ಶಿವಮೊಗ್ಗದಲ್ಲಿ 1 ವರ್ಷದ ಮಗು 22 ವರ್ಷದ ಯುವಕನಿಗೆ ಕರೋನಾ ಪತ್ತೆ..! ಯಾರು ಎಲ್ಲಿಂದ ಬಂದವರು…?
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆ ಎರಡು ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು
ಮಹಾರಾಷ್ಟ್ರದಿಂದ ಬಂದಿರುವ ಇಬ್ಬರಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ.
ಒಂದು ವರ್ಷದ ಗಂಡು ಮಗು ಹಾಗೂ 22 ವರ್ಷದ ಯುವಕನಲ್ಲಿ ಕರೋನಾ ಕಾಣಿಸಿಕೊಂಡಿದೆ.
ಮಹಾರಾಷ್ಟ್ರದಿಂದ ಬಂದಿದ್ದ ಇವರನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು.
ಇಂದು ಈ ಇಬ್ಬರಲ್ಲೂ ಕರೋನಾ ಸೋಂಕು ಕಾಣಿಸಿಕೊಂಡಿದ್ದು
ಇಬ್ಬರನ್ನೂ ಚಿಕಿತ್ಸೆಗಾಗಿ ಕೋವಿಡ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 53 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು
53 ಪ್ರಕರಣಗಳಲ್ಲಿ 30 ಜನರು ಕರೋನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 23 ಕರೋನಾ ಆಕ್ಟೀವ್ ಪ್ರಕರಣಗಳಿವೆ.