ಕಲ್ಲೊಡ್ಡು ಯೋಜನೆ ಬದಲು ಪರ್ಯಾಯ ಯೋಜನೆ: ಸಂಸದ ಬಿ.ವೈ ರಾಘವೇಂದ್ರ..!
ಶಿಕಾರಿಪುರ ತಾಲೂಕಿನ ಸಾವಿರಾರು ಎಕರೆ ಪ್ರದೇಶ ನೀರಾವರಿ ಕಲ್ಪಿಸುವ ಕಲ್ಲೊಡ್ಡು ಯೋಜನೆ ಸಾಗರ ತಾಲೂಕಿನ ರೈತರ ವಿರೋಧದ ಹಿನ್ನಲೆಯಲ್ಲಿ ರ‍್ಯಾಯ ಯೋಜನೆ ಕುರಿತು ಸಂಸದ ಬಿ.ವೈ.ರಾಘವೇಂದ್ರ ಇತ್ತಿಚೀಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಸಾಗರ ತಾಲೂಕು ಕುಂದೂರು ಸಮೀಪ ಸಣ್ಣ ಡ್ಯಾಂ ನಿರ್ಮಿಸಿ ನೀರು ನಿಲ್ಲಿಸುವ ಪ್ರಸ್ತಾವನೆ ಕಲ್ಲೊಡ್ಡು ಯೋಜನೆಯಲ್ಲಿ ಇತ್ತು, ಅದರಿಂದಾಗಿ 130ಹೆಕ್ಟೇರ್ ಭೂಮಿ ಮುಳುಗಡೆ ಆಗುತ್ತದೆ 2750ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸಲಾಗುತ್ತಿತ್ತು, ಇದೀಗ ಹೊಸ ಯೋಜನೆಯಲ್ಲಿ ಮಲ್ಲಾಪುರ ಕೆರೆಗೆ ಮಳೆಗಾಲದಲ್ಲಿ ಹರಿದು ಬರುವ ನೀರು ಸಂಗ್ರಹಿಸಿ ಏತ ನೀರಾವರಿ ಮೂಲಕ 3100ಹೆಕ್ಟೇರ್ ಕೃಷಿಭೂಮಿಗೆ ನೀರು ಒದಗಿಸುವ ಉದ್ದೇಶ ಹೊಂದಿದೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಲ್ಲೊಡ್ಡು ಯೋಜನೆ ಜಾರಿಗೊಳಿಸುವುದಕ್ಕೆ ಸಾಗರ ತಾಲೂಕಿನ ರೈತರ ತೀವ್ರ ವಿರೋಧದ ಹಿನ್ನಲೆಯಲ್ಲಿ ಪರ್ಯಾಯ ಚಿಂತನೆ ನಡೆಸಲಾಗುತ್ತಿದ್ದು ಇದೀಗ ಸರ್ವೆ ಕರ‍್ಯ ನಡೆಸಲಾಗುತ್ತಿದೆ, ಕಲ್ಲೊಡ್ಡು ಯೋಜನೆಗಿಂತಲೂ ಕಡಿಮೆ ಖರ್ಚಿನಲ್ಲಿ, ಹೆಚ್ಚು ಕೃಷಿಭೂಮಿಗೆ ನೀರು ಒದಗಿಸುವ ಉದ್ದೇಶ ಹೊಸ ಯೋಜನೆಯಲ್ಲಿ ಈಡೇರಲಿದೆ. ರೈತರ ಯಾವುದೆ ಭೂಮಿ ಮುಳುಗಡೆ ಆಗದೆ ರೈತರಿಗೆ ಅನುಕೂಲ ಕಲ್ಪಿಸುವ ಈ ಯೋಜನೆ ಶೀಘ್ರದಲ್ಲೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಪ್ರಶಾಂತ್ ಮಾತನಾಡಿ, ಮಲ್ಲಾಪುರ ಕೆರೆ 56ಎಕರೆಯಷ್ಟು ವಿಸ್ತೀರ್ಣ, ಉಳಿದ ಕೆರೆಗಳಿಗೆ ಹೋಲಿಸಿದಲ್ಲಿ ಹೆಚ್ಚು ಆಳವಿದ್ದು ಕಲ್ಲೊಡ್ಡು ಯೋಜನೆಯಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ, ಉಳಿತ ಏತ ನೀರಾವರಿ ಯೋಜನೆಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಎತ್ತರಕ್ಕೆ ನೀರು ಲಿಪ್ಟ್ ಮಾಡಬೇಕಾಗುತ್ತದೆ,
ನೀರು ಚಿಟ್ಟೂರು ಕೆರೆವರೆಗೂ ತಲುಪುವ ಮೂಲಕ ಈ ಭಾಗದ ಎಲ್ಲ ಕೆರೆ ತುಂಬಿಸಲಾಗುವುದು. ಗುಡ್ಡದ ನೀರು ಹರಿಯುವ ಪ್ರದೇಶದಲ್ಲಿ ನಾಲೆ ನಿರ್ಮಿಸುವ ಕಾರಣಕ್ಕೆ ಅಲ್ಲಿಯೂ ಕಡಿಮೆ ರೈತರ ಭೂಮಿ ಪಡೆದು ನೀರಾವರಿ ಕಲ್ಪಿಸಲಾಗುತ್ತದೆ, ಮಳೆಗಾಲ ಮುಗಿದ ನಂತರ ನಾಲೆ ಜಾಗೆ ಸರ್ವೆ ನಡೆಸಲಾಗುವುದು ಎಂದು ಹೇಳಿದರು.