಿದ ಮೇಲೆ ಇದನ್ನು ಪ್ರಭಲವಾಗಿ ನಂಬಲೇ ಬೇಕಿದೆ.

ಮನೆಯಲ್ಲೊಬ್ಬರಿಗೆ ಕುಷ್ಠರೋಗ ಬಂದರೆ ಅದು ಇಡೀ ಮನೆತನಕ್ಕೇ ಅಶುಭ ಅಲ್ಲವೇ? ಅದೇನು ಅಂಟುರೋಗವಲ್ಲ, ಕೈಮುಟ್ಟಿ ಚಿಕಿತ್ಸೆ ಮಾಡೋಣ ಗುಣಪಡಿಸೋಣ, ಪ್ರೀತಿ ಆದರಗಳಿಂದ ಅನುರಕ್ತ ರೀತಿಯಲ್ಲಿ ಉಪಚರಿಸೋಣ, ಆದರೆ ಘೋರ ನೋವು ಉಣ್ಣವವರು ರೋಗಿಯೆ ತಾನೆ?

ಕೂದಲು
ಚರ್ಮದ ಆಸರೆಯಲ್ಲೇ ಬೆಳೆಯುವ ಕೂದಲಿನ ಬಣ್ಣ, ಗಾತ್ರ, ಕಾಂತಿಯ ಜೊತೆಗೆ ಕ್ರಿಮಿ ತಿಂದಂತೆ ಬಿಲ್ಲೆಯಾಕಾರದ ಉದುರುವ ಮತ್ತು ಇನ್ನೂ ಅನೇಕ ರೋಗಗಳನ್ನು ತಡೆಯಲು ಮತ್ತು ಚರ್ಮರೋಗಿಳಾಗಿ ಆಸ್ಪತ್ರೆಗೆ ಹೋಗುವುದಕ್ಕಿಂತ ಈ ವಿರುದ್ಧ ಆಹಾರ ಸಿದ್ಧಾಂತದ ತಿಳುವಳಿಕೆಯೇ ಮಹತ್ವದ್ದು.

ಏನೇನೋ ಬೋಧನೆ, ಚಿಕಿತ್ಸೆಯ ಮಾಡುವ ಮೊದಲು, ಕಾರಣಗಳಾದ ಹಾಲುxಮೀನು ತಿನ್ನಬಾರದೆಂದು ಎಲ್ಲರಿಗೂ ಮೊದಲು ತಿಳಿಸೋಣ.

ಸ್ವಾಸ್ಥ್ಯಕ್ಕಾಗಿ-ಸ್ವಲ್ಪ ಬದಲಾಗಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!