ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಅರ್ಜಿ ಆಹ್ವಾನ..!

ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಅರ್ಜಿ ಆಹ್ವಾನ..!

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಲ್ಲಿ ಖಾಲಿಯಿರುವ ಮೇಲ್ವಿಚಾರಕರ ಹುದ್ದೆಗೆ ಮಾಸಿಕ ರೂ.7,000/- ಗೌರವ ಸಂಭಾವನೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ತೀರ್ಥಹಳ್ಳಿ ತಾಲೂಕು ನೆರಟ್ಟೂರು (3ಬಿ ಅಂಗವಿಕಲ) ಮತ್ತು ಹೆಗ್ಗೋಡು(3ಎ), ಶಿಕಾರಿಪುರ ತಾಲೂಕು ಕಾಗಿನೆಲೆ (ಸಾ.ಅ), ಚಿಕ್ಕಜಂಬೂರು (ಸಾ.ಮ), ಹಾರೋಗೊಪ್ಪ (ಪ.ಜಾ.), ಸಾಗರ ತಾಲೂಕು ತುಮರಿ (ಸಾ.ಅ), ಸೊರಬ ತಾಲೂಕು ಚಂದ್ರಗುತ್ತಿ (2ಎ) ಹಾಗೂ ಹೊಸನಗರ ತಾಲೂಕು ಪುರಪ್ಪೆಮನೆ (2ಎ) ಗ್ರಾ.ಪಂ. ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಗ್ರಾ.ಪಂ. ಸ್ಥಳೀಯ ನಿವಾಸಿಗಳಾಗಿದ್ದು, ಕನಿಷ್ಠ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು ಮತ್ತು ಆಯಾ ಪಂಚಾಯತಿಗಳಿಗೆ ನಿಗಧಿಪಡಿಸಿದ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳಾಗಿರಬೇಕು.

ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ಪಂಚಾಯತಿ ಕಾರ್ಯಾಲಯದಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳನ್ನು ಲಗತ್ತಿಸಿ ಏಪ್ರಿಲ್-17ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮಾಹಿತಿಗಾಗಿ ಆಯಾ ಪಂಚಾಯತಿ ಕಾರ್ಯಾಲಯ ಅಥವಾ ಉಪ ನಿರ್ದೆಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿ, ದೂ.ಸಂ.: 08182-222905 ನ್ನು ಸಂಪರ್ಕಿಸುವುದು.

News By: Raghu Shikari=7411515737

Admin

Leave a Reply

Your email address will not be published. Required fields are marked *

error: Content is protected !!