4 ಸಾವಿರ ಕೋಳಿಗಳನ್ನ ಜೀವಂತವಾಗಿ ಗುಂಡಿಯಲ್ಲಿ ಮುಚ್ಚಿದ ಕೋಳಿ ಫಾರಂ ಮಾಲೀಕ..!

4 ಸಾವಿರ ಕೋಳಿಗಳನ್ನ ಜೀವಂತವಾಗಿ ಗುಂಡಿಯಲ್ಲಿ ಮುಚ್ಚಿದ ಕೋಳಿ ಫಾರಂ ಮಾಲೀಕ..!

ಶಿವಮೊಗ್ಗ: ಕರೋನಾ ವೈರಸ್ ಎಲ್ಲಿ ಕೇಳಿದರು ಕರೋನ ವೈರಸ್ ಭೀತಿ ಕೋಳಿ ಮಾಂಸ ಹಾಗೂ ಇತರೆ ಮಾಂಸ ಪದಾರ್ಥಗಳಿಂದ ಈ ಕಾಯಿಲೆ ಹರಡುತ್ತದೆ ಎನ್ನುವ ಭೀತಿಯಲ್ಲಿ ಜನರು ಮಾಂಸ ಆಹಾರವನ್ನೆ ತ್ಯಜಿಸಿದ್ದರೆ ಅದರ ಪರಿಣಾಮ ಕೋಳಿ ಫಾರಂ ಮಾಲೀಕರಿಗೆ ವ್ಯಾಪಾರಿಗಳಿಗೆ ಅದರ ಬಿಸಿ ತಟ್ಟಿದೆ ಶಿವಮೊಗ್ಗದ ಕೋಳಿ ಫಾರಂ ಒಂದರಲ್ಲಿ ಕೋಳಿಗಳನ್ನು ಜೀವಂತ ಗುಂಡಿಗೆ ಹಾಕಿ ಮುಚ್ಚಿಹಾಕಿದ ಘಟನೆ ಇಂದು ನಡೆದಿದೆ.

ಶಿವಮೊಗ್ಗ ತಾಲೂಕಿನ ಸಂತೆಕಡೂರಿನಲ್ಲಿರುವ ಕೋಳಿ ಫಾರಂ ಮಾಲೀಕ ನಾಲ್ಕು ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಮುಚ್ಚಲಾಗ ಘಟನೆ ನಡೆದಿದೆ ಕರೋನಾ ವೈರಸ್ ಭೀತಿಯಿಂದ ಮತ್ತು ಹಾಗೂ ಹಕ್ಕಿಜ್ವರದ ಭೀತಿ ಹಿನ್ನಲೆಯಲ್ಲಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿರುವ ಕಾರಣ ಜನರು ಕೋಳಿ ಮಾಂಸ  ಖರೀದಿಸಲು ನಿರಾಕರಣೆ ಮಾಡುತ್ತಿದ್ದು ಕುಕ್ಕುಟೋಧ್ಯಮಕ್ಕೆ ಬಾರಿ ಹೊಡೆತ ಬಿದಿದ್ದು.

ಬೇಡಿಕೆಯಿಲ್ಲದೇ ಕೋಳಿ ಜೀವಂತವಾಗಿ ಮಣ್ಣಿನಲ್ಲಿ ಹೂಳುತ್ತಿರುವ ಕೋಳಿಫಾರಂ ಮಾಲಿಕ ಶ್ರೀನಿವಾಸ್ 4 ಸಾವಿರ ಜೀವಂತ ಕೋಳಿಗಳ ಮಾರಣಹೋಮಕ್ಕೆ ನಿರ್ಧರಿಸಿದ್ದಾರೆ ಕೋಳಿಗೆ ಬೆಲೆಯಿಲ್ಲದೇ ಬೇಸರ ಗೊಂಡು ಗುಂಡಿ ತೋಡಿ ಹೂಳಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

1 ಕೋಳಿ ಮರಿಗೆ 50 ರೂ. ಹಾಗೂ ದೊಡ್ಡ ಕೋಳಿಗೆ 150 ರೂ. ನಷ್ಟ ಈ ಹಿನ್ನೆಲೆ 4 ಸಾವಿರ ಕೋಳಿ ಮರಿಗಳನ್ನು ಹೂಳಲು ನಿರ್ಧಾರ ಮಾಡಲಾಗಿದ್ದು ಸುಮಾರು ಫಾರಂ ಮಾಲೀಕ 2 ವರೆ ಲಕ್ಷ ರೂ. ನಷ್ಟ ಅನುಭವಿಸುತ್ತಿದ್ದು ಜೆಸಿಬಿ ಮೂಲಕ ಸುಮಾರು 12 ಅಡಿ ಆಳ ಗುಂಡಿ ತೋಡಿ ಕೋಳಿಗಳನ್ನು ಹೂತು ಹಾಕಲಾಗಿದೆ.

ಕರೋನಾ ವೈರಸ್ ದೇಶದ ಜನರು ಸಾಂಕಷ್ಟಕ್ಕೆ ಸಿಲುಕಿದ್ದು ಜಿಲ್ಲೆಯಲ್ಲಿ ಕೋಳಿ ಬೆಳೆ ಬಾರಿ ಕುಸಿತ ಕಂಡ ಹಿನ್ನಲೇಯಲ್ಲಿ ಶಿವಮೊಗ್ಗ ಹಾಗೂ ರಾಜ್ಯದ ಹಲವುಕಡೆಗಳಲ್ಲಿ ಇದೆ ರೀತಿ ಮಾಡಲಾಗಿದೆ ಎಂದು ಕೋಳಿ ಫಾರಂ ಮಾಲೀಕ ಶ್ರೀನಿವಾಸ್ ತಿಳಿಸಿದ್ದಾರೆ.

News by; Raghu Shikari

Admin

Leave a Reply

Your email address will not be published. Required fields are marked *

error: Content is protected !!