ಯಂತ್ರದಿಂದ ತಯಾರಿಸಿದ ಕಬ್ಬಿನ ಹಾಲುನ್ನು ಕುಡಿದರೆ ರೋಗ ತರುತ್ತದಯೇ…??

ಯಂತ್ರದಿಂದ ತಯಾರಿಸಿದ ಕಬ್ಬಿನ ಹಾಲುನ್ನು ಕುಡಿದರೆ ರೋಗ ತರುತ್ತದಯೇ…??

*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಕಬ್ಬನ್ನು ಹಲ್ಲಿನಿಂದ ಕಚ್ಚಿ ತಿಂದರೆ ರೋಗಗಳನ್ನು ದೂರಮಾಡುತ್ತದೆ, ಮತ್ತು ಅದನ್ನೇ ಯಂತ್ರದಿಂದ ಹಿಂಡಿ ಕಬ್ಬಿನ ಹಾಲನ್ನು ಕುಡಿದರೆ ರೋಗ ತರುತ್ತದೆ.!!!!

ಇಕ್ಷುರಸೋ ಗುರುಃ ಸ್ನಿಗ್ಧೋ ಬೃಂಹಣಃ ಕಫಮೂತ್ರಕೃತ್ ||42||
ವೃಷ್ಯಃ ಶೀತೋ ಅಸ್ರಕ್ಪಿತ್ತಘ್ನಃ ಸ್ವಾದುಪಾಕ ರಸಃ ಸರಃ |
ಸೋ ಅಗ್ರೇ ಸಲವಣೋ……….||43||

………….ದಂತ ಪೀಡಿತಃ ಶರ್ಕರಾಸಮಃ ||43||

………ಯಾಂತ್ರಿಕಃ ವಿದಾಹಿ ಗುರು ವಿಷ್ಟಮ್ಬೀ…………|
ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5

ಕಬ್ಬು ಶಕ್ತಿಯುಕ್ತ, ಧಾತುಪೋಷಕ, ಮೂತ್ರ ಜನಕ, ಪುರುಷತ್ವ ವರ್ಧಕ, ರಕ್ತಪಿತ್ತನಾಶಕ(ಇಂದಿನ ಬಿ.ಪಿ. ಹೆಮೊರೇಜ್, ಹೃದಯ, ಕಿಡ್ನಿ ರಕ್ತನಾಳಗಳ ಹಾನಿ ತಡೆಯುವುದು. ಆದರೆ ನೆನಪಿಡಿ ಮಧುಮೇಹ ರೋಗಿಗಳಿಗೆ ಅನ್ವಯಿಸುವುದಿಲ್ಲ), ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಆದರೆ ಇದನ್ನು ಹಲ್ಲಿನಿಂದ ಕಚ್ಚಿ ತಿಂದಾಗ ಮಾತ್ರ.

ಅದೇ ಯಂತ್ರಗಳಿಂದ ನಿಷ್ಪೀಡನ ಮಾಡಿ, ಹಿಂಡಿ ತೆಗೆದ ಇಕ್ಷು(ಕಬ್ಬು)ರಸವು, ವಿದಾಹಿ(ವಿದಾಹೀ-ಜಾಠರಾಗ್ನಿ ಸಂಯೋಗಾದ್ಯ…) ಅಂದರೆ ಪಿತ್ತವನ್ನು ರಕ್ತವನ್ನೂ ಕೆಡಿಸುವ ಮೂಲ ವಸ್ತು, ಪಚನಕ್ಕೆ ಕಷ್ಟಕರ ಮತ್ತು ಮಲಬದ್ಧತೆಯನ್ನುಂಟುಮಾಡುತ್ತದೆ!!!

ಇದು ಹೀಗೇಕೆ?
ಕಬ್ಬಿನ ಗಿಣ್ಣು
(Nodes) ಉಪ್ಪು ಮತ್ತು ಕ್ಷಾರದಿಂದ ಕೂಡಿರುತ್ತದೆ. ಹಲ್ಲಿನಿಂದ ಕಚ್ಚಿ ತಿನ್ನವಾಗ ಅದನ್ನು ತೆಗೆಯುತ್ತೇವೆ, ಕೇವಲ ಸಿಹಿ ರಸ ಇರುವ ಮಧ್ಯದ ಭಾಗ(Internodes)ವನ್ನು ತಿನ್ನುವುದೇ ಇದಕ್ಕೆ ಕಾರಣ.

ಯಂತ್ರಗಳಿಂದ ತೆಗೆಯುವಾಗ ಸಿಹಿ ಜೊತೆ ಉಪ್ಪು, ಕ್ಷಾರ ಸೇರಿ ಇಡೀ ಮಧುರ ರಸವನ್ನು ಮತ್ತು ಅದರ ಗುಣವನ್ನು ಕೆಡಿಸುತ್ತವೆ. (ಹಾಲಿಗೆ ಮೊಸರನ್ನು ಸೇರಿಸಿದಂತೆ) ಈ ರಸವನ್ನು ಇಟ್ಟಷ್ಟೂ ಹೆಚ್ಚು ಹೆಚ್ಚು ಹಾಳಾಗುತ್ತದೆ, ಹೀಗೆ ಹುಳಿಬರುವ ಕಾರಣ ಅದು ಪಿತ್ತವನ್ನುಂಟುಮಾಡಿ ಮೇಲೆ ತಿಳಿಸಿದ ಎಲ್ಲಾ ರೋಗಗಳನ್ನು ಗುಣಪಡಿಸುವ ಬದಲು ಉಂಟುಮಾಡುತ್ತದೆ.

ಭುಕ್ತೇ ಹಿ ಸಮೀರಣಕೃತ್ವಮಸ್ಯ ದೃಷ್ಟಮ್|
-ಅಷ್ಟಾಂಗ ಸಂಗ್ರಹ ಸೂತ್ರ, ಅಧ್ಯಾಯ-6 ಊಟದ ನಂತರ ಕಬ್ಬನ್ನು ಹೇಗೆ ಸೇವಿಸಿದರೂ ವಾತದೋಷವನ್ನು ಉಂಟುಮಾಡುತ್ತದೆ ಎಂದಿದ್ದಾರೆ.


ಇದು ಏಕೆಂದರೆ- ನಾವು ಸಿಹಿ-ಹುಳಿ-ಉಪ್ಪು-ಖಾರ-ಕಹಿ ಎಲ್ಲವನ್ನೂ ನಮ್ಮ ಆಹಾರದಲ್ಲಿ ಸೇರಿಸಿ ತಿಂದಿರುತ್ತೇವೆ. ಅದರ ಮೇಲೆ ಕಬ್ಬನ್ನು ತಿಂದರೂ, ರಸವನ್ನು ಕುಡಿದರೂ ಅದು ಅಜೀರ್ಣವಾಗಿ ಜಠರದ ಕೆಳಗೆ ಮೊದಲು ತಿಂದ ಮಧುರ ರಸ ಮತ್ತು ಕೊನೆಗೆ ತಿಂದ ಕಬ್ಬೂ ಮಧುರ ರಸವಾಗಿ ಸ್ತಂಭನ ಮಾಡುವ ಕಾರಣ ಜಾಠರಾಗ್ನಿ ಮತ್ತು ಸಮಾನ ವಾಯುವನ್ನು ಉದ್ದೀಪಿಸಿ ಆವರಣದಿಂದಾದ ವಾತರೋಗಗಳನ್ನು(ಆಮವಾತ, ಆಧ್ಮಾನ, ಕಟಿಶೂಲ- ಅಂದರೆ ಸಂಧಿಶೂಲ, ಹೊಟ್ಟೆಯುಬ್ಬರ, ಸೊಂಟನೋವು) ಉಂಟು ಮಾಡುತ್ತದೆ.

ಆಯುರ್ವೇದ ಅನುಸರಿಸೋಣ – ಆಸ್ಪತ್ರೆಗಳಿಂದ ದೂರ ಇರೋಣ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!