ಮಳೆಗಾಲದಲ್ಲಿ ನಮ್ಮ ಜೀವನ ಪದ್ದತಿ ಹೇಗಿರಬೇಕು..? ಮಳೆಗಾಲದ ಮಾತು ಭಾಗ-1

ಮಳೆಗಾಲದಲ್ಲಿ ನಮ್ಮ ಜೀವನ ಪದ್ದತಿ ಹೇಗಿರಬೇಕು..? ಮಳೆಗಾಲದ ಮಾತು ಭಾಗ-1

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:- ಮಳೆಗಾಲದ‌ ಮಾತು-1

ಆದಾನಗ್ಲಾನ…..ಅಗ್ನಿಃ ಸನ್ನೋಪಿ ಸೀದತಿ ವರ್ಷಾಸು…..|
-ಅಷ್ಟಾಂಗ ಹೃದಯ ಸೂತ್ರಸ್ಥಾನ-3

ಬಾಹ್ಯ ಪ್ರಭಾವದಿಂದ ನಮ್ಮ ಶರೀರ ಬೆವರನ್ನು ಹೊರಹಾಕಿದರೆ, ಅದರ ಮೂಲಕ ಜಠರಾಗ್ನಿಯ(ಜೀರ್ಣಶಕ್ತಿ) ಉಷ್ಣತ್ವವು ಹೊರಹೋಗುತ್ತದೆ. ಆದಕಾರಣ ಹಸಿವು ಕಡಿಮೆಯಾಗಿ ಆಹಾರ ಜೀರ್ಣವಾಗುವ ಪ್ರಮಾಣವೂ ಕಡಿಮೆಯಾಗುತ್ತದೆ.

ಆದರೆ, ಆಂತರಿಕ ಕಾರಣದಿಂದ ಅಂದರೆ ಶಾರೀರಿಕ ವ್ಯಾಯಾಮದಿಂದ ಬೆವರಿದರೆ, ಉಷ್ಣತ್ವ ಹೊರಹೋಗುವ ಬದಲು ಕರಗಿದ ಮೇದಸ್ಸು ಹೊರಹೋಗುತ್ತದೆ ಮತ್ತು ಅಗ್ನಿಯು ವೃದ್ಧಿಯಾಗುತ್ತದೆ.

ಬೇಸಿಗೆಯಲ್ಲಿ ಬಾಹ್ಯ ಕಾರಣಕ್ಕೆ ಬೆವರುವುದರಿಂದ ಅಗ್ನಿ ದುರ್ಬಲಗೊಂಡಿರುತ್ತದೆ ಮತ್ತು ಈ ಅವಸ್ಥೆಯಲ್ಲಿ ಇರುವಾಗಲೇ ಮಳೆಗಾಲ ಆರಂಭವಾಗುತ್ತದೆ.

ಮಳೆಗಾಲ(ವರ್ಷಾ ಋತು) ತನ್ನ ತಂಪಿನ ಅಥವಾ ಚಳಿಯ ಕಾರಣ ಜಠರಾಗ್ನಿಯನ್ನು (ಜೀರ್ಣ ಶಕ್ತಿಯನ್ನು ) ಹೆಚ್ಚಿಸುವ ಬದಲು ಮತ್ತಷ್ಟೂ ಕುಗ್ಗಿಸುತ್ತದೆ. ಇದಕ್ಕೆ ಕಾರಣ, ಈ ಕಾಲದ ನೀರಿನಲ್ಲಿ ಉಂಟಾಗುವ “ಆಮ್ಲೀಯತೆ”!! ಅಂದರೆ ಜಲವು ಆಮ್ಲಜಲವಾಗಿ ಪರಿವರ್ತನೆ ಆಗಿರುತ್ತದೆ.

ಆಮ್ಲವು ಅಗ್ನಿಯ ಆಶ್ರಯ ಸ್ಥಾನವಾದ ಪಿತ್ತದ ದ್ರವ ಭಾವವನ್ನು ಹೆಚ್ಚಿಸಿ ಮೊದಲೇ ಕಡಿಮೆ ಇದ್ದ ಉಷ್ಣತ್ವವನ್ನು ಇನ್ನಷ್ಟೂ, ಮತ್ತಷ್ಟೂ ಕ್ಷೀಣವಾಗುವಂತೆ ಮಾಡುತ್ತದೆ.
ಹಾಗಾಗಿ, ಮಳೆಗಾಲದಲ್ಲಿ ಈ ಕೆಳಗಿನ ಬದಲಾವಣೆಗಳು ಇರುತ್ತವೆ.

  1. ಸೋಂಕುಗಳು ಹೆಚ್ಚು
  2. ಗಂಟಲು ಎದೆ ಪುಪ್ಫುಸಗಳು ದುರ್ಬಲಗೊಳ್ಳುತ್ತವೆ.
  3. ದೈಹಿಕವಾಗಿ ಕೆಲಸ ಮಾಡದೇ ಇದ್ದರೆ, ಹಸಿವು ಅತ್ಯಂತ ಕಡಿಮೆಯಾಗುತ್ತದೆ.
  4. ರಜೋ ಗುಣದ ಕಾರಣ ಮೃದುವಾಗಿ ತಲೆಸುತ್ತುವಿಕೆ
    ಮತ್ತು ನಿದ್ದೆಯು ಸ್ವಪ್ನಗಳಿಂದ ಕೂಡಿರುತ್ತದೆ.
  5. ಮನಸ್ಸು ಸ್ವಲ್ಪ ತಳಮಳಿಸುತ್ತಿರುತ್ತದೆ.

ಇದರ ಪರಿಹಾರೋಪಾಯಗಳನ್ನು ನಾಳೆ ನೋಡೋಣ.

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research
Shimoga | Davanagere | Bengalu

Admin

Leave a Reply

Your email address will not be published. Required fields are marked *

error: Content is protected !!