ಶಿಕಾರಿಪುರ ಪಟ್ಟಣ ಮುಖ್ಯರಸ್ತೆ ಮದ್ಯದಲ್ಲಿ ಕಂಗೋಳಿಸಲಿದೆ ಆಲಂಕರಿಕ ವಿದ್ಯುತ್ ದೀಪ..! ಸಂಸದ ಬಿ.ವೈ ರಾಘವೇಂದ್ರರಿಂದ ವಿವಿಧ ಕಾಮಗಾರಿಗಳ ವಿಕ್ಷಣೆ..!

ಶಿಕಾರಿಪುರ ಪಟ್ಟಣ ಮುಖ್ಯರಸ್ತೆ ಮದ್ಯದಲ್ಲಿ ಕಂಗೋಳಿಸಲಿದೆ ಆಲಂಕರಿಕ ವಿದ್ಯುತ್ ದೀಪ..! ಸಂಸದ ಬಿ.ವೈ ರಾಘವೇಂದ್ರರಿಂದ ವಿವಿಧ ಕಾಮಗಾರಿಗಳ ವಿಕ್ಷಣೆ..!

ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಣದಲ್ಲಿ 100 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣ ಮತ್ತು ಕೆ.ಎಸ್‌ಆರ್.ಟಿಸಿ ಡಿಪೋ ಕಾಮಗಾರಿ,ಬಸ್ ನಿಲ್ದಾದ,ಪಟ್ಟಣ ಮುಖ್ಯರಸ್ತೆಗೆ ಆಲಂಕರಿಕ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗಳನ್ನು  ಸಂಸದ ಬಿ.ವೈ ರಾಘವೇಂದ್ರ ವಿಕ್ಷಣೆ ನಡೆಸಿದರು.

ಪಟ್ಟಣದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ನಾಡಪ್ರಭು ಕೆಂಪೆಗೌಡ ಜನ್ಮಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಅವರು ನಾಡಪ್ರಭು ಕೇಂಪೆಗೌಡ ರಾಜ್ಯದ ರಾಜ್ಯಧಾನಿ ನಿರ್ಮಾಣ ಮಾಡಿದವರು ಇಂದು ನಾವೇಲ್ಲ ಬೆಂಗಳೂರು ಎಂದು ಹೇಳಿಕೊಳ್ಳುವುದಕ್ಕೆ ಕೆಂಪೆಗೌಡರೇ ಕಾರಣ ಎಂದರು.

ಮುಖ್ಯಮಂತ್ರಿಗಳು ಅವರ ಜನ್ಮದಿನದ ಪ್ರಯುಕ್ತ ನಾಡಪ್ರಭು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎದರು ಕೆಂಪೇಗೌಡರ 100ಅಡಿಯ ಪುಸ್ಥಳಿಯನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದ್ದಾರೆ ಬೆಂದಕಾಳೂರನ್ನು ನವ ಬೆಂಗಳೂರಾಗಿ ನಿರ್ಮಾಣ ಮಾಡಿ ರಾಜ್ಯದ ಜನರಿಗೆ ಕೃಷಿಗೆ ಆದ್ಯತೆ ನೀಡಿದ ರಾಜ ಎಂದರೇ ಕೆಂಪೆಗೌಡರು ಅವರನ್ನು ನಾವು ನೆನಪಿಕೊಳ್ಳುತ್ತಿರುವುದು ಸಂತದ ವಿಷಯ ಎಂದರು.

ಮುಖ್ಯರಸ್ತೆಗೆ ಆಲಂಕರಿಗೆ ವಿದ್ಯುತ್ ದೀಪ ಅಳವಡಿಕೆ:

ಶಿಕಾರಿಪುರ ಪಟ್ಟಣದಲ್ಲಿ ಕೆಶಿಫ್ ವತಿಯಿಂದ ನಿರ್ಮಾಣವಾಗಿರು ಶಿವಮೊಗ್ಗ,ಶಿಕಾರಿಪುರ,ಅನವಟ್ಟಿ,ತಡಸ ರಾಜ್ಯ ಹೆದ್ದಾರಿಗೆ ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜಿನಿಂದ ಕುಮದ್ವತಿ ನದಿಯ ವರೆಗೂ ರಸ್ತೆ ಮದ್ಯದಲ್ಲಿ ಆಲಂಕರಿಕ ವಿದ್ಯುತ್ ದೀಪಗಳನ್ನು ಆಳವಡಿಸವ ಕಾಮಗಾರಿಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ 150 ಹಾಸಿಗೆಯಿಂದ ಸಾಮರ್ಥ್ಯದಿಂದ 250 ಹಾಸಿಗೆ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಅನುಮತಿಯನ್ನು ನೀಡಿದೆ ಇದರ ಕಾಮಗಾರಿಯನ್ನು ಕೂಡಲೇ ಆರಂಭಿಸಲಾಗುವುದು ಎದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ

ಇದೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ವಿಕ್ಷಣೆ ಮಾಡಿದ ಅವರು ರಾಜ್ಯ ಸರ್ಕಾರ ಶಿಕಾರಿಪುರ ತಾಲೂಕಿನ ಹಾಗೂ ಜಿಲ್ಲೆಯ ಸಾರ್ವಾಂಗಿಣ ಅಭಿವೃದ್ದಿಗಾಗಿ ಶ್ರಮವಹಿಸಿದ್ದು ತಾಲೂಕಿನಲ್ಲಿ 60 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲು ಕಾಮಗಾರಿ ಆರಂಭವಾಗಿದ್ದು 60 ರಿಂದ 100 ಹಾಸಿಗೆಯ ಆಸ್ಪತ್ರೆಗೆ ನಿರ್ಮಾಣಕ್ಕೆ ಮನವಿ ಮಾಡಿದ್ದೇವು ಸರ್ಕಾರ ಸ್ಪಂದಿಸಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲು ಮುಂದಾಗಿದೆ ಎಂದರು.

ಕೆ.ಎಸ್ ಆರ್‌ಟಿಸಿ ಬಸ್ ನಿಲ್ದಾಣ ತಾತ್ಕಾಲಿಕ ಕಟ್ಟಡ ಇದ್ದು ಪುರಸಭೆ ಮಳಿಗೆಗಳನ್ನು ತೆರವುಗೊಳ್ಳಿಸಿ ಹೊಸದಾಗಿ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದೆ ಅದೇ ರೀತಿ ಕೆಎಸ್‌ಆರ್‌ಟಿಸಿ ಡಿಪೋಗೆ ಜಾಗ ಕೂಡ ನೀಡಲಾಗಿದ್ದು ಡಿಪೋ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಪ್ರರಾಂಭವಾಗಲಿದ್ದು ಎಲ್ಲಾ ಕಾಮಗಾರಿಗಳು ಒಂದು ಅಥವಾ ಎರಡು ವರ್ಷದಲ್ಲಿ ಸಂಪೂರ್ಣವಾಗಿ ಮುಗಿಯಲಿದೆ ಎಂದರು.

Admin

Leave a Reply

Your email address will not be published. Required fields are marked *

error: Content is protected !!