ಶಿವಮೊಗ್ಗದಲ್ಲಿ 3ಹೊಸ ಕರೋನಾ ಕೇಸ್ 38 ರ ಮಹಿಳೆ,42ವರ್ಷದ ಪುರಷ 4 ವರ್ಷದ ಮಗುವಿಗೂ ಕರೋನ ಪತ್ತೆ …!

ಶಿವಮೊಗ್ಗದಲ್ಲಿ 3ಹೊಸ ಕರೋನಾ ಕೇಸ್ 38 ರ ಮಹಿಳೆ,42ವರ್ಷದ ಪುರಷ 4 ವರ್ಷದ ಮಗುವಿಗೂ ಕರೋನ ಪತ್ತೆ …!

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ್ತೆ 3 ಕರೋನಾ ಕೇಸ್ ದಾಖಲಾಗಿದೆ. ಈ ಮೂಲಕ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ತೀರ್ಥಹಳ್ಳಿಯಲ್ಲಿ ಶುಕ್ರವಾರ ಬಾಂಬೆಯಿಂದ ಕದ್ದು ಬಂದವನಿಗೆ ಕರೋನಾ ಪಾಸಿಟಿವ್ ಬಂದಿತ್ತು. ಈ ಮೊದಲು ಗುಜರಾತ್ ತಬ್ಲಿಕಿಗೆ ಹೋಗಿದ್ದ ಶಿಕಾರಿಪುರದ 7 ಹಾಗೂ ತೀರ್ಥಹಳ್ಳಿಯ ಕೋಣಂದೂರಿನ ಓರ್ವನಿಗೆ ಕರೋನಾ ಪಾಸಿಟಿವ್ ಬಂದಿತ್ತು.

ಅದರೆ ಜಿಲ್ಲಾಧಿಕಾರಿ ಪ್ರಕಟಿಸಿದ ಸಂಜೆ ಬುಲೆಟಿನ್ ನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ(38 ವರ್ಷದ ಮಹಿಳೆ) ಮತ್ತು ಹೊಸನಗರ ರಿಪ್ಪಿನಪೇಟೆಯ( 42 ವರ್ಷದ ಅಪ್ಪ ಮತ್ತು 4 ವರ್ಷದ ಮಗಳು)ಕರೋನಾ ಸೋಂಕಿಗೆ ಒಳಗಾಗಿದ್ದಾರೆ.

ಈ ಮೂವರು ಬಾಂಬೆಯಿಂದ ಬಂದಿದ್ದು ಕ್ವಾರಂಟೈನ್ ನಲ್ಲಿದ್ದರು. ಇನ್ನೂ ಅನೇಕರ ತಪಾಸಣೆ ನಡೆಯುತ್ತಿದೆ. ಅಚ್ಚರಿ ಎಂದರೆ 4 ವರ್ಷದ ಮಗುವಿಗೂ ಕರೋನಾ ಸೋಂಕು ಬಂದಿದೆ.

ತೀರ್ಥಹಳ್ಳಿಯ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ವರದಿ ಶನಿವಾರ ಬಂದಿಲ್ಲ. ಎಲ್ಲರಿಗೂ ಬಾಂಬೆ ನಂಟು ಇರುವುದು ದೃಢಪಟ್ಟಿದೆ.

Admin

Leave a Reply

Your email address will not be published. Required fields are marked *

error: Content is protected !!