ಜಿಲ್ಲೆಯಲ್ಲಿ ಹೆಚ್ಚುತ್ತಿದೆ‌ ಕರೋನ‌ ಇಂದು ಮತ್ತೆರಡು ಪಾಸಿಟಿವ್ ಕೆಸ್ ಪತ್ತೆ..!

ಜಿಲ್ಲೆಯಲ್ಲಿ ಹೆಚ್ಚುತ್ತಿದೆ‌ ಕರೋನ‌ ಇಂದು ಮತ್ತೆರಡು ಪಾಸಿಟಿವ್ ಕೆಸ್ ಪತ್ತೆ..!

ಶಿವಮೊಗ್ಗ ಜಿಲ್ಲೆಯಲ್ಲಿ ದಿನೆ ದಿನೆ ಕರೋನ‌ ಪಾಸಿಟಿವ್ ಕೇಸ್ ಹೆಚ್ಚುತ್ತಿದ್ದು ಇದರಿಂದ ಮಲೆನಾಡಿಗರಲ್ಲಿ ಆತಂಕ ಹೆಚ್ಚಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಕರೋನಾ ಪ್ರಕರಣ ಪತ್ತೆಯಾಗಿದ್ದು
ಭದ್ರಾವತಿಯಲ್ಲಿ ಒಂದು ಪ್ರಕರಣ ಹಾಗೂ ಹೊಸನಗರ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಇಬ್ಬರೂ ಮಹಾರಾಷ್ಟ್ರದ ಬಾಂಬೆಯಿಂದ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದರು ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಈ ಎರಡು ಪ್ರಕರಣಗಳನ್ನು ಸೇರಿ ಶಿವಮೊಗ್ಗದಲ್ಲಿ ಇದುವರೆಗೆ ಒಟ್ಟು 14 ಕರೋನಾ ಪ್ರಕರಣಗಳು ಪತ್ತೆಯಾಗಿದೆ.

ಜಿಲ್ಲಾಡಳಿತ ರಾಜ್ಯದಿಂದ ಬಂದಿರುವವರ ಮೇಲೆ ಹೆಚ್ಚಿನ‌ ನಿಗಾವಹಿಸಿದ್ದು ಹೊರ ರಾಜ್ಯದಿಂದ ಬಂದವರ ವೈಧ್ಯಕೀಯ ತಪಾಸಣೆ ಚುರುಕುಗೋಳಿಸಿದೆ.

ಹೊರ ರಾಜ್ಯದಿಂದ ಬಂದಿರುವ ಪ್ರತಿಯೊಬ್ಬ ವ್ಯಕ್ತಿಯ ವೈದ್ಯಕೀಯ ತಪಾಸಣೆ ಖಂಡಯವಾಗಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಹೊರ ರಾಜ್ಯದಿಂದ ಬಂದವರನ್ನು ಇನ್ಸ್ ಟಿಟ್ಯೂಷನ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!