ಶಿವಮೊಗ್ಗದಲ್ಲಿ ಕರೋನ ವೈರಸ್’ಗೆ ಮೊದಲ ಬಲಿ..!

ಶಿವಮೊಗ್ಗದಲ್ಲಿ ಕರೋನ ವೈರಸ್’ಗೆ ಮೊದಲ ಬಲಿ..!


ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ವೈರಸ್ ಗೆ ಮೊದಲ ಬಲಿ ಪಡೆದಿದ್ದು ನಿನ್ನೆ ತಡರಾತ್ರಿ ವೃದ್ದೆಯೊಬ್ಬರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.


ಶ್ವಾಸಕೋಶ ಹಾಗೂ ಮೂಲವ್ಯಾಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದ್ದು 56 ವರ್ಷದ ವೃದ್ದೆಯೊಬ್ಬರು ಕಳೆದ ಮೂರುದಿನಗಳ ಹಿಂದೆ ಕರೋನ ಚಿಕಿತ್ಸೆಗಾಗಿ ಶಿವಮೊಗ್ಗದ ಮೇಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು ಕರೋನ ಸೋಂಕು ದೃಡವಾದ ಹಿನ್ನಲೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎನ್ನಲಾಗಿದೆ.


ಮೃತ ಸೋಂಕಿತ ಮಹಿಳೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ,ಮತ್ತು ಶುಕ್ರವಾರ, ಚಿಕಿತ್ಸೆಗಾಗಿ ಪಡೆದು ನಂತರ ಶನಿವಾರ ಚನ್ನಗಿರಿ ಖಾಸಗಿ ಕ್ಲಿನಿಕ್ ನಲ್ಲಿ ಚಿಕತ್ಸೆ ಪಡೆದಿದ್ದರು ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.


ಇವರಿಗೆ ಉಸಿರಾಟ ಸಮಸ್ಯೆ ಇರುವುದರಿಂದ ಕರೋನ ಪರೀಕ್ಷೆ ನಡೆಸಲಾಗಿತ್ತು ವರದಿಯಲ್ಲಿ ಪಾಸಿಟಿವ್ ಬಂದ ನಂತರ ಮೆಗ್ಗಾನ್ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಮಹಿಳೆ ದಾವಣಗೆರೆ ಜಿಲ್ಲೆಯವರಾಗಿದ್ದರಿಂದ ಹಾಗೂ ಮೊದಲು ದಾವಣಗೆರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಪ್ರಕರಣವನ್ನು ದಾವಣಗೆರೆಗೆ ಶಿಪ್ಟ್ ಮಾಡುವ ಸಾಧ್ಯತೆ ಇದೆ.

Admin

Leave a Reply

Your email address will not be published. Required fields are marked *

error: Content is protected !!