ರಾಜ್ಯ ಲಾಕ್ ಡೌನ್ ಮುಂದುವರೆಕೆಯ ಕುರಿತು ಸರ್ಕಾರಕ್ಕೆ ತಜ್ಞರು ಸಲ್ಲಿಸಿದ ಸಲಹೆ ಏನು..??

ರಾಜ್ಯ ಲಾಕ್ ಡೌನ್ ಮುಂದುವರೆಕೆಯ ಕುರಿತು ಸರ್ಕಾರಕ್ಕೆ ತಜ್ಞರು ಸಲ್ಲಿಸಿದ ಸಲಹೆ ಏನು..??

ಬೆಂಗಳೂರು :ರಾಜ್ಯ ಸರ್ಕಾರ ನೇಮಕ ಮಾಡಿದ ಡಾ. ದೇವಿಶೇಟ್ಟಿ ನೇತೃತ್ವದ ತಂಡ ಕೆಲವು ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿರುತ್ತದೆ. ಏಪ್ರಿಲ್ 14 ರಂದು ದೇಶದ ಲಾಕ್ ಡೌನ್ ಕೊನೆಗೊಳ್ಳುತ್ತಿರುವ ಇನ್ನಲೆಯಲ್ಲಿ ಲಾಕ್ ಡೌನ್ ಕೊನೆಗೊಂಡರು ಮುಂದಿನ 6 ತಿಂಗಳು ಎಚ್ಚರದಿಂದ ಇರಬೇಕು ಎಂದು ತಜ್ಞರ ತಂಡವು ತಿಳಿಸಿರುತ್ತದೆ ಹಾಗೂ ಕಡ್ಡಾಯವಾಗಿ  ಅತಿ ಹೆಚ್ಚು ಗಮನಹರಿಸುವ ಪ್ರದೇಶಗಳಲ್ಲಿ ಮುಂದುವರೆಸಲು ಸಲಹೆ ನೀಡಿರುತ್ತದೆ.

ಶಾಲಾ ಕಾಲೇಜುಗಳಿಗೆ ಏಪ್ರಿಲ್ 14 ರ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ  ಉದ್ದೇಶದಿಂದ ಆನ್ ಲೈನ್ ತರಗತಿಗಳಿಗೆ ಪ್ರೇರೇಪಣೆ ನೀಡಲು ಸಲಹೆ ನೀಡಿರುತ್ತದೆ. ಹಾಗೇ ಶಾಲಾ ಕಾಲೇಜುಗಳನ್ನು ಕಡ್ಡಾಯವಾಗಿ ಮೇ 31ರ ವರೆಗೆ ತೆರೆಯದಂತೆ ಸೂಚನೆ ನೀಡಿರುತ್ತದೆ.

ತಜ್ಞರ ಸಲಹೆ ಪ್ರಕಾರ  ಶೇಕಡಾ 50% ಕೆಲಸದ ಒತ್ತಡದೊಂದಿಗೆ ಮಾಹಿತಿ ತಂತ್ರಜ್ಞಾನ / ಜೈವಿಕ ತಂತ್ರಜ್ಞಾನ ಕಂಪನಿಗಳು ಮತ್ತು ಸರ್ಕಾರಿ ಸೇವೆಗಳು ಮತ್ತು ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಲಹೆ ನೀಡಿರುತ್ತದೆ.

 ಇತರೆ ಸಲಹೆಗಳು:

1.            ಅಂತರಾಜ್ಯ ಸಾರ್ವಜನಿಕ ಸಾರಿಗೆಗಳಿಗೆ ನಿರ್ಬಂಧ . ಸರಕು ವಾಹನಗಳಿಗೆ ಮಾತ್ರ ಅವಕಾಶ.

2.            ಅಂತರಾಜ್ಯ ವಿಮಾನ ಮತ್ತು ರೈಲು ಸಂಚಾರ ಮಾಡಬಾರದೆಂದು ಸೂಚನೆ.

3.            ಏ.ಸಿ ಬಸ್ಸು ಮತ್ತು ಮೆಟ್ರೋ ಸೇವಗಳನ್ನು ಏಪ್ರಿಲ್ 30 ರವರೆಗೆ ಸ್ಥಗಿತ.

4.            ಕಟ್ಟಡ ಕೆಲಸಗಳನ್ನು ಶೇ 50 ರಷ್ಟು ಕಾರ್ಮಿಕರೊಂದಿಗೆ  ನಡೆಸಲು ಅನುಮತಿ ನೀಡಬಹುದು ಎಂದು ಸಲಹೆ ನೀಡಿರುತ್ತದೆ.

5.            ಗಾರ್ಮೆಂಟ್ಸ್ ಕೆಲಸಗಳಿಗೆ ಅವಶ್ಯಕತೆ ಇರುವಲ್ಲಿ ಮಾತ್ರ  ಅನುಮತಿ ನೀಡಲು ಸಲಹೆ ನೀಡಿರುತ್ತದೆ.

6.            ಖಾಸಗಿ ಸಾರಿಗೆಗಳಿಗೆ ಅನುಮತಿ ನೀಡಬಾರದೆಂದು ತಿಳಿಸಿರುತ್ತದೆ.

ಸಲಹೆಗಳ ಪ್ರಕಾರ ರಾಜ್ಯ ಸರ್ಕಾರ ಲಾಕ್ ಡೌನ್ 15 ದಿನಗಳವರೆಗೆ ಮುಂದುವರೆಸಬಹುದಾಗಿದೆ ಎಂದು ತಿಳಿಸಿರುತ್ತಾರೆ.

News by: Naveen Yuva

Admin

Leave a Reply

Your email address will not be published. Required fields are marked *

error: Content is protected !!