ಶಿಕಾರಿಪುರ ತರಲಘಟ್ಟ ಗ್ರಾಮ‌ದ‌ ಯುವತಿಗೆ ಕರೋನ ಪಾಸಿಟಿವ್‌ ಜಿಲ್ಲೆಯಲ್ಲಿ ಒಂದೆ ದಿನ ಹತ್ತು ಕೇಸ್..!

ಶಿಕಾರಿಪುರ ತರಲಘಟ್ಟ ಗ್ರಾಮ‌ದ‌ ಯುವತಿಗೆ ಕರೋನ ಪಾಸಿಟಿವ್‌ ಜಿಲ್ಲೆಯಲ್ಲಿ ಒಂದೆ ದಿನ ಹತ್ತು ಕೇಸ್..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಹತ್ತು ಕರೋನ‌ ಕೇಸ್ ಪಾಸಿಟಿವ್ ಆಗಿದ್ದು ಇನ್ನೂ ಅಧಿಕೃತ ಘೋಷಣೆ ಬಾಕಿ ಇದೆ.

ಪಾಸಿಟಿವ್ ಕೇಸ್ ಕುರಿತು ರೋಗಿಗಳ‌ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು ಬೆಳಗ್ಗೆ ಅಧಿಕೃತ ಘೋಷಣೆಯಾಗು ಸಾದ್ಯತೆ ಇದೆ.

ಬೇರೆ ರಾಜ್ಯಗಳಿಂದ ಶಿವಮೊಗ್ಗ ಬಂದು ಕ್ವಾರಂಟೈನ್ ನಲ್ಲಿದ್ದವರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ.

ಬಾಂಬೆ ಸೇರಿದಂತೆ‌ ಬೇರೆಡೆಯಿಂದ ಬಂದವರಿಂದಲೇ‌ ಶಿವಮೊಗ್ಗದಲ್ಲಿ ಕರೋನಾ ಆತಂಕ ಮೂಡಿದೆ

ಇಂದು ಕರೋನಾ ವೈರಸ್ ಪತ್ತೆಯಾದವರ ಪ್ರಾಥಮಿಕ‌ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ಗೆ ಜಿಲ್ಲಾಡಳಿತ ಒಳಪಡಿಸಿದೆ.

ಶಿಕಾರಿಪುರದ ತರಲಘಟ್ಟ ಯುವತಿಗೆ ಕರೋನ:

ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಯುವತಿಯೊಬ್ಬರಿಗೆ ಕರೋನ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಜನರಿಗೆ ಯಾರು ಹೊರ ಬರದಂತೆ ಪೋಲಿಸ್ ಇಲಾಖೆ ತಿಳಿಸಿದ್ದು ಗ್ರಾಮದಲ್ಲಿ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.

ನಾಳಿನ‌ ಮೀಡಿಯಾ ಬುಲೆಟಿನ್ ನಲ್ಲಿ ಶಿವಮೊಗ್ಗದಲ್ಲಿ ಹತ್ತು ಕರೋನಾ ಪ್ರಕರಣಗಳು ಎಂಬ ಮಾಹಿತಿ ಬರುವ ಸಾಧ್ಯತೆ ಇದೆ‌.

Admin

Leave a Reply

Your email address will not be published. Required fields are marked *

error: Content is protected !!